ಭಾರತ ಯುದ್ಧಕ್ಕೆ ಬಂದರೆ ಎದುರಿಸಲು ಸಿದ್ಧ: ಪಾಕ್‌ ಸೇನಾ ಮುಖ್ಯಸ್ಥ

Published : Dec 04, 2022, 10:45 AM IST
ಭಾರತ ಯುದ್ಧಕ್ಕೆ ಬಂದರೆ ಎದುರಿಸಲು ಸಿದ್ಧ: ಪಾಕ್‌ ಸೇನಾ ಮುಖ್ಯಸ್ಥ

ಸಾರಾಂಶ

ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ ಅದನ್ನು ನಾವು ಎದುರಿಸಲು ಸಿದ್ಧರಾಗಿದ್ದೇವೆ ಎಂದು ನೂತನ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ ಶನಿವಾರ ಹೇಳಿದ್ದಾರೆ. ಇತ್ತೀಚೆಗೆ ಭಾರತದ ಸೇನಾಧಿಕಾರಿಯೊಬ್ಬರು, ಪಾಕ್‌ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪಾಕ್‌ ಸೇನಾ ಮುಖ್ಯಸ್ಥ ತಿರುಗೇಟು ನೀಡಿದ್ದಾರೆ.

ಇಸ್ಲಾಮಾಬಾದ್‌: ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ ಅದನ್ನು ನಾವು ಎದುರಿಸಲು ಸಿದ್ಧರಾಗಿದ್ದೇವೆ ಎಂದು ನೂತನ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ ಶನಿವಾರ ಹೇಳಿದ್ದಾರೆ. ಇತ್ತೀಚೆಗೆ ಭಾರತದ ಸೇನಾಧಿಕಾರಿಯೊಬ್ಬರು, ಪಾಕ್‌ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪಾಕ್‌ ಸೇನಾ ಮುಖ್ಯಸ್ಥ ತಿರುಗೇಟು ನೀಡಿದ್ದಾರೆ.

ಸೇನಾ ಮುಖ್ಯಸ್ಥನಾಗಿ (Pakistan army chief) ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಮೊದಲ ಭೇಟಿಯಲ್ಲಿ ಮುನೀರ್‌ (Asim Munir) ಅವರು ರಾಖ್‌ಚಿಕ್ರಿ (Rakkhchikri sector) ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ನಿಯೋಜನೆಯಾದ ಸೈನಿಕರನ್ನು ಭೇಟಿಯಾದರು. ಈ ವೇಳೆ ಮಾತಾಡಿದ ಅವರು, ‘ಇತ್ತೀಚೆಗೆ ನಾವು ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಾಗೂ ಗಿಲ್ಗಿಟ್‌ ಬಾಲ್ಟಿಸ್ತಾನದ (Gilgit-Baltistan) ಬಗ್ಗೆ ಭಾರತದ ನಾಯಕರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದ್ದು ನನ್ನ ಗಮನಕ್ಕೆ ಬಂದಿದೆ. ಪಾಕಿಸ್ತಾನದ ಸೇನೆಯೂ ಸದಾ ಸನ್ನದ್ಧ ಸ್ಥಿತಿಯಲ್ಲಿರುತ್ತದೆ ಎಂಬುದನ್ನು ನಾನು ಈ ವೇಳೆ ಮತ್ತೊಮ್ಮೆ ಪುನರುಚ್ಚರಿಸಲು ಬಯಸುತ್ತೇನೆ. ಭಾರತವನ್ನು ಎದುರಿಸಿ ಪಾಕಿಸ್ತಾನದ ಪ್ರತಿಯೊಂದು ಇಂಚು ಜಾಗವನ್ನೂ ರಕ್ಷಿಸಿಕೊಳ್ಳಲು ನಾವು ಸಿದ್ಧ ಎಂದರು.

BSF Jawan Crossed Pak Border: ಆಕಸ್ಮಿಕವಾಗಿ ಪಾಕ್‌ ಗಡಿ ದಾಟಿದ ಭಾರತದ ಸೈನಿಕ!

'ಗಲ್ವಾನ್‌' ಕೆಣಕಿದ ರಿಚಾ ಛಡ್ಡಾಗೆ ನೆಟ್ಟಿಗರ ಭರ್ಜರಿ ಕ್ಲಾಸ್‌, ಕ್ಷಮೆ ಕೇಳಿದ ನಟಿ

ಪಾಕ್‌ ಸೇನಾಧ್ಯಕ್ಷ ಬಜ್ವಾ ಭಾಷಣ, ಭಾರತೀಯರು ಸೇನೆಗೆ ನೀಡುವ ಗೌರವವನ್ನು ನೋಡಿ ಕಲಿಯಿರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ