ಬೆಲೆ ಏರಿಕೆ ಬಿಸಿ ನಡುವೆ ಜನರಿಗೆ ಮತ್ತೊಂದು ಶಾಕ್?

Published : Apr 21, 2022, 07:22 AM IST
ಬೆಲೆ ಏರಿಕೆ ಬಿಸಿ ನಡುವೆ ಜನರಿಗೆ ಮತ್ತೊಂದು ಶಾಕ್?

ಸಾರಾಂಶ

* ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆ * ಸಿಮೆಂಟ್‌ ಬೆಲೆ ಪ್ರತಿ ಚೀಲಕ್ಕೆ 20-50 ರು. ಏರಿಕೆ ಸಾಧ್ಯತೆ * ಹಣಕಾಸು ಸೇವಾ ಸಂಸ್ಥೆ ಕ್ರಿಸಿಲ್‌ ಹೇಳಿಕೆ

ನವದೆಹಲಿ(ಏ.21): ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿರುವ ಕಾರಣ ದೇಶೀಯ ಸಿಮೆಂಟ್‌ ಕಂಪನಿಗಳು ಶೀಘ್ರವೇ ಪ್ರತಿ ಚೀಲ ಸಿಮೆಂಟ್‌ ಬೆಲೆಯನ್ನು 25-50 ರು.ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹಣಕಾಸು ಸೇವಾ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಕೆಲ ದಿನಗಳ ಹಿಂದಷ್ಟೇ ಸಗಟು ಪೂರೈಕೆ ಡೀಸೆಲ್‌ ದರದಲ್ಲಿ ಹೆಚ್ಚಳವಾಗಿದೆ. ಇನ್ನು ಕಲ್ಲಿದ್ದಲು ಪೂರೈಕೆ ಕುಸಿತವಾಗಿ, ದರ ಗಗನಕ್ಕೇರಿದೆ. ಮತ್ತೊಂದೆಡೆ ರಷ್ಯಾ- ಉಕ್ರೇನ್‌ ಯುದ್ಧದಿಂದ ಸೃಷ್ಟಿಯಾಗಿರುವ ಸಮಸ್ಯೆಗಳು ಸಿಮೆಂಟ್‌ ವಲಯದ ಮೇಲೂ ಪರಿಣಾಮ ಬೀರಿವೆ. ಸಿಮೆಂಟ್‌ ದರದಲ್ಲಿ ಸಾಗಣೆ ವೆಚ್ಚವೇ ಶೇ.50ರಷ್ಟುಇರುವ ಕಾರಣ, ಡೀಸೆಲ್‌ ದರ ಏರಿಕೆ ಸಹಜವಾಗಿಯೇ ಪರಿಣಾಮ ಬೀರಲಿದೆ. ಹೀಗಾಗಿ ಕಂಪನಿಗಳು ಪ್ರತಿ ಚೀಲದ ಬೆಲೆಯಲ್ಲಿ 25-50 ರು.ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕ್ರಿಸಿಲ್‌ ತನ್ನ ವರದಿಯಲ್ಲಿ ಹೇಳಿದೆ.

ಕಳೆದ 12 ತಿಂಗಳಲ್ಲಿ ಹಲವು ಬಾರಿ ಸಿಮೆಂಟ್‌ ದರ ಏರಿಕೆಯಾಗಿದ್ದು, ಈಗಾಗಲೇ ಪ್ರತಿ ಚೀಲದ ಬೆಲೆ 360-420 ರು.ವರೆಗೂ ತಲುಪಿದೆ.

ಮಂಗಳನಲ್ಲಿ ಕಟ್ಟಡ ನಿರ್ಮಿಸಲು ‘ಇಟ್ಟಿಗೆ’ ರೆಡಿ!

ಮುಂದೊಂದು ದಿನ ಮಂಗಳ ಗ್ರಹದಲ್ಲಿ ಮನೆ ನಿರ್ಮಾಣ ಮಾಡುವ ಪರಿಸ್ಥಿತಿ ಬಂದಾಗ ಉಪಯೋಗವಾಗುವಂತಹ ಇಟ್ಟಿಗೆಗಳನ್ನು ಈಗಾಗಲೇ ಸಿದ್ಧಗೊಂಡಿವೆ!

- ಹೌದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಹಭಾಗಿತ್ವದಲ್ಲಿ ಇಂತಹದೊಂದು ವಿನೂತನ ಪ್ರಯೋಗ ನಡೆಸಿ, ಯಶಸ್ವಿಯಾಗಿದ್ದಾರೆ.

ಮಂಗಳನ ಮಣ್ಣನ್ನು ಕೃತಕವಾಗಿ ಮರುಸೃಷ್ಟಿಸಿ ಈ ಇಟ್ಟಿಗೆ ರೂಪಿಸಲಾಗಿದೆ. ಭೂಮಿಗೆ ಹೋಲಿಸಿದರೆ ಮಂಗಳ ಗ್ರಹದ ವಾತಾವರಣ 100 ಪಟ್ಟು ತೆಳುವಾಗಿರುವುದರಿಂದ ಅಲ್ಲಿನ ಮಣ್ಣು ಸಹಜವಾಗಿ ಇಟ್ಟಿಗೆಯಂತೆ ಗಟ್ಟಿರೂಪ ತಾಳುವ ಗುಣ ಹೊಂದಿಲ್ಲ. ಹೀಗಾಗಿ ಮಂಗಳನ ಮಣ್ಣು ಗಟ್ಟಿಗೊಳ್ಳುವಂತಹ ವಿಧಾನವನ್ನು ಐಐಎಸ್ಸಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಇಟ್ಟಿಗೆ ಸೃಷ್ಟಿಹೇಗೆ?:

ಮೊದಲಿಗೆ ಮಂಗಳ ಗ್ರಹದ ಮಣ್ಣನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಯಿಸಿದ್ದಾರೆ. ಈ ಮಣ್ಣನ್ನು ಸಸ್ಯಜನ್ಯ ಅಂಟು, ಸ್ಪೊರಸಾರ್ಸಿನ ಪಾಸ್ಟಿಯುರಿ ಎಂಬ ಬ್ಯಾಕ್ಟೀರಿಯಾ, ಯೂರಿಯಾ, ನಿಕ್ಕೆಲ್‌ ಕ್ಲೋರೈಡ್‌ ಅನ್ನು ಮಿಶ್ರಣ ಮಾಡಿ ಸ್ಲರಿ ರೂಪ ತಂದಿದ್ದಾರೆ. ಈ ಸ್ಲರಿಯನ್ನು ಯಾವುದೇ ಆಕೃತಿಯ ಅಚ್ಚಿಗೆ ಸುರಿಯಬಹುದಾಗಿದೆ. ಕೆಲವು ದಿನಗಳ ನಂತರ ಬ್ಯಾಕ್ಟೀರಿಯಾವು ಯೂರಿಯಾವನ್ನು ಕ್ಯಾಲ್ಸಿಯಂ ಕಾರ್ಬೋನೆಟ್‌ನ ಹರಳುಗಳನ್ನಾಗಿ ಪರಿವರ್ತಿಸುತ್ತದೆ. ಹರಳುಗಳು ಮತ್ತು ಸೂಕ್ಷ್ಮಾಣುಜೀವಿಗಳನ್ನು ಸೃಜಿಸುವ ಬಯೋ ಪಾಲಿಮರ್‌ಗಳು ಮಣ್ಣಿನ ಕಣಗಳನ್ನು ಹಿಡಿದಿಡುವ ಸಿಮೆಂಟ್‌ ರೀತಿ ಕಾರ್ಯನಿರ್ವಹಿಸುತ್ತವೆ.

ಹೆಚ್ಚು ಪರಿಣಾಮಕಾರಿ:

ಮಂಗಳನ ಮಣ್ಣನ್ನು ಹಿಡಿದಿಡುವ ಅನ್ಯ ವಿಧಾನಗಳಿಗಿಂತ ಭಾರತೀಯ ವಿಜ್ಞಾನಿಗಳು ರೂಪಿಸಿರುವ ಈ ವಿಧಾನ ಹೆಚ್ಚು ಪರಿಣಾಮಕಾರಿ ಎಂದು ಐಐಎಸ್‌ಸಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವು ಐಐಎಸ್‌ಸಿಯ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕ ಅಲೋಕ್‌ ಕುಮಾರ್‌ ಪ್ರಕಾರ, ಈ ವಿಧಾನದಲ್ಲಿ ಬಳಸಿರುವ ಬ್ಯಾಕ್ಟಿರಿಯಾವು ರಂಧ್ರದಂತಿರುವ ಜಾಗಗಳನ್ನು ಪ್ರವೇಶಿಸಿ ತಮ್ಮ ಪ್ರೊಟೀನ್‌ಗಳನ್ನು ಬಳಸಿ ಕಣಗಳನ್ನು ಗಟ್ಟಿಯಾಗಿ ಹಿಡಿದಿಡುವಂತೆ ಮಾಡುತ್ತದೆ. ಇದರಿಂದ ರಂಧ್ರಗಳು ಕಡಿಮೆಯಾಗಿ ಇಟ್ಟಿಗೆ ಗಟ್ಟಿಯಾಗಿ ಇರುತ್ತದೆ ಎಂದು ಹೇಳುತ್ತಾರೆ.

ಇದೇ ತಂಡ ಈ ಹಿಂದೆ ಚಂದ್ರನ ಮೇಲ್ಮೈಯ ಮಣ್ಣನ್ನು ಬಳಸಿ ಇದೇ ಮಾದರಿಯಲ್ಲಿ ಇಟ್ಟಿಗೆ ರೂಪಿಸಿತ್ತು. ಆದರೆ ಆಗ ಕೇವಲ ಸಿಲಿಂಡರ್‌ ಆಕಾರದ ಇಟ್ಟಿಗೆಗಳನ್ನು ಮಾತ್ರ ರೂಪಿಸಲು ಸಾಧ್ಯವಾಗಿತ್ತು. ಆದರೆ ಮಂಗಳನ ಮಣ್ಣನ್ನು ಬಳಸಿ ವಿವಿಧ ಆಕೃತಿಯ ಇಟ್ಟಿಗೆ ನಿರ್ಮಿಸಲು ಸಾಧ್ಯವಾಗಿದೆ. ಐಐಎಸ್‌ಸಿಯ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ನ ಸಹಾಯಕ ಪ್ರೊಫೆಸರ್‌ ಕೌಶಿಕ್‌ ವಿಶ್ವನಾಥನ್‌ ಅವರ ನೆರವಿನಿಂದ ಸ್ಲರಿ ಕಾಸ್ಟಿಂಗ್‌ ಮೆಥಡ್‌ ಅಭಿವೃದ್ಧಿ ಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು