ಗೂಗಲ್‌ ಮ್ಯಾಪ್‌ನಲ್ಲಿ ನೋಡಿ ಜಾಗ ಖರೀದಿಸಿದ್ದ ವಾದ್ರಾ!

By Suvarna NewsFirst Published Jan 18, 2020, 8:30 AM IST
Highlights

ಗೂಗಲ್‌ ಮ್ಯಾಪ್‌ನಲ್ಲಿ ನೋಡಿ ಜಾಗ ಖರೀದಿಸಿದ್ದ ವಾದ್ರಾ!| 72 ಲಕ್ಷಕ್ಕೆ ಖರೀದಿ 5.15 ಕೋಟಿ ರು.ಗೆ ಬಿಕರಿ| ಇ.ಡಿ. ವಿಚಾರಣೆ ವೇಳೆ ಸೋನಿಯಾ ಅಳಿಯ ಹೇಳಿಕೆ

ನವದೆಹಲಿ[ಜ.18]: ಯಾವುದೇ ಜಾಗ ಖರೀದಿಸುವ ಮುನ್ನ ಸಾಮಾನ್ಯವಾಗಿ ಖರೀದಿದಾರರು ಸ್ಥಳಕ್ಕೆ ಹೋಗಿ ನೋಡಿಬರುತ್ತಾರೆ. ಆದರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರು 69.55 ಹೆಕ್ಟೇರ್‌ ಜಾಗವನ್ನು ಗೂಗಲ್‌ ಮ್ಯಾಪ್‌ನಲ್ಲಿ ನೋಡಿಯೇ ಖರೀದಿಸಿದ್ದರು ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.

ಹರಾರ‍ಯಣದ ಕಾಂಗ್ರೆಸ್‌ ಶಾಸಕ ಲಲಿತ್‌ ನಾಗರ್‌ ಅವರ ಸೋದರ ಮಹೇಶ್‌ ನಾಗರ್‌ ಎಂಬುವರು ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಜಾಗದ ದಾಖಲೆಗಳನ್ನು ವಾದ್ರಾ ಬಳಿಗೆ ಒಯ್ದಿದ್ದರು. ಈ ವೇಳೆ ಆ ಜಾಗ ಎಲ್ಲಿದೆ ಎಂಬುದನ್ನು ವಾದ್ರಾ ಗೂಗಲ್‌ ಮ್ಯಾಪ್‌ನಲ್ಲಿ ನೋಡಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಈ ವಿಷಯವನ್ನು ಖುದ್ದು ವಾದ್ರಾ ಅವರೇ ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಕೆಲವು ತಿಂಗಳ ಹಿಂದೆ ತಿಳಿಸಿದ್ದಾರೆ.

ಡಿಕೆಶಿ, ಚಿದು ಬಳಿಕ ಸೋನಿಯಾ ಅಳಿಯನಿಗೂ ಬಂಧನ ಭೀತಿ!

ಬಿಕಾನೇರ್‌ನಲ್ಲಿ ಮಹಾಜನ ಫೀಲ್ಡ್‌ ಫೈರಿಂಗ್‌ ರೇಂಜ್‌ಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅದರಿಂದ ನಿರಾಶ್ರಿತರಾದವರಿಗೆ ಪುನಾವಸತಿ ಕಲ್ಪಿಸಲು ಒಂದಷ್ಟುಜಾಗವನ್ನು ಮೀಸಲಿಡಲಾಗಿತ್ತು. ಅದನ್ನು ವಾದ್ರಾ ಅವರು ಕೇವಲ 72 ಲಕ್ಷ ರು.ಗೆ ಅಕ್ರಮವಾಗಿ ಖರೀದಿ ಮಾಡಿದ್ಧಾರೆ. ಬಳಿಕ ಕೆಲವೇ ದಿನಗಳಲ್ಲಿ ಅಲ್ಲೆಜೀನಿ ಎಂಬ ಕಂಪನಿಗೆ 5.15 ಕೋಟಿ ರು.ಗೆ ಮಾರಾಟ ಮಾಡಿದ್ದಾರೆ. ಒಟ್ಟು 4.43 ಕೋಟಿ ರು. ಲಾಭ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಜೈಪುರದಲ್ಲಿ ಕಳೆದ ವರ್ಷ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ, ವಾದ್ರಾಗೆ ಸೇರಿದ ಕೆಲವೊಂದು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

'ನಾಜಿ ಲವರ್ಸ್'ಗಳಿಂದ ಕಣಿವೆ ಭೇಟಿ: ಮೋದಿ ವಿರುದ್ಧ ಒವೈಸಿ ಕಿಡಿ!

click me!