ಬಿಹಾರದಲ್ಲಿ ಅಚ್ಚರಿಯ ಬೆಳವಣಿಗೆ, ನಿತೀಶ್‌ಗೆ ‘ಮಹಾಗಠಬಂಧನ’ ಆಫರ್!

By Kannadaprabha News  |  First Published Nov 24, 2020, 8:45 AM IST

ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅಚ್ಚರಿಯ ಬೆಳವಣಿಗೆ|  ಬಿಜೆಪಿ ತೊರೆದು ‘ಮಹಾಗಠಬಂಧನ’ಕ್ಕೆ ಸೇರುವಂತೆ ನಿತೀಶ್‌ ಕುಮಾರ್‌ ಅವರಿಗೆ ಆಫರ್


ಪಟನಾ(ನ.24): ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಅವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಬಿಜೆಪಿ ತೊರೆದು ‘ಮಹಾಗಠಬಂಧನ’ಕ್ಕೆ ಸೇರುವಂತೆ ನಿತೀಶ್‌ ಕುಮಾರ್‌ ಅವರಿಗೆ ಪ್ರಮುಖ ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಆಫರ್‌ ನೀಡಿದೆ.

ಆರ್‌ಜೆಡಿ ನಾಯಕ ಅಮರನಾಥ್‌ ಗಮಿ ಅವರು ನಿತೀಶ್‌ ಎದುರು ಈ ಪ್ರಸ್ತಾಪ ಇಟ್ಟಿದ್ದು, ‘ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗಿ ಎನ್‌ಡಿಎ ಬಹುಮತ ಪಡೆದಿದೆ. ನಿತೀಶ್‌ ಕುಮಾರ್‌ ನೇತೃತ್ವದ ಈ ಸರ್ಕಾರ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಶೀಘ್ರದಲ್ಲೇ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಭವಿಷ್ಯ ನುಡಿದಿದ್ದಾರೆ.

Tap to resize

Latest Videos

ನಿತೀಶ್‌ ಸಂಪುಟದ ಶೇ.57ರಷ್ಟು ಸಚಿವರ ವಿರುದ್ಧ ಕ್ರಿಮಿನಲ್‌ ಕೇಸ್‌!

ಭ್ರಷ್ಟ, ರಾಷ್ಟ್ರಗೀತೆ ಬರದ ಬಿಹಾರ ಶಿಕ್ಷಣ ಸಚಿವ 3 ದಿನಕ್ಕೆ ರಾಜೀನಾಮೆ!

ಭ್ರಷ್ಟಾಚಾರದ ಕಳಂಕ ಎದುರಿಸುತ್ತಿದ್ದ ಬಿಹಾರದ ಶಿಕ್ಷಣ ಸಚಿವ ಮೇವಾ ಲಾಲ್‌ ಚೌಧರಿ, ಪ್ರಮಾಣ ವಚನ ಸ್ವೀಕರಿಸಿದ ಮೂರೇ ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರದ ಕಳಂಕವಿದ್ದರೂ ಸಂಪುಟಕ್ಕೆ ಚೌಧರಿ ಸೇರ್ಪಡೆ ಬಗ್ಗೆ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಇದರಿಂದ ನಿತೀಶ್‌ ಸರ್ಕಾರ ಮುಜುಗರಕ್ಕೆ ಒಳಗಾಗಿತ್ತು. ಅದರ ಬೆನ್ನಲ್ಲೇ ಸಚಿವ ಚೌಧರಿ ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಭ್ರಷ್ಟಾಚಾರ ಆರೋಪ: ದಿಢೀರ್ ರಾಜೀನಾಮೆ ಕೊಟ್ಟ ಸಚಿವ...!

ಐದು ವರ್ಷಗಳ ಹಿಂದೆ ಕೃಷಿ ವಿವಿ ಕುಲಪತಿಯಾಗಿದ್ದ ವೇಳೆ ಪ್ರಾಧ್ಯಾಪಕರ, ವಿಜ್ಞಾನಿಗಳ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಚೌಧರಿ ಭಾಗಿಯಾಗಿದ್ದರು ಎಂಬ ಆರೋಪ ಕೇಳಿಬಂದು ಕೇಸು ದಾಖಲಾಗಿತ್ತು. ಇನ್ನು ಶಾಲೆಯೊಂದರಲ್ಲಿ ಧ್ವಜಾರೋಹಕ್ಕೆ ತೆರಳಿದ್ದ ವೇಳೆ ಸರಿಯಾಗಿ ರಾಷ್ಟ್ರಗೀತೆ ಹಾಡಲು ಬರದ ಚೌಧರಿ ಅವರ ಹಳೆಯ ವಿಡಿಯೋವೊಂದನ್ನು ವಿಪಕ್ಷಗಳು ಇತ್ತೀಚೆಗೆ ತೇಲಿ ಬಿಟ್ಟು ಅವರ ಮರ್ಯಾದೆ ಹರಾಜು ಹಾಕಿದ್ದವು.

click me!