
ಆಯೋಧ್ಯೆ(ಜ.20) ಭಗವಾನ್ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ಈಗಾಗಲೇ ಗಣ್ಯರು ಆಯೋಧ್ಯೆಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 6000ಕ್ಕೂ ಹೆಚ್ಚು ಗಣ್ಯರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಸುರಕ್ಷತೆ ದೃಷ್ಟಿಯಿಂದ ಇಂದು(ಜ.20) ರಾತ್ರಿ 8 ಗಂಟೆಯಿಂದ ಆಯೋಧ್ಯೆ ಗಡಿಗಳು ಬಂದ್ ಆಗಲಿದೆ. ಅನುಮತಿ ಇಲ್ಲದೆ ಯಾರಿಗೂ ಪ್ರವೇಶವಿಲ್ಲ. ಗಡಿಯಿಂದ ಆಯೋಧ್ಯೆ ಒಳ ಪ್ರವೇಶಿಸಲು ಪಾಸ್ ಅಗತ್ಯವಿದೆ.
ಮೋದಿ ಸೇರಿದಂತ ಸಾವಿರಾರು ಗಣ್ಯರು ಆಗಮಿಸುವ ಹಿನ್ನಲೆಯಲ್ಲಿ ಭದ್ರತಾ ಎಜೆನ್ಸಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಭದ್ರತಾ ಕಾರಣದಿಂದ ಇಂದು ರಾತ್ರಿಯಿಂದಲೇ ಆಯೋಧ್ಯೆ ಗಡಿಗಳನ್ನು ಬಂದ್ ಮಾಡಲಾಗುತ್ತದೆ. ಬೇರೆಕಡೆಯಿಂದ ಅಯೋಧ್ಯೆ ಪ್ರವೇಶಕ್ಕೆ ಅನುಮತಿ ಕಡ್ಡಾಯವಾಗಿದೆ. ಆಯೋಧ್ಯೆಯಿಂದ ಹೊರ ಹೊಗಲು ಸಮಸ್ಯೆ ಇಲ್ಲ. ಆದರೆ ಆಯೋಧ್ಯೆ ಒಳ ಪ್ರವೇಶಿಸಲು ಮಾತ್ರ ಅನುಮತಿ ಅಗತ್ಯವಿದೆ.
ರಾಮಲಲ್ಲಾ ಪ್ರಾಣಪ್ರತಿಷ್ಠೆ To ಸಾರ್ವಜನಿಕ ಕಾರ್ಯಕ್ರಮ, ಜ.22ರ ಪ್ರಧಾನಿ ಮೋದಿ ವೇಳಾಪಟ್ಟಿ ವಿವರ!
ಆಹ್ವಾನಿತ ಗಣ್ಯರು, ಪಾಸ್ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಆಯೋಧ್ಯೆಗೆ ಪ್ರವೇಶ ನೀಡಲಾಗುತ್ತದೆ. ಜನವರಿ 20 ರಾತ್ರಿ 8 ಗಂಟೆಯಿಂದ ಜನವರಿ 23ರ ವರೆಗೆ ಆಯೋಧ್ಯೆ ಗಡಿಗಳು ಬಂದ್ ಆಗಿರಲಿದೆ. ಜನವರಿ 22ರಂದು ಪ್ರಾಣಪ್ರತಿಷ್ಠೆ ಬಳಿಕವೂ ಗಡಿಗಳು ತೆರೆದುಕೊಳ್ಳುವುದಿಲ್ಲ. ಜನವರಿ 23ರಿಂದ ಆಯೋಧ್ಯೆ ಗಡಿಗಳು ತೆರೆದುಕೊಳ್ಳಲಿದೆ. ಜನವರಿ 23ರಿದಂದಲೇ ರಾಮ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ.
ಮಾಧ್ಯಮ ಹಾಗೂ ಪತ್ರಕರ್ತರು ತಮ್ಮ ವಾಹನಗಳನ್ನು ಫಟಿಕ ಶಿಲಾ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡುವುದು ಕಡ್ಡಾಯವಾಗಿದೆ. ಆಯೋಧ್ಯೆಯಲ್ಲಿ ಯಾವುದೇ ವಾಹನ ಓಡಾಡುವಂತಿಲ್ಲ. ಕೇವಲ ಅನುಮತಿ ಹೊಂದಿದ ವಾಹನಗಳು, ಟ್ರಸ್ಟ್, ಭದ್ರತಾ ಪಡೆ ಸೇರಿದಂತೆ ಆಯ್ದ ವಾಹನಗಳಿಗೆ ಮಾತ್ರ ಅವಕಾಶವಿದೆ.
ಸಾರ್ವಜನಿಕರಿಗೆ ರಾಮ ಮಂದಿರ ದರ್ಶನಕ್ಕೆ ಜನವರಿ 23ರಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ಅನಾನುಕೂಲತೆಗಳು ಆಗದಂತೆ ನೋಡಿಕೊಳ್ಳಲು ಟ್ರಸ್ಟ್ ಮುಂಜಾಗ್ರತ ಕ್ರಮ ಕೈಗೊಂಡಿದೆ. ಇನ್ನು ಆಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ಸಾರಿಗೆ ಕೂಡ ಲಭ್ಯವಿದೆ. ಆಯೋಧ್ಯೆ ಹಾಗೂ ಸುತ್ತಮುತ್ತಲಿನ ಪಟ್ಟಣಗಳಲ್ಲಿನ ಹೊಟೆಲ್ ಸಂಪೂರ್ಣ ಬುಕ್ ಆಗಿವೆ.
ರಾಮೇಶ್ವರದಲ್ಲಿ ಪವಿತ್ರ ಸಮುದ್ರ ಸ್ನಾನ ಮಾಡಿ ರಾಮನಾಥನ ದರ್ಶನ ಪಡೆದ ಮೋದಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ