Pranavah: ಸಂಸ್ಕೃತ ಭಾಷೆ ಭಾರತದ ಆತ್ಮ- ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

Published : Apr 21, 2026, 01:19 PM IST
RSS Chief Mohan Bhagwat opens Sanskrit Bharati Pranav Centre in New Delhi

ಸಾರಾಂಶ

ದೆಹಲಿಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಸ್ಕೃತ ಭಾರತಿಯ 'ಪ್ರಣವ್' ಅಂತರರಾಷ್ಟ್ರೀಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ಸಂಸ್ಕೃತವು ಭಾರತದ ಆತ್ಮವಾಗಿದ್ದು, ಸಂಭಾಷಣೆಯ ಮೂಲಕ ಅದನ್ನು ಸುಲಭವಾಗಿ ಕಲಿಯಬಹುದು ಎಂದು ಪ್ರತಿಪಾದಿಸಿದರು.

ದೆಹಲಿಯಲ್ಲಿ ಅಕ್ಷಯ ತೃತೀಯದ ಶುಭ ದಿನದಂದು ಒಂದು ವಿಶೇಷ ಸಮಾರಂಭ ನಡೆಯಿತು. ಸಂಸ್ಕೃತ ಭಾರತಿಯ ಅಂತರರಾಷ್ಟ್ರೀಯ ತರಬೇತಿ ಕೇಂದ್ರವಾದ 'ಪ್ರಣವ್' ಎಂಬ ಹೊಸ ಕಚೇರಿಯನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಉದ್ಘಾಟಿಸಿದರು. ಇದು ಕೇವಲ ಒಂದು ಕಚೇರಿಯಲ್ಲ, ಭಾರತದ ಜ್ಞಾನವನ್ನು ಜಗತ್ತಿಗೆ ಸಾರುವ ದೊಡ್ಡ ಕೇಂದ್ರ ಎಂದು ಅವರು ಬಣ್ಣಿಸಿದರು.

ಭಾರತ ಕೇವಲ ಒಂದು ಭೂಪ್ರದೇಶವಲ್ಲ:

ಭಾಗವತ್ ಅವರು ಮಾತನಾಡುತ್ತಾ ಒಂದು ಅದ್ಭುತವಾದ ಮಾತು ಹೇಳಿದರು; ಅದೇನೆಂದರೆ 'ಭಾರತ ಎಂದರೆ ಕೇವಲ ನಕ್ಷೆಯಲ್ಲಿರುವ ಒಂದು ದೇಶವಲ್ಲ. ನಮ್ಮ ದೇಶದ ನಿಜವಾದ ಸೌಂದರ್ಯ ಮತ್ತು ಸಂಸ್ಕೃತಿಯನ್ನು ತಿಳಿಯಬೇಕಾದರೆ, ನಮಗೆ 'ಸಂಸ್ಕೃತದ ಅರಿವಿರಬೇಕು' ಸಂಸ್ಕೃತವು ಭಾರತದ ವಿವಿಧ ಭಾಷೆಗಳನ್ನು ಒಂದಕ್ಕೊಂದು ಬೆಸೆಯುವ ಗಟ್ಟಿಯಾದ ಸೇತುವೆಯಿದ್ದಂತೆ ಎಂಬುದು ಅವರ ಅಭಿಪ್ರಾಯಪಟ್ಟರು.

ಸಂಸ್ಕೃತ ಕಲಿಯುವುದು ಸುಲಭ

ಸಂಸ್ಕೃತ ಕಲಿಯುವುದು ಕಷ್ಟ ಅಂದುಕೊಂಡವರಿಗೆ ಅವರು ಒಂದು ಸರಳ ಉಪಾಯ ನೀಡಿದರು. 'ಸಂಸ್ಕೃತವನ್ನು ಸುಲಭವಾಗಿ ಕಲಿಯಲು 'ಮಾತುಕತೆ (ಸಂಭಾಷಣೆ)ಅತ್ಯುತ್ತಮ ಮಾರ್ಗ ಎಂದರು. ಕಳೆದ ಕೆಲವು ವರ್ಷಗಳಿಂದ ಜನರ ಆಸಕ್ತಿ ಹೆಚ್ಚುತ್ತಿದ್ದು, ಸಂಸ್ಕೃತವನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ನಮ್ಮ ಜವಾಬ್ದಾರಿ ಎಂದು ನೆನಪಿಸಿದರು.

ವಿಶ್ವಕ್ಕೆ ಹರಡಲಿರುವ ಜ್ಞಾನದ ಬೆಳಕು

ಈ ಹೊಸ ಕೇಂದ್ರವು ವಿಶ್ವದ 22 ದೇಶಗಳಲ್ಲಿ ಸಂಸ್ಕೃತವನ್ನು ಪ್ರಚಾರ ಮಾಡಲು ಮುಖ್ಯ ಕೇಂದ್ರವಾಗಲಿದೆ. ಈಗಾಗಲೇ ದೇಶಾದ್ಯಂತ ಸಾವಿರಾರು ಕೇಂದ್ರಗಳಿದ್ದು, ಶೀಘ್ರದಲ್ಲೇ ಪ್ರತಿ ಹಳ್ಳಿಗೂ ಸಂಸ್ಕೃತವನ್ನು ತಲುಪಿಸುವ ಗುರಿ ಹೊಂದಲಾಗಿದೆ ಎಂದು ಸಂಸ್ಕೃತ ಭಾರತಿಯ ಶ್ರೀಶ ದೇವಪೂಜಾರಿ ತಿಳಿಸಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿ.ಎಲ್. ಸಂತೋಷ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗೌರವಿಸಲಾಯಿತು. ಮೈ ಹೋಮ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜೆ. ರಂಜಿತ್ ರಾವ್ ಅವರನ್ನು ಮೋಹನ್ ಭಾಗವತ್ ಅವರು ವಿಶೇಷವಾಗಿ ಸನ್ಮಾನಿಸಿದರು.

ಒಟ್ಟಾರೆಯಾಗಿ, ಈ ಸಮಾರಂಭವು ಭಾರತದ ಪುರಾತನ ಭಾಷೆಗೆ ಆಧುನಿಕ ರೂಪ ನೀಡಿ, ಅದನ್ನು ಜಗತ್ತಿನಾದ್ಯಂತ ಪಸರಿಸುವ ಹೊಸ ಸಂಕಲ್ಪಕ್ಕೆ ಸಾಕ್ಷಿಯಾಯಿತು.

ನಮಗೆ ಉಸಿರಾಟ ಹೇಗೆ ಸಹಜವೋ, ಸಂಸ್ಕೃತದ ಸೇವೆಯೂ ಅಷ್ಟೇ ಸಹಜವಾಗಿ ನಿರಂತರವಾಗಿ ನಡೆಯಬೇಕು

ಮೋಹನ್ ಭಾಗವತ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಚಿ ಚರ್ಚ್‌ನಲ್ಲಿ ಮೊಣಕಾಲೂರಿ ನಡೆದು ಪ್ರಾರ್ಥನೆ ಮಾಡಿದ ನಟ ವಿಜಯ್: ಟ್ರೋಲ್ ಆಗಿದ್ದೇಕೆ?
ಕುಂಕುಮ, ಬಿಂದಿ ನಿರಾಕರಿಸ್ತಿರೋ Lenskart ಬೆವರಿಳಿಸಿದ 'ಸುಪ್ರೀಂ' ವಕೀಲೆ ನಾಜಿಯಾ ಖಾನ್​! Video Viral