ತಂಗಿಯನ್ನ ಭೇಟಿ ಮಾಡಬೇಕು ಎಂದಿದ್ದಕ್ಕೆ ಪತ್ನಿಯನ್ನ ಬೈಕ್‌ಗೆ ಕಟ್ಟಿ ಎಳೆದೊಯ್ದ ಪತಿ!

Published : Aug 14, 2024, 08:03 AM IST
ತಂಗಿಯನ್ನ ಭೇಟಿ ಮಾಡಬೇಕು ಎಂದಿದ್ದಕ್ಕೆ ಪತ್ನಿಯನ್ನ ಬೈಕ್‌ಗೆ ಕಟ್ಟಿ ಎಳೆದೊಯ್ದ ಪತಿ!

ಸಾರಾಂಶ

ಸೋದರಿ ಭೇಟಿ ಮಾಡಬೇಕು ಎಂಬ ಪತ್ನಿಯ ಬೇಡಿಕೆಯಿಂದ ಸಿಟ್ಟಿಗೆದ್ದ ಪತಿ, ಆಕೆಯನ್ನು ಬೈಕ್‌ಗೆ ಕಟ್ಟಿ ಸುಮಾರು ದೂರ ಎಳೆದೊಯ್ದ ಭೀಕರ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ನಹರ್‌ಸಿಂಗಾಪುರ ಎಂಬಲ್ಲಿ ನಡೆದಿದೆ.

ಜೈಪುರ: ಸೋದರಿ ಭೇಟಿ ಮಾಡಬೇಕು ಎಂಬ ಪತ್ನಿಯ ಬೇಡಿಕೆಯಿಂದ ಸಿಟ್ಟಿಗೆದ್ದ ಪತಿ, ಆಕೆಯನ್ನು ಬೈಕ್‌ಗೆ ಕಟ್ಟಿ ಸುಮಾರು ದೂರ ಎಳೆದೊಯ್ದ ಭೀಕರ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ನಹರ್‌ಸಿಂಗಾಪುರ ಎಂಬಲ್ಲಿ ನಡೆದಿದೆ.

ವೈರಲ್‌ ಆದ ವಿಡಿಯೋದಲ್ಲಿ ಪ್ರೇಮ್‌ರಾಮ್‌ ಮೇಘ್ವಾಲ್‌ ಎಂಬಾತ ಪತ್ನಿಯ ಎರಡೂ ಕಾಲುಗಳನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದಿದ್ದಾನೆ. ಬಳಿಕ ಬೈಕ್‌ ನಿಲ್ಲಿಸಿ ಆಕೆಯ ದೇಹವನ್ನು ಮೆಟ್ಟಿಕೊಂಡು ನಿಂತಿರುವುದು ಕಂಡುಬಂದಿದೆ.

 

ರಾಂಗ್ ನಂಬರ್‌ನಿಂದ ಮಹಿಳೆಯರ ಸಲಿಂಗಿ ಪ್ರೀತಿ ಶುರು: ಪತಿ ಬಿಟ್ಟು ಪರಾರಿಯಾದ ಬೆನ್ನಲ್ಲೇ ಟ್ವಿಸ್ಟ್!

ಕಳೆದ ತಿಂಗಳು ನಡೆದಿದೆ ಎನ್ನಲಾದ ಘಟನೆ ಕುರಿತು ಪೊಲೀಸರು ಮಹಿಳೆಯ ಪತಿ ಪ್ರೇಮರಾಮ್‌ ಮತ್ತು ಆಕೆಯ ಮೇಲಿನ ದೌರ್ಜನ್ಯ ತಡೆಯದೇ ವಿಡಿಯೋ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣದ ದಾಖಲಿಸಿದ್ದಾರೆ ಹಾಗೂ ಪ್ರೇಮರಾಮ್‌ನನ್ನು ಬಂಧಿಸಿದ್ದಾರೆ.

ಘಟನೆ ಬಳಿಕ ಮಹಿಳೆ ದೂರು ನೀಡದೆ ಬಂಧುಗಳ ಮನೆಗೆ ಹೋಗಿ ನೆಲೆಸಿದ್ದಳು. ವಿಡಿಯೋ ವೈರಲ್‌ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಈ ನಡುವೆ ಮಾನವ ಕಳ್ಳಸಾಗಣೆಯ ಕೋನದಿಂದಲೂ ಪ್ರಕರಣದ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live : 72 ವರ್ಷಗಳ ಇತಿಹಾಸ ಬದಲು; ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಿಂದ ಗುಜರಾತ್‌ಗೆ ಶಿಫ್ಟ್
LPG ಗ್ರಾಹಕರಿಗೆ ಗುಡ್ ನ್ಯೂಸ್; ಇನ್ಮುಂದೆ ಹಳ್ಳಿ-ಸಿಟಿ ಎಲ್ಲೆಡೆ ಗ್ಯಾಸ್ ಸಿಲಿಂಡರ್‌ಗೆ ಕಾಯುವ ದಿನ ಇಳಿಕೆ