ಕೋಲ್ಕತ್ತಾ ವೈದ್ಯೆಯ ರೇಪ್‌ & ಮರ್ಡರ್‌ ಕೇಸ್‌: ಸಂಜಯ್‌ ರಾಯ್‌ ದೋಷಿ ಎಂದ ಕೋರ್ಟ್‌, 20ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

Published : Jan 18, 2025, 03:08 PM ISTUpdated : Jan 18, 2025, 03:15 PM IST
ಕೋಲ್ಕತ್ತಾ ವೈದ್ಯೆಯ ರೇಪ್‌ & ಮರ್ಡರ್‌ ಕೇಸ್‌: ಸಂಜಯ್‌ ರಾಯ್‌ ದೋಷಿ ಎಂದ ಕೋರ್ಟ್‌, 20ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

ಸಾರಾಂಶ

ಕೋಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜಯ್ ರಾಯ್‌ನನ್ನು ದೋಷಿ ಎಂದು ಘೋಷಿಸಲಾಗಿದೆ. ವಿಧಿವಿಜ್ಞಾನ ವರದಿಗಳು ಮತ್ತು ಸಂತ್ರಸ್ಥೆಯ ದೇಹದ ಮೇಲೆ ಸಂಜಯ್‌ನ ಡಿಎನ್‌ಎ ಪತ್ತೆಯಾದ ಆಧಾರದ ಮೇಲೆ ಈ ತೀರ್ಪು ನೀಡಲಾಗಿದೆ. ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ನವದೆಹಲಿ (ಜ.18): ಕೋಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜಯ್ ರಾಯ್‌ನನ್ನು ಸೀಲ್ಡಾ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. ನ್ಯಾಯಮೂರ್ತಿ ಅನಿರ್ಬನ್ ದಾಸ್ ಮಧ್ಯಾಹ್ನ 2.30 ಕ್ಕೆ ತೀರ್ಪು ಪ್ರಕಟ ಮಾಡಿದೆ. ಸೋಮವಾರ (ಜನವರಿ 20) ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು. 162 ದಿನಗಳ ನಂತರ ನ್ಯಾಯಾಲಯವು ತನ್ನ ತೀರ್ಪು ನೀಡಿದೆ. 2024ರ ಆಗಸ್ಟ್‌ 9 ರಂದು ರೇಪ್‌ & ಮರ್ಡರ್‌ಕೇಸ್‌ ನಡೆದಿದ್ದರೆ, ಜನವರಿ 18 ರಂದು ತೀರ್ಪು ಹೊರಬಿದ್ದಿದೆ. ಸಿಬಿಐ ಆರೋಪಿ ಸಂಜಯ್‌ಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದೆ. ಕೋರ್ಟ್‌ ತೀರ್ಪು ತಿಳಿಸಿದ ಬೆನ್ನಲ್ಲಿಯೇ ಕೋರ್ಟ್‌ ರೂಮ್‌ನಲ್ಲಿಯೇ ಮಾತನಾಡಿದ ಸಂಜಯ್‌ ರಾಯ್‌, 'ನನ್ನನ್ನು ಈ ಕೇಸ್‌ನಲ್ಲಿ ಸಿಕ್ಕಿಹಾಕಿಸಲಾಗಿದೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಈ ಕೃತ್ಯ ಮಾಡಿದವನನ್ನು ಸುಮ್ಮನೆ ಬಿಟ್ಟಿದ್ದಾರೆ. ಐಪಿಎಸ್‌ ಅಧಿಕಾರಿಯೊಬ್ಬ ಇದರಲ್ಲಿ ಭಾಗಿಯಾಗಿದ್ದಾನೆ' ಎಂದು ಹೇಳಿದ್ದಾರೆ.

2024ರ ಆಗಸ್ಟ್‌ 8-9ರ ಮಧ್ಯರಾತ್ರಿಯ ಸಮಯದಲ್ಲಿ ಟ್ರೇನಿ ವೈದ್ಯೆಯ ಮೇಲೆ ರೇಪ್‌ & ಮರ್ಡರ್‌ ಆಗಿತ್ತು. ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ನಡೆದಿದ್ದ ಈ ಘಟನೆಗೆ ದೇಶವ್ಯಾಪಿ ಅಕ್ರೋಶ ವ್ಯಕ್ತವಾಗಿತ್ತು. ಆಗಸ್ಟ್‌ 9 ರ ಮಧ್ಯರಾತ್ರಿ ವೈದ್ಯೆಯ ಶವ ಸೆಮಿನಾರ್‌ ಹಾಲ್‌ನಲ್ಲಿ ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಪೊಲೀಸರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್‌ ರಾಯ್‌ನನ್ನು ಆಗಸ್ಟ್‌ 10 ರಂದು ಬಂಧನ ಮಾಡಿತ್ತು.
ಸಿಬಿಐ 2024ರ ಡಿಸೆಂಬರ್ 10 ರಂದು ಸುಪ್ರೀಂ ಕೋರ್ಟ್‌ಗೆ ಸ್ಥಿತಿ ವರದಿಯನ್ನು ನೀಡಿತ್ತು. ಅದರಲ್ಲಿ ಸೀಲ್ಡಾ ವಿಚಾರಣಾ ನ್ಯಾಯಾಲಯದಲ್ಲಿ ನಿಯಮಿತ ವಿಚಾರಣೆ ನಡೆಯುತ್ತಿದ್ದು, 81 ಸಾಕ್ಷಿಗಳಲ್ಲಿ 43 ಜನರನ್ನು ಪ್ರಶ್ನಿಸಲಾಗಿದೆ ಎಂದು ಹೇಳಲಾಗಿತ್ತು.

ಆರ್‌ಜಿ ಕರ್ ಘಟನೆ ಸಾಮೂಹಿಕ ಬಲತ್ಕಾರವಲ್ಲ, ಆರೋಪಿ ಸಂಜಯ್ ಕೃತ್ಯ ಚಾರ್ಜ್‌ಶೀಟ್‌ನಲ್ಲಿ ಬಯಲು!

ಶನಿವಾರದ ತೀರ್ಪಿಗೂ ಮುನ್ನ, ಸಂತ್ರಸ್ತೆಯ ತಂದೆ ಆರೋಪಿಗಳಿಗೆ ಶಿಕ್ಷೆಯನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ, ಆದರೆ ನಮಗೆ ನ್ಯಾಯ ಸಿಗುವವರೆಗೂ ನಾವು ನ್ಯಾಯಾಲಯದ ಬಾಗಿಲು ತಟ್ಟುತ್ತಲೇ ಇರುತ್ತೇವೆ ಎಂದಿದ್ದರು.

ಕೋಲ್ಕತಾ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ವೈದ್ಯೆ ರೇಪ್‌, ಕೊಲೆ: ಇಂದು ತೀರ್ಪು

ತೀರ್ಪಿಗೆ ಸಂಬಂಧಪಟ್ಟ ಮೂರು ದೊಡ್ಡ ವಿಚಾರಗಳು

1. ನಿರ್ಧಾರದ ಆಧಾರವೆಂದರೆ ವಿಧಿವಿಜ್ಞಾನ ವರದಿ: ಸಂಜಯ್ ರಾಯ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸಿದ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ನ್ಯಾಯಾಲಯವು ತನ್ನ ಶಿಕ್ಷೆಯನ್ನು ಆಧರಿಸಿದೆ. ಅಪರಾಧದ ಸ್ಥಳದಲ್ಲಿ ಮತ್ತು ಸಂತ್ರಸ್ಥೆಯ ದೇಹದ ಮೇಲೆ ಸಂಜಯ್‌ನ ಡಿಎನ್‌ಎ ಪತ್ತೆಯಾಗಿದೆ. ಭಾರತೀಯ ದಂಡ ಸಂಹಿತೆ ಕಾಯ್ದೆಯ ಸೆಕ್ಷನ್ 64, 66 ಮತ್ತು 103(1) ರ ಅಡಿಯಲ್ಲಿ ರಾಯ್ ತಪ್ಪಿತಸ್ಥನೆಂದು ಕಂಡುಬಂದಿದೆ.

2. ಗರಿಷ್ಠ ಶಿಕ್ಷೆ ಮರಣದಂಡನೆ: ನ್ಯಾಯಮೂರ್ತಿ ಅನಿರ್ಬನ್ ದಾಸ್ ಈ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ಮರಣದಂಡನೆಯಾಗಬಹುದು ಎಂದು ಹೇಳಿದರು. ಕನಿಷ್ಠ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿರುತ್ತದೆ.

3. ಅಪರಾಧಿ ಸಂಜಯ್‌ಗೆ ಮಾತನಾಡಲು ಅವಕಾಶ: ಪ್ರಕರಣದಲ್ಲಿ ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಅಪರಾಧಿ ಸಂಜಯ್ ಹೇಳಿದಾಗ, ಶಿಕ್ಷೆ ವಿಧಿಸುವ ಮೊದಲು ಅವನಿಗೆ ಮಾತನಾಡಲು ಅವಕಾಶ ನೀಡಲಾಗುವುದು ಎಂದು ನ್ಯಾಯಮೂರ್ತಿ ಅನಿರ್ಬನ್ ದಾಸ್ ಹೇಳಿದ್ದಾರೆ.

ತೀರ್ಪಿನ ಮೊದಲು ಸಂತ್ರಸ್ಥೆ ತಂದೆ ಹೇಳಿದ ನಾಲ್ಕು ಮಾತುಗಳು

ನಮ್ಮ ವಕೀಲರು ಮತ್ತು ಸಿಬಿಐ ನ್ಯಾಯಾಲಯಕ್ಕೆ ಹೋಗಬೇಡಿ ಎಂದು ನಮಗೆ ಹೇಳಿದ್ದಾರೆ. ಸಿಬಿಐ ತೀವ್ರವಾಗಿ ಪ್ರಯತ್ನಿಸುತ್ತಿಲ್ಲ. ಯಾರೋ ಒಬ್ಬರು ಖಂಡಿತವಾಗಿಯೂ ಭಾಗಿಯಾಗಿದ್ದಾರೆ. ಇತ್ತೀಚಿನ ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ನನಗೆ ಏನೂ ತಿಳಿದಿಲ್ಲ.

ಸಿಬಿಐ ನನ್ನನ್ನು ಎಲ್ಲಿಗೂ ಕರೆದಿಲ್ಲ. ಅವರು ನಮ್ಮ ಮನೆಗೆ ಒಂದು ಅಥವಾ ಎರಡು ಬಾರಿ ಬಂದರು ಆದರೆ ನಾವು ಅವರನ್ನು ತನಿಖೆಯ ಬಗ್ಗೆ ಕೇಳಿದಾಗಲೆಲ್ಲಾ, ಅವರು ಯಾವಾಗಲೂ ತನಿಖೆ ನಡೆಯುತ್ತಿದೆ ಎಂದು ಹೇಳುತ್ತಿದ್ದರು.

ನನ್ನ ಮಗಳ ಕುತ್ತಿಗೆಯಲ್ಲಿ ಕಚ್ಚಿದ ಗುರುತುಗಳಿದ್ದವು, ಆದರೆ ಅಲ್ಲಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯು ಯಾವುದೇ ದೃಢವಾದ ಪುರಾವೆಗಳನ್ನು ಒದಗಿಸಲಿಲ್ಲ.

ಡಿಎನ್‌ಎ ವರದಿಯು ಅಲ್ಲಿ 4 ಪುರುಷರು ಮತ್ತು 2 ಮಹಿಳೆಯರು ಹಾಜರಿದ್ದರು ಎಂದು ಹೇಳುತ್ತದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆಯಾಗಬೇಕೆಂದು ನಾವು ಬಯಸುತ್ತೇವೆ.

ಗ್ಯಾಂಗ್‌ರೇಪ್‌ ಆಗಿಲ್ಲ ಎಂದಿದ್ದ ಸಿಬಿಐ: ಸಿಬಿಐ ಅಕ್ಟೋಬರ್ 7, 2024 ರಂದು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಕೆ ಮಾಡಿತ್ತು. ಪ್ರಕರಣದಲ್ಲಿ ಸಂಜಯ್ ಅವರನ್ನು ಏಕೈಕ ಆರೋಪಿ ಎಂದು ಹೆಸರಿಸಿತ್ತ. ತರಬೇತಿ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಖಚಿತಪಡಿಸಿತ್ತು.

ಆರೋಪಪಟ್ಟಿಯಲ್ಲಿ 100 ಸಾಕ್ಷಿಗಳ ಹೇಳಿಕೆಗಳು, 12 ಪಾಲಿಗ್ರಾಫ್ ಪರೀಕ್ಷಾ ವರದಿಗಳು, ಸಿಸಿಟಿವಿ ದೃಶ್ಯಾವಳಿಗಳು, ವಿಧಿವಿಜ್ಞಾನ ವರದಿಗಳು, ಮೊಬೈಲ್ ಕರೆ ವಿವರಗಳು ಮತ್ತು ಸ್ಥಳ ಸೇರಿವೆ. ಸಂತ್ರಸ್ಥೆಯ ದೇಹದಿಂದ ಹೊರತೆಗೆಯಲಾದ ವೀರ್ಯ ಮಾದರಿ ಮತ್ತು ರಕ್ತವು ಆರೋಪಿಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಅದು ಹೇಳಿದೆ.

ವಿಧಿವಿಜ್ಞಾನ ತನಿಖೆಯ ನಂತರ ಅಪರಾಧ ಸ್ಥಳದಲ್ಲಿ ಕಂಡುಬಂದ ಸಣ್ಣ ಕೂದಲು ಕೂಡ ಆರೋಪಿಯ ಕೂದಲಿನೊಂದಿಗೆ ಹೊಂದಿಕೆಯಾಯಿತು. ಸಂಜಯ್‌ನ ಇಯರ್‌ಫೋನ್ ಮೊಬೈಲ್ ಬ್ಲೂಟೂತ್‌ಗೆ ಸಂಪರ್ಕಗೊಂಡಿತ್ತು. ಇದನ್ನು ಪ್ರಮುಖ ಪುರಾವೆಯಾಗಿಯೂ ಪರಿಗಣಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌