ರಾಜಸ್ಥಾನದಲ್ಲಿ ಕೈ ತೊಳೆದುಕೊಂಡ ಕಾಂಗ್ರೆಸ್‌, ಮರುಭೂಮಿಯಲ್ಲಿ ಅರಳಿದ ಕಮಲ!

Published : Dec 03, 2023, 07:04 PM IST
ರಾಜಸ್ಥಾನದಲ್ಲಿ ಕೈ ತೊಳೆದುಕೊಂಡ ಕಾಂಗ್ರೆಸ್‌, ಮರುಭೂಮಿಯಲ್ಲಿ ಅರಳಿದ ಕಮಲ!

ಸಾರಾಂಶ

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಕ್ಷೇತ್ರಗಳ ಸಂಖ್ಯೆ ಅಧಿಕೃತವಾಗಿ ಬಹುಮತದ ಗಡಿ ದಾಟಿದೆ. ಸಂಜೆ 6 ಗಂಟೆಯ ವೇಳೆ ರಾಜಸ್ಥಾನದಲ್ಲಿ ಬಿಜೆಪಿ 103 ಸೀಟ್‌ಗಳಲ್ಲಿ ಗೆಲುವು ಕಂಡಿದ್ದರೆ, 12 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇನ್ನು 27 ಕ್ಷೇತ್ರಗಳ ಮತ ಎಣಿಕೆ ಜಾರಿಯಲ್ಲಿದೆ.  

ನವದೆಹಲಿ(ಡಿ.3): ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಕೊನೆ ಹಾಡಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇಂದಿನ ಮತಎಣಿಕೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಅನ್ವಯ ಬಿಜೆಪಿ ರಾಜಸ್ಥಾನದಲ್ಲಿ ಅಧಿಕೃತವಾಗಿ ಬಹುಮತದ ಮಾರ್ಕ್‌ ದಾಟಿದೆ. ಸಂಜೆ 6 ಗಂಟೆಯ ವೇಳೆ ರಾಜಸ್ಥಾನದಲ್ಲಿ ಬಿಜೆಪಿ 103 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು 12 ಸೀಟ್‌ಗಳಲ್ಲಿ ಮುನ್ನಡೆಯಲ್ಲಿದೆ. ಇನ್ನು ಕಾಂಗ್ರೆಸ್‌ ಪಕ್ಷ 59 ಕ್ಷೇತ್ರಗಳಲ್ಲಿ ಗೆದ್ದಿದ್ದು 10 ಸೀಟ್‌ಗಳಲ್ಲಿ ಮುನ್ನಡೆಯಲ್ಲಿದೆ. ಒಟ್ಟು 172 ಕ್ಷೇತ್ರಗಳ ಮತ ಎಣಿಕೆ ಮುಕ್ತಾಯವಾಗಿದೆ. ಇನ್ನು 27 ಕ್ಷೇತ್ರಗಳಲ್ಲಿ ಮತ ಎಣಿಕೆ ಬಾಕಿ ಇದೆ. ರಾಜಸ್ಥಾನದಲ್ಲಿ 101 ಬಹುಮತದ ಸಂಖ್ಯೆಯಾಗಿದೆ. ರಾಜಸ್ಥಾನದಲ್ಲಿ ಬಿಜೆಪಿ 115 ಸೀಟ್‌ ಗೆಲ್ಲಬಹುದು ಎನ್ನುವ ನಿರೀಕ್ಷೆ ಇಡಲಾಗಿದ್ದು, ಕಾಂಗ್ರೆಸ್‌ 69 ಸೀಟ್‌ ಗೆಲ್ಲುವ ಸಾಧ್ಯತೆ ಇದೆ.  200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಒಂದು ಕ್ಷೇತ್ರದಲ್ಲಿ ಅಭ್ಯರ್ಥಿ ಹಠಾತ್‌ ಸಾವು ಕಂಡ ಕಾರಣ ಮುಂದಿನ ದಿನಗಳಲ್ಲಿ ಆ ಕ್ಷೇತ್ರದ ಚುನಾವಣೆ ನಡೆಯಲಿದೆ. ರಾಜಸ್ಥಾನದಲ್ಲಿ ಗೆಲುವಿನ ಬೆನ್ನಲ್ಲಿಯೇ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಆರಂಭವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ವಸುಂಧರಾ ರಾಜೆ, ಅರುಣ್ ಮೇಘವಾಲ್ ಸೇರಿದಂತೆ ಪ್ರಮುಖರ ಹೆಸರು ಕೇಳಿ ಬರುತ್ತಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರ ಹೆಸರು ಕೂಡ ಸಿಎಂ ಸ್ಥಾನಕ್ಕೆ ಚಾಲ್ತಿಯಲ್ಲಿದೆ.

1993ರಿಂದ ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಅಲ್ಲಿನ ಜನರು ಅಧಿಕಾರ ಹಂಚಿದ್ದಾರೆ. ಪ್ರತಿ ಐದು ವರ್ಷಕ್ಕೊಮ್ಮೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅಧಿಕಾರ ಬದಲಾಗಿದೆ. ಈ ಅವಧಿಯಲ್ಲಿ ಅಶೋಕ್‌ ಗೆಹ್ಲೋಟ್‌ ಮೂರು ಬಾರಿ ರಾಜಸ್ಥಾನದ ಸಿಎಂ ಆಗಿದ್ದರೆ, ವಸುಂಧರಾ ರಾಜೇ ಎರಡು ಬಾರಿ ಸಿಎಂ ಆಗಿದ್ದಾರೆ.
 

ರಾಜಸ್ಥಾನದ ಸಿಎಂ ಅಭ್ಯರ್ಥಿಗಳು:
ವಸುಂಧರಾ ರಾಜೆ (Vasundhara Raje): ಎರಡು ಬಾರಿ ರಾಜಸ್ಥಾನದ ಸಿಎಂ ಆದ ಮಹಿಳೆ. 2003 ರಲ್ಲಿ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಒಬ್ಬರು ಮತ್ತು ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸಿಂಧಿಯಾ ರಾಜಮನೆತನದ ಕುಟುಂಬದ ಸದಸ್ಯೆ, ಧೋಲ್‌ಪುರದ ಬಮ್ರೌಲಿಯಾ ಕುಟುಂಬದ ಮಾತೃಪ್ರಧಾನಿ. ಅವರು ಪ್ರಸ್ತುತ ಚುನಾವಣೆಯಲ್ಲಿ ಝಲ್ರಾಪಟನ್‌ನಿಂದ ಸ್ಪರ್ಧೆ ಮಾಡಿ 53 ಸಾವಿರ ಮತಗಳಿಂದ ಗೆಲುವು ಕಂಡಿದ್ದಾರೆ.

ಅಶ್ವಿನಿ ವೈಷ್ಣವ್ (Ashwini Vaishnaw): ರೈಲ್ವೇ ಸಚಿವ ವೈಷ್ಣವ್ ರಾಜಸ್ಥಾನ ಮೂಲದವರು. ಅವರು ಒಡಿಶಾದ ರಾಜ್ಯಸಭಾ ಸದಸ್ಯರಾಗಿದ್ದಾರೆ ಮತ್ತು ಮರುಭೂಮಿ ರಾಜ್ಯದಲ್ಲಿ ಮೂರು ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿದ್ದಾರೆ. ಆದ್ದರಿಂದ ಅವರು ಸಿಎಂ ಸ್ಥಾನಕ್ಕಾಗಿ ಚರ್ಚೆಯಲ್ಲಿರುವ ಇನ್ನೊಬ್ಬ ವ್ಯಕ್ತಿ.

ಅರುಣ್ ಮೇಘವಾಲ್ (Arun Meghwal): ಪಕ್ಷದ ದಲಿತ ಮುಖ, ಮೇಘವಾಲ್ ಪ್ರಸ್ತುತ 2023 ರಿಂದ ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ (ಸ್ವತಂತ್ರ ಉಸ್ತುವಾರಿ) ಸಚಿವರಾಗಿ ಮತ್ತು 2017 ರಿಂದ ಸಂಸದೀಯ ವ್ಯವಹಾರಗಳ ರಾಜ್ಯ ಮತ್ತು 2021 ರಿಂದ ಸಂಸ್ಕೃತಿಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಿಕಾನೇರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಕೇಂದ್ರ ನಾಯಕತ್ವದಲ್ಲಿ ನೆಚ್ಚಿನವರಾಗಿದ್ದಾರೆ.

ದಿಯಾ ಕುಮಾರಿ(Diya Kumari):  ರಾಜ್‌ಸಮಂದ್‌ನ ಬಿಜೆಪಿ ಸಂಸದೆ. ಅವರು ಭಾರತದಲ್ಲಿ ಬ್ರಿಟಿಷ್ ರಾಜ್ ಸಮಯದಲ್ಲಿ ಜೈಪುರದ ರಾಜವಂಶದ ಕೊನೆಯ ಆಡಳಿತ ಮಹಾರಾಜರಾದ 2ನೇ ಮಾನ್ ಸಿಂಗ್ ಅವರ ಮೊಮ್ಮಗಳು.

ಬಾಬಾ ಬಾಲಕನಾಥ್ (Baba Balaknath): ಮಹಂತ್ ಬಾಲಕನಾಥ್ ಯೋಗಿ ಅವರು ಅಲ್ವಾರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಅವರು ಬಾಬಾ ಮಸ್ತನಾಥ್ ವಿಶ್ವವಿದ್ಯಾಲಯದ (BMU) ಕುಲಪತಿ. ವರದಿಗಳ ಪ್ರಕಾರ ಅವರು ಹಿಂದೂ ಧರ್ಮದ ನಾಥ ಪಂಥದ ಎಂಟನೇ ಮುಖ್ಯಸ್ಥ/ಮಹಾಂತ್ ಕೂಡ ಆಗಿದ್ದಾರೆ.

ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat ): ಶೇಖಾವತ್ ಅವರು ಪ್ರಸ್ತುತ ಜಲ ಶಕ್ತಿ ಸಚಿವಾಲಯದಲ್ಲಿ ಕೇಂದ್ರ ಸಂಪುಟ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಲೋಕಸಭೆಯಲ್ಲಿ ಜೋಧಪುರದ ಬಿಜೆಪಿಯಿಂದ ಸಂಸದರಾಗಿದ್ದಾರೆ. ಶೇಖಾವತ್ ಅವರು ಕೇಂದ್ರ ನಾಯಕತ್ವದ ನೆಚ್ಚಿನ ನಾಯಕರು ಮತ್ತು ಪ್ರಧಾನಿ ತಮ್ಮ ಎಲ್ಲಾ ಸಮಾವೇಶಗಳಲ್ಲಿ ಜಲ ಜೀವನ್ ಮಿಷನ್ ಅನ್ನು ಪ್ರಸ್ತಾಪಿಸಿದ್ದಾರೆ, ಆದ್ದರಿಂದ ಅವರು ಸಿಎಂ ಹುದ್ದೆಯನ್ನು ಪಡೆಯುವ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದಾರೆ.

'ಜನತಾ ಜನಾರ್ಧನನಿಗೆ ನನ್ನ ನಮನ..' ತ್ರಿವಿಕ್ರಮ ಸಾಧಿಸಿದ ಬಳಿಕ ಪ್ರಧಾನಿ ಮೋದಿ ಮೊದಲ ಟ್ವೀಟ್‌!

ಈ ಹಿಂದಿನ ವರದಿಗಳ ಪ್ರಕಾರ, ಎರಡು ಬಾರಿ ಸಿಎಂ ಆಗಿರುವ ಹಾಗೂ ರಾಜಸ್ಥಾನದ ರಾಜಕೀಯದ ನಾಡಿಮಿಳಿತವನ್ನು ತಿಳಿಸಿರುವ ವಸುಂಧರಾ ರಾಜೆ, ಚುನಾವಣೆಯಲ್ಲಿ ಪಕ್ಷ 100 ಸ್ಥಾನಗಳಲ್ಲಿ ಗೆದ್ದಲ್ಲಿ ಮೊದಲ ಆಯ್ಕೆಯಾಗಿ ಸಿಎಂ ಆಗಲಿದ್ದಾರೆ ಎಂದು ಬಿಜೆಪಿ ನಾಯಕರೇ ಹೇಳಿದ್ದರು. ಹಾಗೇನಾದರೂ ಪಕ್ಷ 120ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಕೇಂದ್ರ ಹಾಗೂ ಶಾಸಕರ ಅಭಿಪ್ರಾಯವನ್ನು ಪಡೆದು ಸಿಎಂ ಆಯ್ಕೆ ಮಾಡುವುದಾಗಿ ತಿಳಿಸಿತ್ತು. ಚುನಾವಣೆಯಲ್ಲಿ ರಾಜಸ್ಥಾನ ಸರ್ಕಾರದ ಸಚಿವರಾಗಿದ್ದ ರಮೇಶ್‌ ಚಂದ್‌ ಮೀನಾ, ವಿಶ್ವೇಂದ್ರ ಸಿಂಗ್‌, ಪ್ರತಾಪ್‌ ಸಿಂಗ್‌, ಶಕುಂತಲಾ ರಾವತ್‌, ರಾಜೇಂದ್ರ ಸಿಂಗ್‌ ಯಾದವ್‌ ಹಾಗೂ ಭನ್ವಾರ್‌ ಸಿಂಗ್‌ ಭಾಟಿ ಸೋಲು ಕಂಡಿದ್ದಾರೆ.

ಚುನಾವಣಾ ಸೋಲಿನ ಬೆನ್ನಲ್ಲೇ ಇಂಡಿ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಸಂದೇಶ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ