ಹಿರಿಯ ನಾಗರಿಕರ ಟಿಕೆಟ್‌ ವಿನಾಯ್ತಿ ರದ್ದು ಬಳಿಕ ರೈಲ್ವೆಗೆ ₹5800 ಕೋಟಿ ಹೆಚ್ಚು ಆದಾಯ

By Kannadaprabha NewsFirst Published Apr 2, 2024, 10:13 AM IST
Highlights

ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ವಿನಾಯ್ತಿ ದರದ ಟಿಕೆಟ್‌ ರದ್ದು ಮಾಡಿದ ಬಳಿಕ ಇಲಾಖೆಗೆ ₹5,875 ಕೋಟಿ ಹೆಚ್ಚಿನ ಆದಾಯ ಹರಿದುಬಂದಿದೆ. ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ರೈಲ್ವೆ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ನವದೆಹಲಿ: ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ವಿನಾಯ್ತಿ ದರದ ಟಿಕೆಟ್‌ ರದ್ದು ಮಾಡಿದ ಬಳಿಕ ಇಲಾಖೆಗೆ ₹5,875 ಕೋಟಿ ಹೆಚ್ಚಿನ ಆದಾಯ ಹರಿದುಬಂದಿದೆ. ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ರೈಲ್ವೆ ಇಲಾಖೆ ಮಾಹಿತಿ ಹಂಚಿಕೊಂಡಿದೆ.

2020ರ ಮಾ.20ರಂದು ಕೋವಿಡ್‌ ಲಾಕ್‌ಡೌನ್‌ನಿಂದ ರೈಲುಗಳಲ್ಲಿ ಹಿರಿಯ ನಾಗರಿಕರ ಟಿಕೆಟ್‌ ವಿನಾಯ್ತಿಯನ್ನು ರದ್ದುಗೊಳಿಸಲಾಗಿತ್ತು. ಅಂದಿನಿಂದ ಈ ವರ್ಷದ ಜ.31ರವರೆಗೆ 13 ಕೋಟಿ ಪುರುಷ, 9 ಕೋಟಿ ಮಹಿಳೆ ಹಾಗೂ 33,700 ತೃತೀಯ ಲಿಂಗದ ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಇಲಾಖೆಗೆ 13,287 ಕೋಟಿ ರು. ಆದಾಯ ಹರಿದುಬಂದಿದೆ. ಈ ಸಂಖ್ಯೆಯಲ್ಲಿ ಪುರುಷರು ಹಾಗೂ ತೃತೀಯ ಲಿಂಗದವರ ಶೇ.40 ವಿನಾಯ್ತಿ ಹಾಗೂ ಮಹಿಳೆಯರ ಶೇ.50ರಷ್ಟು ವಿನಾಯ್ತಿ ತೆಗೆದರೆ ರೈಲ್ವೆಗೆ 5,875 ಕೋಟಿ ರು. ಹೆಚ್ಚಿನ ಆದಾಯ ಹರಿದುಬಂದಿದೆ ಎಂದು ಅರ್ಜಿದಾರ ಚಂದ್ರಶೇಖರ ಗೌರ್‌ ಮಾಹಿತಿ ಹಂಚಿಕೊಂಡಿದ್ದಾರೆ.

click me!