ರಾಮಮಂದಿರಕ್ಕೆ ಮೂರೇ ದಿನದಲ್ಲಿ 100 ಕೋಟಿ: ದೇಶಾದ್ಯಂತ ಭರ್ಜರಿ ದೇಣಿಗೆ!

By Precilla Olivia DiasFirst Published Jan 18, 2021, 7:42 AM IST
Highlights

ರಾಮಮಂದಿರಕ್ಕೆ ಮೂರೇ ದಿನದಲ್ಲಿ 100 ಕೋಟಿ!| ದೇಶಾದ್ಯಂತ ಭರ್ಜರಿ ದೇಣಿಗೆ ಸಂಗ್ರಹ| 400 ಕೋಟಿ: ರಾಮಮಂದಿರ ನಿರ್ಮಾಣ ವೆಚ್ಚ| 1100 ಕೋಟಿ: ಮಂದಿರ ಸಂಕೀರ್ಣದ ಒಟ್ಟು ವೆಚ್ಚ

ನವದೆಹಲಿ(ಜ.18): ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರಕ್ಕೆ ಭಕ್ತರಿಂದ ಭರ್ಜರಿಯಾಗಿ ದೇಣಿಗೆ ಹರಿದು ಬರಲಾರಂಭಿಸಿದೆ. ದೇಣಿಗೆ ಸಂಗ್ರಹ ಆರಂಭವಾದ ಮೂರೇ ದಿನಗಳಲ್ಲಿ ಅಂದಾಜು 100 ಕೋಟಿ ರು. ಹಣ ಸಂಗ್ರಹವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿರುವ ರಾಯ್‌ ‘ದೇಶದ ವಿವಿಧೆಡೆ ಸಂಗ್ರಹವಾದ ಹಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಟ್ರಸ್ಟ್‌ನ ಕೇಂದ್ರ ಕಚೇರಿ ತಲುಪಿಲ್ಲ. ಆದರೆ ನಮ್ಮ ಕಾರ್ಯಕರ್ತರು ನೀಡಿರುವ ಮಾಹಿತಿ ಅನ್ವಯ ಈವರೆಗೆ 100 ಕೋಟಿ ರು. ಆಸುಪಾಸಿನಷ್ಟುಹಣ ಸಂಗ್ರಹವಾಗಿದೆ’ ಎಂದಿದ್ದಾರೆ.

ಸಂಪೂರ್ಣವಾಗಿ ಭಕ್ತರ ದೇಣಿಗೆ ಹಣದಿಂದಲೇ ರಾಮಮಂದಿರ ದೇಗುಲ ಮತ್ತು ದೇಗುಲ ಸಂಕೀರ್ಣವನ್ನು ನಿರ್ಮಿಸುವ ಉದ್ದೇಶವನ್ನು ಟ್ರಸ್ಟ್‌ ಹೊಂದಿದೆ. ಇದಕ್ಕಾಗಿ ಸಂಕ್ರಾತಿ ದಿನವಾದ ಜ.14ರಿಂದ ಫೆ.27ರವರೆಗೆ ದೇಶವ್ಯಾಪಿ ದೇಣಿಗೆ ಸಂಗ್ರಹದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಾಮಮಂದಿರಕ್ಕೆ 300-400 ಕೋಟಿ ರು. ಮತ್ತು ಒಟ್ಟಾರೆ ರಾಮಮಂದಿರ ಸಂಕೀರ್ಣಕ್ಕೆ 1100 ಕೋಟಿ ರು. ವೆಚ್ಚವಾಗುವ ಸಾಧ್ಯತೆ ಇದೆ ಎಂದು ಟ್ರಸ್ಟ್‌ ಅಂದಾಜಿಸಿದೆ

click me!