ಅನಿಲ್‌ ಅಂಬಾನಿ ವಿರುದ್ಧ ಎಸ್‌ಬಿಐ ವಂಚನೆ ಆರೋಪ

Published : Jul 03, 2025, 04:35 AM IST
anil ambani

ಸಾರಾಂಶ

ಆರ್‌ಕಾಂ ಸಂಸ್ಥೆಯು ಸಾಲವನ್ನು ತೆಗೆದುಕೊಂಡ ಉದ್ದೇಶ ಬಿಟ್ಟು ಬೇರೆ ಕೆಲಸಕ್ಕೆ ಆ ಮೊತ್ತವನ್ನು ಬಳಸಿರುವ ಹಿನ್ನೆಲೆಯಲ್ಲಿ, ಅದನ್ನು ಎಸ್‌ಬಿಐ ವಂಚನೆ ಎಂದು ಪರಿಗಣಿಸಿದ್ದು, ಅದರ ನಿರ್ದೇಶಕ ಅನಿಲ್‌ ಅಂಬಾನಿ ವಿರುದ್ಧ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ವರದಿ ಸಲ್ಲಿಸಿದೆ.

ನವದೆಹಲಿ: ರಿಲಯನ್ಸ್‌ ಕಮ್ಯುನಿಕೇಷನ್‌ (ಆರ್‌ಕಾಂ) ಸಂಸ್ಥೆಯು ಸಾಲವನ್ನು ತೆಗೆದುಕೊಂಡ ಉದ್ದೇಶ ಬಿಟ್ಟು ಬೇರೆ ಕೆಲಸಕ್ಕೆ ಆ ಮೊತ್ತವನ್ನು ಬಳಸಿರುವ ಹಿನ್ನೆಲೆಯಲ್ಲಿ, ಅದನ್ನು ಎಸ್‌ಬಿಐ ವಂಚನೆ ಎಂದು ಪರಿಗಣಿಸಿದ್ದು, ಅದರ ನಿರ್ದೇಶಕ ಅನಿಲ್‌ ಅಂಬಾನಿ ವಿರುದ್ಧ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ವರದಿ ಸಲ್ಲಿಸಿದೆ.

ಈ ಸಂಬಂಧ ಎಸ್‌ಬಿಐ ಕಡೆಯಿಂದ ಜೂ.23ರಂದು ಪತ್ರ ಬಂದಿರುವುದಾಗಿ ಆರ್‌ಕಾಂ ಒಪ್ಪಿಕೊಂಡಿದೆ. ವರದಿಯ ಪ್ರಕಾರ, ಪ್ರಸ್ತುತ ನಷ್ಟದಲ್ಲಿರುವ ಆರ್‌ಕಾಂ ಮತ್ತು ಅದರ ಅಂಗಸಂಸ್ಥೆಗಳು 31,580 ಕೋಟಿ ರು. ಸಾಲ ಪಡೆದಿದ್ದವು. ಆದರೆ ಆ ಮೊತ್ತದ ಶೇ.44ರಷ್ಟನ್ನು(13,667.73 ಕೋಟಿ ರು.) ಸಾಲ ಮರುಪಾವತಿ ಸೇರಿದಂತೆ ಅನ್ಯ ಕೆಲ ಅಗತ್ಯತೆಗಳಿಗೆ ಬಳಕೆ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ವಂಚನೆ ಎಂದು ಪರಿಗಣಿಸಿದ ಎಸ್‌ಬಿಐ, ಅನಿಲ್‌ ಅವರನ್ನು ಹೊಣೆಗಾರರನ್ನಾಗಿಸಿದೆ.

ನಿಯಮದ ಪ್ರಕಾರ, ಬ್ಯಾಂಕುಗಳಿಂದ ಯಾವ ಉದ್ದೇಶಕ್ಕೆ ಸಾಲ ಪಡೆದಿರಲಾಗುತ್ತದೆಯೋ, ಆ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸಬೇಕು.

ಅತ್ತ ದೆನಾ ಬ್ಯಾಂಕ್‌ನಿಂದ ಆರ್‌ಕಾಂ ಪಡೆದಿದ್ದ 250 ಕೋಟಿ ರು. ಸಾಲವನ್ನು ಆರ್‌ಸಲೈಎಲ್‌ಗೆ ಬಳಸಿರುವುದೂ ತಿಳಿದುಬಂದಿದೆ. ಐಐಎಫ್‌ಸಿಎಲ್‌ನಿಂದ ಪಡೆದ 248 ಕೋಟಿ ರು. ಸಾಲದಲ್ಲಿ 63 ಕೋಟಿ ರು.ಅನ್ನು ರಿಲಯನ್ಸ್ ಇನ್ಫ್ರಾಟೆಲ್ ಮತ್ತು 77 ಕೋಟಿ ರು.ಅನ್ನು ಆರ್‌ಐಇಎಲ್‌ಗಳ ಸಾಲ ಮರುಪಾವತಿಗೆ ಬಳಸಿರುವುದೂ ಬಯಲಾಗಿದೆ.

- ಸಾಲದ ಹಣವನ್ನು ಅನ್ಯ ಉದ್ದೇಶಕ್ಕೆ ಆರ್‌ಕಾಂ ಬಳಕೆ - ನಿರ್ದೇಶಕ ಅನಿಲ್‌ ಅಂಬಾನಿ ಹೊಣೆಗಾರ: ಎಸ್‌ಬಿಐ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?