ಮತ್ತೊಂದು ದಾಖಲೆ: ನಿನ್ನೆ ಒಂದೇ ದಿನ 1.25 ಕೋಟಿ ಜನರಿಗೆ ಕೋವಿಡ್‌ ಲಸಿಕೆ!

Published : Sep 01, 2021, 07:55 AM IST
ಮತ್ತೊಂದು ದಾಖಲೆ: ನಿನ್ನೆ ಒಂದೇ ದಿನ 1.25 ಕೋಟಿ ಜನರಿಗೆ ಕೋವಿಡ್‌ ಲಸಿಕೆ!

ಸಾರಾಂಶ

* ಕೋವಿಡ್‌ ಲಸಿಕೆ ವಿತರಣೆಯಲ್ಲಿ ಭಾರತ ಹೊಸದೊಂದು ವಿಶ್ವದಾಖಲೆ * ನಿನ್ನೆ ಒಂದೇ ದಿನ 1.25 ಕೋಟಿ ಜನರಿಗೆ ಕೋವಿಡ್‌ ಲಸಿಕೆ

ನವದೆಹಲಿ(ಸೆ.01): ಕೋವಿಡ್‌ ಲಸಿಕೆ ವಿತರಣೆಯಲ್ಲಿ ಭಾರತ ಹೊಸದೊಂದು ವಿಶ್ವದಾಖಲೆ ಸೃಷ್ಟಿಸಿದೆ. ಮಂಗಳವಾರ ಒಂದೇ ದಿನ ದೇಶಾದ್ಯಂತ 1.25 ಕೋಟಿಗಿಂತ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ.

ಹೀಗೆ ಲಸಿಕೆ ವಿತರಣೆಯಲ್ಲಿ ಕೋಟಿಯ ಗಡಿ ದಾಟಿದ್ದು ಇದು ಎರಡನೇ ಬಾರಿ. ಆ.27ರಂದು ದೇಶದಲ್ಲಿ 1.08 ಕೋಟಿ ಜನರಿಗೆ ಲಸಿಕೆ ನೀಡಲಾಗಿತ್ತು. ಅದು ಮೊದಲ ಬಾರಿಗೆ ಲಸಿಕೆ ವಿತರಣೆ ಕೋಟಿ ಗಡಿ ದಾಟಿದ್ದಾಗಿತ್ತು. ಅದಾದ ಕೇವಲ 4 ದಿನದಲ್ಲಿ ಮತ್ತೊಮ್ಮೆ ಕೋಟಿಯ ಗಡಿ ದಾಟಿದ್ದೂ ಅಲ್ಲದೆ, ವಿತರಣೆಯಲ್ಲಿ ಹೊಸ ದಾಖಲೆಯನ್ನೂ ಸೃಷ್ಟಿಸಲಾಗಿದೆ.

ಆಗಸ್ಟ್‌ ತಿಂಗಳಿನಲ್ಲಿ ಭಾರತ ಒಟ್ಟು 18 ಕೋಟಿ ಡೋಸ್‌ ಲಸಿಕೆ ನೀಡಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಲಸಿಕೆ ನೀಡಿಕೆಯಲ್ಲಿ ಶೇ.33ರಷ್ಟುಏರಿಕೆ ಕಂಡಿದೆ. ಈವರೆಗೆ 50 ಕೋಟಿ ಮೊದಲ ಡೋಸ್‌ ಮತ್ತು 14.9 ಕೋಟಿ ಎರಡೂ ಡೋಸ್‌ ಸೇರಿದಂತೆ ಒಟ್ಟು 65 ಕೋಟಿ ಡೋಸ್‌ ಲಸಿಕೆ ವಿತರಿಸಿದೆ. ಅಕ್ಟೋಬರ್‌ ಅಂತ್ಯದ ವೇಳೆಗೆ ದೇಶದ 94 ಕೋಟಿ ಯುವಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್