IAS-IPS ದಂಪತಿಯ ಬೃಹತ್ ಅಕ್ರಮ: ದುಬಾರಿ ಮೌಲ್ಯದ 36 ಮನೆ ಜಸ್ಟ್ ₹6 ಕೋಟಿಗೆ ಖರೀದಿ

Published : Nov 01, 2026, 07:31 AM IST
Rajasthan IAS Shikhar Agrawal IPS  Prashakha Mathur

ಸಾರಾಂಶ

ರಾಜಸ್ಥಾನದ ಐಎಎಸ್‌ ಅಧಿಕಾರಿ ಶಿಖರ್‌ ಅಗ್ರವಾಲ್‌ ಹಾಗೂ ಐಪಿಎಸ್‌ ಅಧಿಕಾರಿ ಪ್ರಶಾಖಾ ಮಾಥುರ್‌ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಬೃಹತ್ ಅಕ್ರಮ ಎಸಗಿದ್ದಾರೆ. ಕೇವಲ 6 ಕೋಟಿ ರೂ.ಗಳಿಗೆ 36 ಮನೆಗಳನ್ನು ಖರೀದಿಸಿದ ಆಘಾತಕರ ವಿಚಾರ ಎಸಿಬಿ ತನಿಖೆಯಿಂದ ಬಹಿರಂಗವಾಗಿದೆ.

ಜೈಪುರ: ರಾಜಸ್ಥಾನ ಐಎಎಸ್‌ ಅಧಿಕಾರಿ ಶಿಖರ್‌ ಅಗ್ರವಾಲ್‌ ಹಾಗೂ ಅವರ ಪತ್ನಿ, ಐಪಿಎಸ್‌ ಅಧಿಕಾರಿ ಪ್ರಶಾಖಾ ಮಾಥುರ್‌ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು, ಕೇವಲ 6 ಕೋಟಿ ರು.ಗಳಿಗೆ 36 ಮನೆಗಳನ್ನು ಖರೀದಿಸಿದ ಅಕ್ರಮ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಯಿಂದ ಬಹಿರಂಗವಾಗಿದೆ.

ಭ್ರಷ್ಟಾಚಾರ ಆರೋಪ, ಎಸಿಬಿಯಿಂದ ತನಿಖೆ

ಅಗ್ರವಾಲ್‌ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಎಸಿಬಿ ತನಿಖೆ ಆರಂಭಿಸಿತ್ತು. ಈ ವೇಳೆ ಆಘಾತಕರ ಮಾಹಿತಿಗಳು ಹೊರಬಿದ್ದಿವೆ.

ಕಡಿಮೆ ಬೆಲೆಯಲ್ಲಿ ದುಬಾರಿ ಮೌಲ್ಯದ ಮನೆಗಳ ಖರೀದಿ

ಅಗ್ರವಾಲ್‌ ಇತ್ತೀಚೆಗೆ ಉದಯಪುರದ ಬುಝ್ದಾದಲ್ಲಿ 20 ಮನೆಗಳನ್ನು ಖರೀದಿಸಿದ್ದರು. ಇವುಗಳಲ್ಲಿ 10 ಮನೆಗಳನ್ನು ತಮ್ಮ ಹೆಸರಿಗೆ ಮತ್ತು 10 ಮನೆಗಳನ್ನು ಪತ್ನಿಯ ಹೆಸರಿಗೆ ಮಾಡಿದ್ದರು. ಆಳ್ವಾರ್‌ನಲ್ಲಿಯೂ 8 ಮನೆಗಳನ್ನು ಖರೀದಿ ಮಾಡಿದ್ದರು. ಇನ್ನು, ಇಬ್ಬರು ಗಂಡುಮಕ್ಕಳ ಹೆಸರಿಗೆ 4 ಮನೆಗಳು ಮತ್ತು ಪತ್ನಿಯ ತಂದೆ-ತಾಯಿಯ ಹೆಸರಿನಲ್ಲಿ 4 ಮನೆಗಳನ್ನು ಖರೀದಿಸಿದ್ದರು. ಪ್ರತಿ ಮನೆಗೂ ಸರಿಸುಮಾರು 15 ಲಕ್ಷ ರು.ಗಳಂತೆ, ಕೇವಲ 6 ಕೋಟಿ ರು.ಗಳಿಗೆ 36 ಮನೆಗಳನ್ನು ಖರೀದಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫ್ರಾನ್ಸ್‌ನಲ್ಲಿ ಮತ್ತೆ ಬೃಹತ್‌ ವೀಕೆಂಡ್‌ ಪ್ರತಿಭಟನೆ ಕಿಚ್ಚು; ಸತತ 3ನೇ ವಾರ ಧರಣಿ, 3.2 ಲಕ್ಷ ಜನ ಭಾಗಿ
12 ವರ್ಷಗಳಲ್ಲಿ ಬಡತನದಿಂದ ಹೊರಬಂದ 49.6 ಕೋಟಿ ಜನ! ಶೇ. 57.7 ರಿಂದ ಶೇ. 16.1ಕ್ಕೆ ಕುಸಿತ