
ಸಂಭಲ್ (ಉತ್ತರ ಪ್ರದೇಶ): ಕೆಲ ದಿನಗಳ ಹಿಂದೆ ಮಂದಿರ ಮತ್ತು ಮಸೀದಿ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದ ಸಂಭಲ್ ಪ್ರದೇಶದಲ್ಲಿ ಉತ್ಕನನ ನಡೆಸುವ ವೇಳೆ ಪುರಾತನ ಕೊಳ ಮತ್ತು ಕಾಲುವೆ ಪತ್ತೆಯಾಗಿದೆ.
ಇಲ್ಲಿನ ಚಂದೌಸಿ ಪ್ರದೇಶದ ಲಕ್ಷ್ಮಣ್ ಗಂಜ್ ಎಂಬಲ್ಲಿ ಉತ್ಕನನ ನಡೆದಿದ್ದು, 400 ಚದರ ಮೀಟರ್ ವಿಸ್ತೀರ್ಣದ ಸುಮಾರು 125-150 ವರ್ಷ ಹಳೆಯ ಬಾವಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿ.13ರಂದು ಸ್ಥಳೀಯ ಪಾಲಿಕೆ ನಡೆಸಿದ ಒತ್ತುವರಿ ತೆರವು ವೇಳೆ ದೇಗುಲದ ಅವಶೇಷ ಪತ್ತೆಯಾಗಿತ್ತು. ಹೀಗಾಗಿ ಕೈಗೊಂಡಿದ್ದ ಉತ್ಕನನದ ವೇಳೆ ಕೊಳ, ಕಾಲುವೆ, ದೇಗುಲದ ಅವಶೇಷ, ಮುರಿದ ವಿಗ್ರಹಗಳು ಸಿಕ್ಕಿವೆ. ಇಲ್ಲಿ 46 ವರ್ಷಗಳ ಹಿಂದೆಯೇ ದೇಗುಲವಿತ್ತು. ಈ ದೇಗುಲವನ್ನು ಬಿಲಾರಿ ರಾಜನ ಅಜ್ಜ ಕಟ್ಟಿಸಿದ್ದಾರೆಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ದಾವೋಸ್ ಶೃಂಗಸಭೆಗೆ ಡಿಕೆಶಿ ಸೇರಿ ಹಲ ಗಣ್ಯರು
ನವದೆಹಲಿ: ಮುಂದಿನ ತಿಂಗಳು ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಜೊತೆಗೆ ಭಾರತದ 100 ಕಂಪನಿಗಳ ಸಿಇಒಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಹೋಗಲಿದ್ದಾರೆ. 2025ರ ಜನವರಿಯಲ್ಲಿ ನಡೆಯಲಿರುವ 5 ದಿನಗಳ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಕೂಡ ಭಾಗವಹಿಸಲಿದ್ದಾರೆ. ಜತೆಗೆ, ಕೆಲ ಕೇಂದ್ರ ಸಚಿವರೂ ತೆರಳಲಿದ್ದು, ಅವರ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ