ಚಾಟ್‌ಜಿಪಿಟಿ ಹಿಂದಿಕ್ಕಿ ದಾಖಲೆ ಬರೆದ ಸದ್ಗುರು ಮಿರಾಕಲ್ ಮೈಂಡ್ ಆ್ಯಪ್, ಏನಿದೆ ಇದರಲ್ಲಿ?

Published : Mar 05, 2025, 01:13 PM ISTUpdated : Mar 05, 2025, 02:06 PM IST
ಚಾಟ್‌ಜಿಪಿಟಿ ಹಿಂದಿಕ್ಕಿ ದಾಖಲೆ ಬರೆದ ಸದ್ಗುರು ಮಿರಾಕಲ್ ಮೈಂಡ್ ಆ್ಯಪ್, ಏನಿದೆ ಇದರಲ್ಲಿ?

ಸಾರಾಂಶ

ಸದ್ಗುರು ಜಗ್ಗಿವಾಸುದೇವ್ ಅವರ ಮಿರಾಕಲ್ ಆಫ್ ಮೈಂಡ್ ಆ್ಯಪ್ ಹೊಸ ದಾಖಲೆ ಬರೆದಿದೆ. ವಿಶೇಷ ಅಂದರೆ ಎಐ ದೈತ್ಯ ಎಂದೇ ಗುರುತಿಸಿಕೊಂಡಿರುವ ಚಾಟ್‌ಜಿಪಿಯನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲ ನಿರ್ಮಿಸಿದೆ. 

ಬೆಂಗಳೂರು(ಮಾ.05) ಸದ್ಗುರು ಜಗ್ಗಿ ವಾಸುದೇವ್ ಹೊರ ತಂದಿರುವ ಮಿರಾಕಲ್ ಆಫ್ ಮೈಂಡ್ ಆ್ಯಪ್ ಹೊಸ ದಾಖಲೆ ಬರೆದಿದೆ. ಧ್ಯಾನದ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸದ್ಗು ಮಿರಾಕಲ್ ಮೈಂಡ್ ಆ್ಯಪ್ ಹೊರತಂದಿದ್ದಾರೆ. ಅತ್ಯಂತ ಸರಳ ಹಾಗೂ ಸುಲಭ ವಿಧಾನದ ಮೂಲಕ ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಈ ಆ್ಯಪ್ ನೆರವಾಗುತ್ತಿದೆ. ಈ ಮಿರಾಕಲ್ ಮೈಡ್ ಆ್ಯಪ್ ಇದೀಗ ಕೇವಲ 15 ಗಂಟೆಯಲ್ಲಿ ಬರೋಬ್ಬರಿ 1 ಮಿಲಿಯನ್ ಡೌನ್ಲೋಡ್ ಕಂಡಿದ. ಈ ಮೂಲಕ ಚಾಟ್‌ಜಿಪಿ ಡೌನ್ಲೋಡ್ ದಾಖಲೆಯನ್ನು ಮುರಿದಿದೆ.

ಚಾಟ್‌ಜಿಪಿಟಿ 1 ಮಿಲಿಯನ್ ಡ್ಲೌನೋಡ್ ಆಗಲು 4 ದಿನ ತೆಗೆದುಕೊಂಡಿದೆ. ಆದರೆ ಸದ್ಗುರು ಅವರ ಮಿರಾಕಲ್ ಮೈಂಡ್ ಆ್ಯಪ್ ಕೇವಲ 15 ಗಂಟೆಯಲ್ಲಿ ಈ ಸಾಧನೆ ಮಾಡಿದೆ. ಮಿರಾಕಲ್ ಆಫ್ ಮೈಂಡ್ ಆ್ಯಪ್‌ನ ಸರಳತೆ ಹಾಗೂ ಪರಿಣಾಮಕಾರಿಯಾಗಿ ಮೆಂಟಲ್ ಫಿಟ್ನೆಸ್‌ಗೆ ನೆರವಾಗುವ ಕಾರಣದಿಂದ ಈ ಆ್ಯಪ್ ಭಾರತ ಮಾತ್ರವಲ್ಲ ಬರೋಬ್ಬರಿ 20 ದೇಶದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಭಾರತ, ಅಮೆರಿಕ, ಕೆನಾಡ, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ 20 ದೇಶಗಳಲ್ಲಿ ಈ ಮಿರಾಕಲ್ ಮೈಂಡ್ ಆ್ಯಪ್ ಡೌನ್ಲೋಡ್ ಆಗಿದೆ. ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಮೆದುಳಿನ ಶಕ್ತಿಗೆ ಸದ್ಗುರು ಸೂಚಿಸಿದ 5 ಆಹಾರಗಳು

ಮಿರಾಕಲ್ ಮೈಂಡ್ ಆ್ಯಪ್‌ ಕೇವಲ 7 ನಿಮಿಷಗಳಲ್ಲಿ ಮೆಡಿಟೇಶನ್ ಕುರಿತು ಉತ್ತಮ ಸಲಹೆ ಹಾಗೂ ಪ್ರಯೋಗಿವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮಿರಾಕಲ್ ಮೈಂಡ್ ಆ್ಯಪ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಹೊಂದಿದೆ. ಹೀಗಾಗಿ ಪ್ರತಿಯೊಬ್ಬರಿಗೆ ಅವರ ಅನುಕೂಲ, ಅವರ ಆರೋಗ್ಯಕ್ಕೆ ಸೂಕ್ತ ಸಲಹೆ ನೀಡಲಿದೆ. ಇಷ್ಟೇ ಅಲ್ಲ ಸದ್ಗುರು ಅವರ ಆಧ್ಯಾತ್ಮಿಕ ಜ್ಞಾನ ಬಂಢಾರವನ್ನು, ಅರಿವಿನ ಮಾಹಿತಿಗಳನ್ನು ಈ ಮೂಲಕ ಪಡೆದುಕೊಳ್ಳಬಹುದು. ಚಾಟ್‌ಜಿಪಿಟಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿದರೆ, ಮಿರಾಕಲ್ ಮೈಂಡ್ ನಿಮ್ಮೊಳಗಿನ ಪ್ರಶ್ನೆಗಳಿಗೆ,ನಿಮ್ಮೊಳಗಿನ ನಿಮ್ಮನ್ನು ಕಂಡುಕೊಳ್ಳಲು ಹಾಗೂ ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗಲಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.

 

 

ಸದ್ಯ ವಿಶ್ವದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಸೂಕ್ತ ಸಲಹೆ, ಮಾರ್ಗದರ್ಶನ ಹಾಗೂ ಧ್ಯಾನದ ಮೂಲಕ ಮಾನಿಸಕವಾಗಿ ಆರೋಗ್ಯವಾಗಿರಲು ಸಾಧ್ಯವಿದೆ. 2020ರ ವೇಳೆಗೆ ವಿಶ್ವದಲ್ಲಿ ಶೇಕಡಾ 30 ರಿಂದ 33ದಷ್ಟು ಜನರು ಮಾನಸಿಕ ಸಮಸ್ಯೆ ಎದುರಿಸಲಿದ್ದಾರೆ ಎಂಬುದು ಅಧ್ಯಯನ ವರದಿ. ಭಾರತದಲ್ಲಿ ಸದ್ಯ 60 ರಿಂದ 70 ಮಿಲಿಯನ್ ಜನ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ. ಈ ಸಮಸ್ಯೆಗಳಿಗೆ ಸದ್ಗುರು ಮಿರಾಕಲ್ ಮೈಂಡ್ ನೆರವಾಗಲಿದೆ ಎಂದು ಸದ್ಗುರು ಹೇಳಿದ್ದಾರೆ.

ಒಯೋ ಸಿಇಒ ರಿತೇಶ್ ಅಗರ್ವಾಲ್ ಸೇರಿದಂತೆ ಹಲವ ಉದ್ಯಮಿಗಳು ಮಿರಾಕಲ್ ಮೈಂಡ್ ಆ್ಯಪ್ ಡೌನ್ಲೋಡ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧ್ಯಾನ, ಸಲಹೆ, ಮಾರ್ಗದರ್ಶನ ಕುರಿತು ಮಾತನಾಡಿದ್ದಾರೆ. ಆ್ಯಪ್ ಸಂಪೂರ್ಣವಾಗಿ ಉಚಿತವಾಗಿದೆ. ಇಂಗ್ಲೀಷ್, ಹಿಂದಿ, ಸ್ಪಾನಿಶ್, ರಷ್ಯಾ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಿದೆ.

ಸದ್ಗುರು ಕೇಂದ್ರದಲ್ಲಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಚರ್ಚೆ ಮಾಡಿಲ್ಲ: ಬಸವರಾಜ ಬೊಮ್ಮಾಯಿ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ