25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ

Kannadaprabha News   | Kannada Prabha
Published : Dec 10, 2025, 04:14 AM IST
RESORT

ಸಾರಾಂಶ

25 ಜನರ ಸಾವಿಗೆ ಕಾರಣವಾದ ಪಬ್‌ ಬೆಂಕಿ ಅವಘಡದ ಬೆನ್ನಲ್ಲೇ, ಪ್ರಕರಣದ ಆರೋಪಿ ಲೂಥ್ರಾ ಸಹೋದರರ ಮಾಲೀಕತ್ವದ ಮತ್ತೊಂದು ಅಕ್ರಮ ರೆಸಾರ್ಟ್‌ ಅನ್ನು ಮಂಗಳವಾರ ನೆಲಸಮಗೊಳಿಸಲಾಗಿದೆ. ಮಾಲೀಕರ ಪತ್ತೆಗೆ ಬ್ಲೂಕಾರ್ನರ್‌ ನೋಟಿಸ್‌ ಜಾರಿಗೊಳಿಸಿದ್ದಾರೆ

ಪಣಜಿ: 25 ಜನರ ಸಾವಿಗೆ ಕಾರಣವಾದ ಪಬ್‌ ಬೆಂಕಿ ಅವಘಡದ ಬೆನ್ನಲ್ಲೇ, ಪ್ರಕರಣದ ಆರೋಪಿ ಲೂಥ್ರಾ ಸಹೋದರರ ಮಾಲೀಕತ್ವದ ಮತ್ತೊಂದು ಅಕ್ರಮ ರೆಸಾರ್ಟ್‌ ಅನ್ನು ಮಂಗಳವಾರ ನೆಲಸಮಗೊಳಿಸಲಾಗಿದೆ.

ಉತ್ತರ ಗೋವಾದ ವಾಗಾಟೊರ್‌ನ ಸಮುದ್ರದಂಡೆಯಲ್ಲಿರುವ ರೆಸಾರ್ಟ್‌

ಉತ್ತರ ಗೋವಾದ ವಾಗಾಟೊರ್‌ನ ಸಮುದ್ರದಂಡೆಯಲ್ಲಿರುವ ರೋಮಿಯೋ ಲೇನ್‌ ರೆಸಾರ್ಟ್‌ ನೆಲಸಮಕ್ಕೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಆದೇಶದ ಬೆನ್ನಲ್ಲೇ ಅಧಿಕಾರಿಗಳು ಅದನ್ನು ಧ್ವಂಸಗೊಳಿಸಿದ್ದಾರೆ. ಕಟ್ಟಡವನ್ನು ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ, ಅಗ್ನಿ ಸುರಕ್ಷತಾ ಕ್ರಮ ಪಾಲಿಸದ, ಸಮುದ್ರದಲ್ಲಿ ಉಬ್ಬರ ಉಂಟಾದಾಗ ರೆಸಾರ್ಟ್‌ಗೆ ಹಾನಿಯಾಗಬಹುದು ಎಂಬ ಕಾರಣ ನೀಡಿ ನೆಲಸಮ ಮಾಡಲಾಗಿದೆ.

ಬ್ಲೂಕಾರ್ನರ್‌ ನೋಟಿಸ್:

ಈ ನಡುವೆ ಪಬ್‌ನ ಮಾಲೀಕರಾದ ಸೌರಭ್ ಲೂಥ್ರಾ ಮತ್ತು ಗೌರವ್‌ ಲೂಥ್ರಾ ಪತ್ತೆಯಾದರೆ ಗಡಿಪಾರು ಕೋರಿ ಗೋವಾ ಪೊಲೀಸರು ಇಂಟರ್‌ಪೋಲ್‌ ಮೂಲಕ ಬ್ಲೂಕಾರ್ನರ್‌ ನೋಟಿಸ್‌ ಜಾರಿಗೊಳಿಸಿದ್ದಾರೆ. ಮತ್ತೊಂದೆಡೆ ಅತ್ತ, ಥಾಯ್ಲೆಂಡ್‌ನ ಫುಕೆಟ್‌ ವಿಮಾನ ನಿಲ್ದಾಣದ ಇಮಿಗ್ರೇಷನ್‌ನಲ್ಲಿ ಲೂಥ್ರಾ ಇರುವ ಚಿತ್ರವೊಂದು ಹರಿದಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ
ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!