Rajya Sabha Nomination; ದಕ್ಷಿಣ ಭಾರತೀಯರಿಗೆ ಮೋದಿ ಭರ್ಜರಿ ಗಿಫ್ಟ್

By Suvarna News  |  First Published Jul 7, 2022, 9:23 AM IST

ದಕ್ಷಿಣದವರೆಂದರೆ ಒಂದು ರೀತಿಯ ತಾತ್ಸಾರ , ದಕ್ಷಿಣದವರೆಂದರೆ ಬರೀ ಮದರಾಸಿ, ದಕ್ಷಿಣದವರೆಂದರೆ ಇಡ್ಲಿ-ಮೆದುವಡ ಎನ್ನುವ ಕಾಲ ಈಗಿಲ್ಲ. ರಾಜ್ಯಸಭೆಗೆ ಈಗ ದಕ್ಷಿಣದ ದೃವತಾರೆಗಳ ಪ್ರವೇಶ 


ಬೆಂಗಳೂರು(ಜು.7): ನ್ಯಾಯ-ನೀತಿ ಮೂರ್ತಿವೆತ್ತ ಸತ್ಯದೈವದ ಆರಾಧಕ, ನಮ್ಮ ಹೆಮ್ಮೆಯ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಕರ್ನಾಟಕವನ್ನು ಪ್ರತಿನಿಧಿಸಲು ಹೊರಟ್ಟಿದ್ದಾರೆ ಎನ್ನುವುದೇ ಈ ಹೊತ್ತಿನ ಹಾಲು ಕುಡಿಯುವ ವಿಷಯ ! ಖಾವಂದರು ಬರೀ ದೇವಸ್ಥಾನ - ಧರ್ಮಾಧಿಕಾರಿ ಮಾತ್ರವಲ್ಲ , ಸಾಮಾಜಿಕ ಕ್ಷೇತ್ರದಲ್ಲಿ ಸದ್ದಿಲ್ಲದೇ ಕ್ರಾಂತಿ ಮಾಡಿದ ಮಹನೀಯರು .

ಸಂಗೀತದ ದೇವರೇಂದೇ  ಎಂದೇ ಆರಾಧಿಸ್ಪಡುವ “ಇಸೈಜ್ಞಾನಿ”  ಇಳಯರಾಜ  ರಾಜ್ಯಸಭೆಗೆ ಪ್ರವೇಶ ಮಾಡುತ್ತಿರುವ ಮತ್ತೋರ್ವ ಕಲಾಸಾರ್ವಭೌಮ. ತಾಯಿ ಮೂಕಾಂಬಿಕೆಯ ಪರಮ ಭಕ್ತರಾದ ಇಳಯರಾಜ ಒಂದು ಕಾಲದಲ್ಲಿ ತನ್ನ ಹೆಸರಿನ ಬಲ ಮಾತ್ರದಿಂದ ತಮಿಳು ಚಿತ್ರರಂಗವನ್ನು ಆಳಿದವರು . ಸಂಗೀತಕ್ಕೆ ಭಾಷೆಯ ಗಡಿ ಇಲ್ಲ ಅಂತೆಯೇ ಇಳಯರಾಜ ಸಂಗೀತಕ್ಕೂ ಯಾವ ಗಡಿ ಇಲ್ಲ . ತಮಿಳು, ತೆಲುಗು, ಕನ್ನಡ, ಮಲೆಯಾಳಿ , ಹಿಂದಿ ಪ್ರತಿ ಭಾಷೆಯಲ್ಲೂ ಇಳಯ ರಾಜ  ಸಂಗೀತ ನೀಡಿದ ಗೀತೆಗಳು ಅತ್ಯಂತ ಪ್ರಸ್ತುತ ಹಾಗು ಅಜರಾಮರ. ಇಳಯ ರಾಜ ಸಿನಿಮಾ ಸಂಗೀತಕ್ಕೆ ರಾಜಮರ್ಯಾದೆ ತಂದಿತ್ತ ಮಹನೀಯ ಎಂದರೆ ತಪ್ಪಗಲಾರದು.

Tap to resize

Latest Videos

ರಾಜ್ಯಸಭೆಗೆ ನಾಮನಿರ್ದೇಶನ: ಮೋದಿ ನನಗೆ ದೇಶಸೇವೆಯ ಅವಕಾಶ ಕೊಟ್ಟಿದ್ದಾರೆ:

ಕೇರಳದ ಜಿಂಕೆ ಮರಿ  PT ಉಷಾ ಕೇರಳದ ಮೂಲಕ ರಾಜ್ಯ ಸಭೆಗೆ ನಾಮ ನಿರ್ದೇಶನಗೊಂಡಿದ್ದಾರೆ …. ಭಾರತೀಯರು ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದು ಪದಕ ಪಡೆಯಬಹುದೆಂಬ ಮೊದಲ ಕನಸು ಬಿತ್ತಿದ ಈ ಓಟಗಾರ್ತಿ ಅದೆಷ್ಟು ಕ್ರೀಡಾಸಕ್ತರ ಪ್ರೇರಣೆ . ಭಾರತದ ಕೀರ್ತಿಯನ್ನು ತನ್ನ ಕ್ರೀಡಾಸಾಧನೆಯ ಮೂಲಕ ಬೆಳಗಿದ ಈ ಸಾಧಕಿ ಈಗ ರಾಜ್ಯಸಭೆ ಪ್ರವೇಶಿಸುತ್ತಿರುವುದು just fantastic 👍

ಮಗಧೀರ, ಬಾಹುಬಲಿ,  ಮಣಿಕರ್ಣಿಕಾ ಜಾನ್ಸಿರಾಣಿ , RRR ಚಿತ್ರಗಳ  ಅಪ್ರತಿಮ ಕಥೆಗಾರ , ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ತನ್ನ ಚಿತ್ರಕಥೆಗಳ ಮೂಲಕ ಜಗತ್ತಿನಾದ್ಯಂತ ಪಸರಿಸಿದ ವಿಜಯೇಂದ್ರ ಪ್ರಸಾದ್ ತೆಲುಗು ಭಾಷಿಗರ ಹೆಮ್ಮೆಯ ಪ್ರತಿನಿಧಿಯಾಗಿ ರಾಜ್ಯಸಭೆಯನ್ನು ಪ್ರವೇಶಿಸಲಿದ್ದಾರೆ.

ವೀರೇಂದ್ರ ಹೆಗ್ಗಡೆ, ಪಿಟಿ ಉಷಾ, ವಿಜಯೇಂದ್ರ ಪ್ರಸಾದ್‌, ಇಳಯರಾಜ ರಾಜ್ಯಸಭೆಗೆ

Is it not ವೇ one more master stroke! ? ಸಿನಿಮಾ ಎಂದರೆ ಬರೀ Bollywood , ರಾಜ್ಯಸಭೆಗೆ ನಾಮನಿರ್ದೇಶನವಾದರೂ ಬೇಕಾಬಿಟ್ಟಿ ಸಂಸದರಾಗಿದ್ದ ತಾರಾಮಣಿಗಳು , celebrityಗಳು ಇನ್ನು ಮುಟ್ಟಿ ನೋಡಿಕೊಳ್ಳಬೇಕು !  ದಕ್ಷಿಣದ ಈ ನಾಲ್ವರು ಸಾಧಕರನ್ನು ಗುರುತಿಸಿ ಭಾಷೆಯ , ಕ್ಷೇತ್ರದ ಎಲ್ಲಾ ತಾರತಮ್ಯವನ್ನು ನೀಗಿ ಅರ್ಹರಿಗೆ ಪುರಸ್ಕರಿಸಿದ ನಿರ್ಧಾರಕ್ಕೊಂದು ನಮೋ ನಮಃ

-ವಿನಯ್ ಶಿವಮೊಗ್ಗ

click me!