ಬೆಕ್ಕು, ನಾಯಿಗಳಿಗೂ ಕೊರೋನಾ ಭೀತಿ: ಹಂದಿ, ಕೋಳಿಗೆ ಸೋಂಕು ಸಾಧ್ಯತೆ ಕಡಿಮೆ!

By Suvarna NewsFirst Published Dec 12, 2020, 11:32 AM IST
Highlights

 ಕೇವಲ ಮನುಷ್ಯರಷ್ಟೇ ಅಲ್ಲ ಕೆಲವೊಂದು ಪ್ರಾಣಿಗಳು ಕೂಡ ಕೊರೋನಾ| ಬೆಕ್ಕು, ನಾಯಿಗಳಿಗೂ ಕೊರೋನಾ ಭೀತಿ| ಹಂದಿ, ಕೋಳಿಗೆ ಸೋಂಕು ಸಾಧ್ಯತೆ ಕಡಿಮೆ: ಅಧ್ಯಯನ

ಲಂಡನ್(ಡಿ.12)‌: ಕೇವಲ ಮನುಷ್ಯರಷ್ಟೇ ಅಲ್ಲ ಕೆಲವೊಂದು ಪ್ರಾಣಿಗಳು ಕೂಡ ಕೊರೋನಾ ಸೋಂಕಿಗೆ ತುತ್ತಾಗಬಲ್ಲವು. ಮನುಷ್ಯರ ಜೊತೆ ಹೆಚ್ಚು ಒಡನಾಟ ಹೊಂದಿರುವ ಬೆಕ್ಕು, ನಾಯಿಗಳಿಗೂ ಸೋಂಕು ತಗುಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.

ಪಿಎಲ್‌ಒಎಸ್‌ ಕಂಪ್ಯುಟೇಷನಲ್‌ ಬಯೋಲಜಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಫೆರೆಟ್‌ (ಮುಂಗುಸಿಯನ್ನು ಹೋಲುವ ಪ್ರಾಣಿ), ಕಾಡು ಬೆಕ್ಕು, ಬೆಕ್ಕು, ನಾಯಿಗಳು ಸಾರ್ಸ್‌ ಕೋವ್‌-2 ವೈರಸ್‌ಗೆ ತುತ್ತಾಗಿದ್ದವು. ಹೀಗಾಗಿ ಈ ಪ್ರಾಣಿಗಳಿಗೆ ಕೊರೋನಾ ವೈರಸ್‌ ತಗುಲುವ ಸಾಧ್ಯತೆ ಇದ್ದೇ ಇದೆ. ಆದರೆ, ಇಂತಹ ಸಾಧ್ಯತೆ ಅತ್ಯಲ್ಪ. ಅದೇ ರೀತಿ ಬಾತುಕೊಳಿ, ಇಲಿ, ಹೆಗ್ಗಣ, ಹಂದಿ, ಕೋಳಿಗಳಿಗೆ ಕೊರೋನಾ ವೈರಸ್‌ ತಗಲುವ ಸಾಧ್ಯತೆ ತೀರಾ ಕಡಿಮೆ ಎಂದು ಅಧ್ಯಯನ ತಿಳಿಸಿದೆ.

ಪ್ರಾಣಿಗಳಲ್ಲಿ ಕೊರೋನಾ ವೈರಸ್‌ನ ಮುಳ್ಳಿನಂತಹ ಪ್ರೋಟಿನ್‌ ಕಣಗಳು ವಿವಿಧ ರೀತಿಯ ಪ್ರಾಣಿಗಳಲ್ಲಿ ಹೇಗೆ ವರ್ತಿಸುತ್ತವೆ ಎಂಬುದನ್ನು ತಿಳಿಯಲು ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. ಈ ಪ್ರಕಾರ ಪ್ರಾಣಿಗಳ ಪೈಕಿ ಮಾನವನ ಸಂಪರ್ಕಕ್ಕೆ ಬರುವ ಪೆರೆಟ್‌ಗಳು ಕೊರೋನಾ ವೈರಸ್‌ಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿದೆ ಎಂದು ವರದಿ ತಿಳಿಸಿದೆ.

click me!