
ಮುಂಬೈ (ಜ.24): ನಟ ಸೈಫ್ ಅಲಿ ಖಾನ್ ಅವರಿಗೆ ನಿಜವಾಗಿಯೂ ಚಾಕು ಇರಿಯಲಾಗಿದೆಯೇ ಅಥವಾ ನಟನೆ ಮಾಡುತ್ತಿದ್ದಾರೆಯೇ ಎನ್ನುವುದರ ಬಗ್ಗೆ ಅನುಮಾನವಿದೆ' ಎಂದು ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸೈಫ್ ಅವರನ್ನು 'ಕಸ'ಕ್ಕೆ ಹೋಲಿಸಿದ್ದಾರೆ. ಬಾಂಗ್ಲಾದೇಶಿ ವ್ಯಕ್ತಿಯಿಂದ ಚಾಕು ಇರಿತಕ್ಕೆ ಒಳಗಾದ ಬಳಿಕ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಮನೆಗೆ ಮರಳುವ ವೇಳೆ ಸೈಫ್ ಆರಾಮಾಗಿ ನಡೆದುಕೊಂಡು ಬಂದಿದ್ದು ಕಂಡುಬಂತು. ಈ ಬಗ್ಗೆ ಗುರುವಾರ ಮಾತನಾಡಿದ ರಾಣೆ, 'ಸೈಫ್ ಆಸ್ಪತ್ರೆಯಿಂದ ಹೊರಗೆ ಬರುತ್ತಿರುವುದು ನೋಡಿದೆ.
ಅದು ಅವರು ನಿಜವಾಗಿಯೂ ಇರಿತಕ್ಕೆ ಒಳಗಾಗಿದ್ದಾರೆಯೇ ಅಥವಾ ನಟನೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಯಿತು. ನಡೆಯುವಾಗ ಅವರು ಡಾನ್ ಮಾಡುತ್ತಿದ್ದರು' ಎಂದರು. ಇನ್ನು ಸೈಫ್‌ನ್ನು ಕಸಕ್ಕೆ ಹೋಲಿಸಿದ ರಾಣೆ, 'ಈ ಮುನ್ನ ಬೀದಿಯಲ್ಲಿದ್ದ ಬಾಂಗ್ಲನ್ನರು ಈಗ ಸೈಫ್ ಮನೆಗೆ ನುಗ್ಗಿದ್ದಾರೆ. ಅವನು ಅವರನ್ನು (ಸೈಫ್) ಕರೆದೊಯ್ಯಲು ಬಂದಿರಬಹುದು. ಅದು ಒಳ್ಳೆಯದು. ಕಸವನ್ನು (ಸೈಫ್) ತೆಗೆದುಕೊಂಡೇ ಹೋಗಬೇಕು' ಎಂದರು.
12 ವರ್ಷ ವಯಸ್ಸಿನ ಅಂತರ ಇದ್ರೂ ಅಮೃತಾರನ್ನು ಪ್ರೀತಿಸಿ ಮದ್ವೆಯಾದ ಸೈಫ್ ಕಥೆಯೇನು? ಕೊನೆಗೆ ಡಿವೋರ್ಸ್ ಕೊಟ್ಟಿದ್ಯಾಕೆ!
ಆಧುನಿಕ ವೈದ್ಯ ಪದ್ಧತಿಯಲ್ಲಿ ಬೇಗ ಗುಣ ಸಾಧ್ಯ: ನಟ ಸೈಫ್ ಅಲಿ ಖಾನ್ ಮೇಲೆ ಭಾರಿ ಪ್ರಮಾಣದ ಚಾಕು ದಾಳಿ ಆಗಿದ್ದರೂ, ಅವರು ಡಿಸ್ಚಾರ್ಜ್ ಆದ ಬಳಿಕ ಆರಾಮವಾಗಿ ನಡೆದು ಬಂದಿದ್ದು ಅಚ್ಚರಿ ಹಾಗೂ ಸಂದೇಹಗಳನ್ನು ಮೂಡಿಸಿದೆ. ಆದರೆ ಇದರ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದು, ‘ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯಿಂದ ಬೇಗ ಗುಣಮುಖ ಆಗುವುದು ಸಾಧ್ಯವಿದೆ’ ಎಂದು ಹೇಳಿದ್ದಾರೆ. ಬೆಂಗಳೂರಿ ವೈದ್ಯ ದೀಪಕ್ ಕೃಷ್ಣಸ್ವಾಮಿ ಟ್ವೀಟ್ ಮಾಡಿ, ‘ಸೈಫ್‌ಗೆ ಸೆರೆಬ್ರೊಸ್ಪೈನಲ್ ದ್ರವದ ಸೋರಿಕೆ ಮತ್ತು ಡ್ಯೂರಮೇಟರ್‌ನಲ್ಲಿ (ಬೆನ್ನು ಮೂಳೆ ಹಾಗೂ ಮಿದುಳು ರಕ್ಷಿಸುವ ಪೊರೆ) ಹರಿದಿತ್ತು,
ಅದನ್ನು ಸರಿಪಡಿಸಲಾಯಿತು. ಆಧುನಿಕ ವೈದ್ಯ ಪದ್ಧತಿಯಲ್ಲಿ ಇದನ್ನು ಬೇಗ ಗುಣಪಡಿಸಲು ಸಾಧ್ಯವಿದೆ. ಹೃದಯದ ಬೈಪಾಸ್ ಸರ್ಜರಿ ಆದವರೂ 3-4 ದಿನದ್ಲಿ ಆರಾಮವಾಗಿ ಮೆಟ್ಟಿಲು ಹತ್ತಿಳಿಯಬಹುದು. ಆಧುನಿಕ ವೈದ್ಯ ಪದ್ಧತಿ ಅರಿಯಿರಿ. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಹರಡುವಿಕೆ ನಿಲ್ಲಿಸಿ’ ಎಂದಿದ್ದಾರೆ. ಅಲ್ಲದೆ ತಮ್ಮ 78 ವರ್ಷದ ತಾಯಿ 2022ರಲ್ಲಿ ಕಾಲು ಮುರಿತದ ಸರ್ಜರಿಗೆ ಒಳಗಾದರೂ, ಸಂಜೆಯೇ ನಡೆದಾಡಿದ್ದನ್ನು ಅವರು ಉಲ್ಲೇಖಿಸಿದ್ದಾರೆ.
ಕಬ್ಬಿಣದ ಯುಗ ಆರಂಭವಾಗಿದ್ದೇ ತಮಿಳುನಾಡಲ್ಲಿ: ಸಿಎಂ ಎಂ.ಕೆ.ಸ್ಟಾಲಿನ್
ಸೈಫ್ ಕರೆತಂದಿದ್ದು ಸ್ನೇಹಿತ ಜೈದಿ: ನಟ ಸೈಫ್ ಅಲಿ ಖಾನ್ ಅವರ ದೇಹದ 5 ಕಡೆ ಗಾಯಗಳಾಗಿದ್ದವು ಎಂದು ತನ್ನ ವರದಿಯಲ್ಲಿ ಹೇಳಿರುವ ಲೀಲಾವತಿ ಆಸ್ಪತ್ರೆ, ಅವರನ್ನು ಸ್ನೇಹಿತ ಅಫ್ಸರ್ ಜೈದಿ ಅಬರಿ ಆಟೋರಿಕ್ಷಾದಲ್ಲಿ ಕರೆತಂದಿದ್ದರು ಎಂದಿದೆ. ಈ ಮೂಲಕ ಸೈಫ್ ಕಿರಿಯ ಮಗ ತೈಮುರ್, ಅವರನ್ನು ಆಸ್ಪತ್ರೆಗೆ ಕರೆತಂದಿದ್ದ ಎಂಬ ವರದಿಗಳನ್ನು ಪರೋಕ್ಷವಾಗಿ ತಳ್ಳಿಹಾಕಿದೆ. ಗುರುವಾರ ರಾತ್ರಿ ವೈದ್ಯಕೀಯ ವರದಿ ವರದಿ ಬಿಡುಡೆ ಮಾಡಿರುವ ಆಸ್ಪತ್ರೆ, ‘ಸೈಫ್ ಬೆನ್ನು, ಮಣಿಕಟ್ಟು, ಕುತ್ತಿಗೆ, ಭುಜ ಮತ್ತು ಮೊಣಕೈಯಲ್ಲಿ 5 ಸ್ಥಳಗಳಲ್ಲಿ ಇರಿಯಲಾಗಿತ್ತು ಮತ್ತು ಅವರ ಸ್ನೇಹಿತ ಅಫ್ಸರ್ ಜೈದಿ ಅವರು ಆಟೋರಿಕ್ಷಾದಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆತಂದರು’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ