ಇಬ್ಬರು ಕಾಂಗ್ರೆಸ್ ಶಾಸಕರಿಗೆ ಶಾಕ್ ಕೊಟ್ಟ ಕೋರ್ಟ್, 11 ವರ್ಷ ಹಳೇ ಕೇಸ್‌ನಲ್ಲಿ 1 ವರ್ಷ ಜೈಲು

Published : Jun 18, 2025, 05:21 PM IST
delhi high court

ಸಾರಾಂಶ

ಇಬ್ಬರು ಕಾಂಗ್ರೆಸ್ ಶಾಸಕರಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟಗೊಂಡಿದೆ. 11 ವರ್ಷ ಹಳೇ ಪ್ರಕರಣದ ತೀರ್ಪನ್ನು ಕೋರ್ಟ್ ಪ್ರಕಟಿಸಿದೆ. ಸುದೀರ್ಘ ವಿಚಾರಣೆ ಬಳಿಕ ಇಬ್ಬರು ಕಾಂಗ್ರೆಸ್ ಶಾಸಕರು 9 ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ 1 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

ಜೈಪುರ(ಜೂ.18) ಇಬ್ಬರು ಕಾಂಗ್ರೆಸ್‌ನ ಹಾಲಿ ಶಾಸಕರು ಸೇರಿದಂತೆ 9 ಮಂದಿ ತಪ್ಪಸೆಗಿದ್ದು ಸಾಬೀತಾಗಿದೆ. ಸುದೀರ್ಘ ವಿಚಾರಣೆ ಬಳಿಕ ಇದೀಗ ಕೋರ್ಟ್ ಶಿಕ್ಷೆಯನ್ನು ಪ್ರಕಟಿಸಿದೆ. ಕಾಂಗ್ರೆಸ್‌ನ ಇಬ್ಬರು ಶಾಸಕರು ಸೇರಿದಂತೆ 9 ಮಂದಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಬರೋಬ್ಬರಿ 11 ವರ್ಷಗಳ ಹಿಂದಿನ ಪ್ರಕರಣಟ ಇದಾಗಿದ್ದು, ಇದೀಗ ಕೋರ್ಟ್ ಪ್ರಕರಣದ ತೀರ್ಪು ನೀಡಿದೆ. ಈ ತೀರ್ಪು ಇದೀಗ ಕಾಂಗ್ರೆಸ್ ಪಾಳಯದಲ್ಲಿ ಕೋಲಾಹಲ ಸೃಷ್ಟಿಸಿದೆ. ರಾಜಸ್ಥಾನ ಕಾಂಗ್ರೆಸ್‌ ಶಾಸಕರಾದ ಮುಕೇಶ್ ಬಾಕರ್ ಹಾಗೂ ಮನೀಶ್ ಯಾದವ್ ಶಿಕ್ಷೆಗೆ ಗುರಿಯಾಗಿದ್ದಾರೆ. ಶಿಕ್ಷೆ ಪ್ರಮಾಣ ಒಂದು ವರ್ಷವಾಗಿರುವ ಕಾರಣ ಇಬ್ಬರು ಶಾಸಕರು ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ.

11 ವರ್ಷಗಳ ಹಿಂದಿನ ಕೇಸ್, ಈಗ ತೀರ್ಪು ಪ್ರಕಟ

ಜೈಪುರ ಜಿಲ್ಲಾ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. 11 ವರ್ಷಗಳ ಹಿಂದೆ ಅಂದರೆ ಆಗಸ್ಟ್ 13, 2014ರಲ್ಲಿ ಈ ಪ್ರಕರಣ ನಡೆದಿತ್ತು. ನಿಯಮ ಬಾಹಿರವಾಗಿ ಪ್ರತಿಭಟನೆ ಆಯೋಜಿಸಿದ್ದ ಈ ಇಬ್ಬರು ಕಾಂಗ್ರೆಸ್ ನಾಯಕರು, ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದರು. ರಾಜಸ್ಥಾನ ವಿಶ್ವವಿದ್ಯಾಲಯದ ಹೊರಭಾರದ ಪ್ರಮುಖ ರಸ್ತೆಯಾದ ಜೆಎಲ್‌ಎನ್ ಮಾರ್ಗ್ ರಸ್ತೆಯನ್ನು ಸುಮಾರು 20 ನಿಮಿಷಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಕಾಂಗ್ರೆಸ್‌ನ ಇಬ್ಬರು ನಾಯಕರು ಯಾವುದೇ ಅನುಮತಿ ಪಡೆದಿರಲಿಲ್ಲ. ಇತ್ತ ರಸ್ತೆ ತಡೆದು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ ತಂದಿಟ್ಟಿದ್ದರು.

ಕಾಂಗ್ರೆಸ್ ಸರ್ಕಾರದಲ್ಲಿ ಮೆತ್ತಗಾಗಿದ್ದ ಕೇಸ್

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಈ ಪ್ರಕರಣ ಮೆತ್ತಗಾಗಿತ್ತು. ಈ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ಹಿಂದೇಟು ಹಾಕಿದ್ದರು. 2016ರಲ್ಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು. 2016ರಿಂದ ಇದುವರೆಗೆ ಸತತವಾಗಿ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಇದೀಗ ತೀರ್ಪು ಪ್ರಕಟಗೊಂಡಿದೆ. ಇಬ್ಬರು ಹಾಲಿ ಶಾಸಕರು, ಹಲವು ಕಾಂಗ್ರೆಸ್ ನಾಯಕರ ವಿರುದ್ದ ಪ್ರಕರಣ ದಾಖಳಾಗಿತ್ತು. ಈ ಪ್ರಕರಣದಲ್ಲಿ 9 ಮಂದಿ ಮೇಲಿನ ಆರೋಪ ಸಾಬೀತಾಗಿದೆ. ಹೀಗಾಗಿ 9 ಮಂದಿಗೆ 1 ವರ್ಷ ಜೈಲು ಶಿಕ್ಷೆಯನ್ನು ಜೈಪುರ ಕೋರ್ಟ್ ಪ್ರಕಟಿಸಿದೆ.

ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಜಾಮೀನು

ರಾಜಸ್ಥಾನ ಕಾಂಗ್ರೆಸ್‌ನ ಶಾಸಕರಾದ ಮುಕೇಶ್ ಬಾಕರ್ ಹಾಗೂ ಮನೀಶ್ ಯಾದವ್ ಮೇಲಿನ ಆರೋಪ ಸಾಬೀತಾಗಿರುವ ಕಾರಣ ಶಿಕ್ಷೆ ಪ್ರಮಾಣ ಕೂಡ ಪ್ರಕಟಗೊಂಡಿದೆ. ಇದರ ಜೊತೆಗೆ ಮಂದಿ 7 ಮಂದಿಗೂ 1 ವರ್ಷ ಜೈಲು ಶಿಕ್ಷೆ ಪ್ರಕಟಗೊಂಡಿದೆ. ಆದರೆ ಶಿಕ್ಷೆ ಪ್ರಕಟಕ್ಕೂ ಮುನ್ನವೇ ಈ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಷ್ಟೇ ಅಲ್ಲ 1 ತಿಂಗಳ ಕಾಲಾವಾಕಾಶ ನೀಡಿದೆ. ಇದರೊಳಗೆ ಹೈಕೋರ್ಟ‌ಗೆ ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಶಾಸಕ ಸ್ಥಾನಕ್ಕೆ ಯಾವುದೇ ಧಕ್ಕೆ ಇಲ್ಲ

ಇಬ್ಬರು ಹಾಲಿ ಶಾಸಕರಿಗೆ 1 ವರ್ಷ ಶಿಕ್ಷೆ ಪ್ರಕಟಗೊಂಡಿದೆ. ಹೀಗಾಗಿ ಇವರ ಶಾಸಕ ಸ್ಥಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಶಾಸಕ ಹಾಗೂ ಸಂಸದರ ನ್ಯಾಯಲಯದ ನಿಯಮದ ಪ್ರಕಾರ ಜನಪ್ರತಿಧಿನಿದಿಯ ಶಿಕ್ಷೆ ಪ್ರಕರಣಾ 2 ವರ್ಷಕ್ಕಿಂದ ಮೇಲ್ಪಟ್ಟಿದ್ದರೆ ಮಾತ್ರ ಶಾಸಕ ಸ್ಥಾನದಿಂದ ಅನರ್ಹರಾಗಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್