ಸನಾತನ ಧರ್ಮ ಆಯ್ತು, ಈಗ ರಾಮಚರಿತಮಾನಸ್‌ ವಿರುದ್ಧ I.N.D.I.A ಕೂಟ ವಾಗ್ದಾಳಿ: ಬಿಹಾರ ಶಿಕ್ಷಣ ಸಚಿವರ ವಿವಾದ

By BK Ashwin  |  First Published Sep 15, 2023, 1:15 PM IST

ರಾಮಚರಿತಮಾನಸದಲ್ಲಿ ವರ್ಣಿಸಲಾದ ಜಾತಿಯ ಚಲನವಲನವನ್ನು ಪ್ರಶ್ನಿಸಿದ ಶಿಕ್ಷಣ ಸಚಿವ ಚಂದ್ರಶೇಖರ್, ತನಗೆ ಧರ್ಮಗ್ರಂಥದಲ್ಲಿ ಸಮಸ್ಯೆ ಇದೆ ಮತ್ತು ಪೊಟ್ಯಾಶಿಯಮ್‌ ಸೈನೈಡ್‌ನಂತಹ ವಸ್ತುವನ್ನು ಹೊಂದಿರುವವರೆಗೆ ಅದರ ವಿರುದ್ಧ ಹೋರಾಡುತ್ತೇನೆ ಎಂದಿದ್ದಾರೆ. 


ಪಾಟ್ನಾ (ಸೆಪ್ಟೆಂಬರ್ 15, 2023):  ಹಿಂದೂ ಗ್ರಂಥ ರಾಮಚರಿತ ಮಾನಸದ ವಿರುದ್ಧ ಬಿಹಾರದ ಆರ್‌ಜೆಡಿ ಪಕ್ಷದ ಸಚಿವರು ವಾಗ್ದಾಳಿ ನಡೆಸಿದ್ದರು. ಈಗ, ರಾಮಚರಿತಮಾನಸವನ್ನು ಅವಮಾನಿಸುವ ಮತ್ತೊಂದು ಪ್ರಯತ್ನದಲ್ಲಿ, ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್‌ ಅವರು ಗುರುವಾರ ಮಹಾಕಾವ್ಯವು "ಪೊಟ್ಯಾಶಿಯಮ್‌ ಸೈನೈಡ್" ಎಂಬ ಬಣ್ಣರಹಿತ ಉಪ್ಪನ್ನು ಹೊಂದಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ. 

ರಾಮಚರಿತಮಾನಸದಲ್ಲಿ ವರ್ಣಿಸಲಾದ ಜಾತಿಯ ಚಲನವಲನವನ್ನು ಪ್ರಶ್ನಿಸಿದ ಚಂದ್ರಶೇಖರ್, ತನಗೆ ಧರ್ಮಗ್ರಂಥದಲ್ಲಿ ಸಮಸ್ಯೆ ಇದೆ ಮತ್ತು ಪೊಟ್ಯಾಶಿಯಮ್‌ ಸೈನೈಡ್‌ನಂತಹ ವಸ್ತುವನ್ನು ಹೊಂದಿರುವವರೆಗೆ ಅದರ ವಿರುದ್ಧ ಹೋರಾಡುತ್ತೇನೆ ಎಂದೂ ಹೇಳಿದ್ದಾರೆ. ಸಾರ್ವಜನಿಕ ಸಭೆಯೊಂದರಲ್ಲಿ ಸಚಿವರು ಹಿಂದೂ ಧಾರ್ಮಿಕ ಪುಸ್ತಕದ ಬಗ್ಗೆ ಟೀಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಜನವರಿಯಲ್ಲಿ ಚಂದ್ರಶೇಖರ್ ಅವರು ರಾಮಚರಿತಮಾನಸ್ 'ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು.

Tap to resize

Latest Videos

ಇದನ್ನು ಓದಿ: ಸನಾತನ ಧರ್ಮ ನಿರ್ಮೂಲನೆಗೆಂದೇ I.N.D.I.A ಬಣ ರಚಿಸಲಾಗಿದೆ: ಮತ್ತೊಬ್ಬ ಡಿಎಂಕೆ ಸಚಿವನ ವಿಡಿಯೋ ವೈರಲ್‌


ಬಿಹಾರದಲ್ಲಿ ಹಿಂದಿ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಆರ್‌ಜೆಡಿಯ ಸಚಿವರು, ರಾಮಚರಿತ ಮಾನಸ ಗ್ರಂಥದ ಒಂದು ಶ್ಲೋಕವನ್ನು ಪ್ರಶ್ನಿಸಿ, “ಪುಸ್ತಕದಲ್ಲಿ ಜಾತೀಯತೆಯನ್ನು ಚಿತ್ರಿಸಲಾಗಿದೆ ಎಂದು ನೀವು ಭಾವಿಸುವುದಿಲ್ಲವೇ? ಇದು ಜಾತೀಯತೆಯನ್ನು ಉತ್ತೇಜಿಸುತ್ತದೆ ಮತ್ತು ನಾನು ಅದನ್ನು ವಿರೋಧಿಸುತ್ತೇನೆ. ‘’ರಾಮಚರಿತಮಾನಸ ಮತ್ತು ಇತರ "ಗ್ರಂಥಗಳ" ಬಗ್ಗೆ ನನಗೆ ವಿರೋಧ ಇದೆ. ಏಕೆಂದರೆ ಅವುಗಳಲ್ಲಿ 55 ರೀತಿಯ ಭಕ್ಷ್ಯಗಳನ್ನು ನೀಡಲಾಗುತ್ತದೆ. ಆದರೆ ಅವುಗಳಲ್ಲಿ ಪೊಟ್ಯಾಶಿಯಮ್ ಸೈನೈಡ್ ಅಂಶಗಳಿವೆ ಎಂದು ಅವರು ಹೇಳಿದರು. ಆದರೆ, ನಾನು ಹಾಗೆ ಹೇಳಿದರೆ, ಜನರು ನನ್ನ ಮೇಲೆ ಕೋಪಗೊಳ್ಳುತ್ತಾರೆ. ಈ ಪುಸ್ತಕಗಳ ವಿರುದ್ಧ ನಾನು ಏನನ್ನಾದರೂ ಹೇಳಿದರೆ ಜನರು ನನ್ನ ತಲೆಗೆ 10 ಕೋಟಿ ರೂ. ಬಹುಮಾನ ಘೋಷಿಸುತ್ತಾರೆ ಎಂದೂ ಹೇಳಿದ್ದಾರೆ.

I.N.D.I alliance attack on Sanatan Dharma continues,
Now Bihar's Education Minister Chandrashekhar-

If 55 types of dishes are served and potassium cyanide is mixed in it, will you eat it? There is something called Potassium Cyanide in Hindu Scriptures.pic.twitter.com/kgsDIgNCSM

— Megh Updates 🚨™ (@MeghUpdates)

ಅಲ್ಲದೆ, “ಇತರ ಧರ್ಮಗಳ ಕುರಿತು ಮೋಹನ್ ಭಾಗವತ್ (ಆರ್‌ಎಸ್‌ಎಸ್ ಮುಖ್ಯಸ್ಥ) ಹೇಳಿಕೆಗಳನ್ನು ಯಾರೂ ಪ್ರಶ್ನಿಸುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರು ಇತರ ಧರ್ಮಗಳನ್ನು ಅವಮಾನಿಸಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ನಮ್ಮ ಧರ್ಮಗ್ರಂಥಗಳು ಜಾತಿಯನ್ನು ಪ್ರತಿನಿಧಿಸುತ್ತವೆ ಮತ್ತು ಅವುಗಳನ್ನು ಅನುಸರಿಸುವವರೆಗೂ ಜಾತಿ ಸಮೀಕ್ಷೆಯ ಅವಶ್ಯಕತೆ ಇರುತ್ತದೆ’’ ಎಂದೂ ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್‌ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ ಉದಯನಿಧಿ ದಕ್ಷಿಣ ಭಾರತದ ಪಪ್ಪು: ಅಣ್ಣಾಮಲೈ ವ್ಯಂಗ್ಯ

ಆರ್‌ಜೆಡಿ ಸಚಿವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟೀಕೆ ಮಾಡಿದೆ. "ಸಚಿವ ಚಂದ್ರಶೇಖರ್ ಅವರು ರಾಮಚರಿತಮಾನಗಳ ಬಗ್ಗೆ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.  ನಿತೀಶ್ ಕುಮಾರ್ ಇದನ್ನು ಕೇಳುತ್ತಿಲ್ಲವೇ? ನಿತೀಶ್ ಕುಮಾರ್ ಅವರು ಸನಾತನವನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ" ಎಂದು ಬಿಜೆಪಿ ವಕ್ತಾರ ನೀರಜ್ ಕುಮಾರ್ ಹೇಳಿದ್ದಾರೆ.

ಹಾಗೂ, ಚಂದ್ರಶೇಖರ್ ಅವರಿಗೆ ಹಿಂದೂ ಧರ್ಮದ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಮತಾಂತರಗೊಳ್ಳಬಹುದು ಎಂದೂ ಸಲಹೆ ನೀಡಿದರು.

ಇದನ್ನೂ ಓದಿ: ನಾನು ಮತ್ತೆ ಮತ್ತೆ ಅದನ್ನೇ ಹೇಳುವೆ; ಸನಾತನ ಧರ್ಮ ನಿರ್ಮೂಲನೆ ಆಗಬೇಕೆಂಬ ಹೇಳಿಕೆ ಬದಲಿಲ್ಲ: ಉದಯನಿಧಿ ಸಮರ್ಥನೆ

ಇದನ್ನೂ ಓದಿ: ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ನಿರ್ಮೂಲನೆ ಮಾಡಿ: ಸ್ಟಾಲಿನ್‌ ಪುತ್ರ

click me!