PM Narendra Modi Birthday: ಮೋದಿ ಜನ್ಮದಿನದಂದೇ ಭಾರತಕ್ಕೆ ಆಫ್ರಿಕಾ ಚೀತಾ

By Kannadaprabha News  |  First Published Sep 7, 2022, 8:26 AM IST

ಬಹುನಿರೀಕ್ಷಿತ ಆಫ್ರಿಕಾ ಚೀತಾಗಳ ಭಾರತಾಗಮನಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ.17ರಂದು ನಮೀಬಿಯಾ ಮೂಲದ ಚೀತಾಗಳು ಭಾರತಕ್ಕೆ ಬರಲಿವೆ.


ಭೋಪಾಲ್‌: ಬಹುನಿರೀಕ್ಷಿತ ಆಫ್ರಿಕಾ ಚೀತಾಗಳ ಭಾರತಾಗಮನಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ.17ರಂದು ನಮೀಬಿಯಾ ಮೂಲದ ಚೀತಾಗಳು ಭಾರತಕ್ಕೆ ಬರಲಿವೆ. ಭಾರತಕ್ಕೆ ಬಂದ ದಿನವೇ ಎಲ್ಲಾ ಚೀತಾಗಳನ್ನು ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಗುತ್ತಿದ್ದು, ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ. ಈ ವಿಷಯವನ್ನು ಸ್ವತಃ ಮಧ್ಯಪ್ರದೇಶದ (Madhya Pradesh) ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ (Shivraj Singh Chouhan)ಮಂಗಳವಾರ ಖಚಿತಪಡಿಸಿದ್ದಾರೆ.

ಈ ಬೆಳವಣಿಗೆಗೆ ಪೂರಕವಾಗಿ, ಚೀತಾಗಳ ಇಡುವ ಸ್ಥಳದ ಪರಿಸರದ ಪರಿಶೀಲನೆಗಾಗಿ ಆಫ್ರಿಕಾದಿಂದ ತಜ್ಞರ ತಂಡ ಮಂಗಳವಾರ ರಾಷ್ಟ್ರೀಯ ಉದ್ಯಾನಕ್ಕೆ (national park) ಭೇಟಿ ನೀಡಿದೆ. ಚಿರತೆಗಳನ್ನು ಕಾಡಿಗೆ ಬಿಡುವ ಮುನ್ನ 2-3 ತಿಂಗಳು ಅವುಗಳನ್ನು ಉದ್ಯಾನದ ಆವರಣದಲ್ಲೇ ಇಡಲಾಗುವುದು. 4-5 ಹೆಣ್ಣು ಸೇರಿದಂತೆ ಒಟ್ಟು 12 ಚೀತಾಗಳನ್ನು ಭಾರತಕ್ಕೆ ತರಲಾಗುತ್ತಿದೆ. ಸದ್ಯ 12 ಚೀತಾಗಳಿಗೆ ವಿವಿಧ ಸೋಂಕಿನಿಂದ ರಕ್ಷಣೆ ನೀಡುವ ಲಸಿಕೆಗಳನ್ನು ನೀಡಿ ನಮೀಬಿಯಾದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

प्रधानमंत्री नरेंद्र मोदी अपने जन्मदिन पर 17 सितंबर को कूनो राष्ट्रीय अभ्यारण में आ रहे हैं। इसी दिन दक्षिण अफ्रीका से चीते भी कूनो राष्ट्रीय उद्यान में आ रहे हैं। एमपी सीएम शिवारज सिंह चौहान ने दी जानकारी pic.twitter.com/s2VsMYtIOv

— NBTMadhyapradesh (@NBTMP)

Tap to resize

Latest Videos

Belagavi Leopard News: 24 ದಿನ ಕಳೆದ್ರೂ ಪತ್ತೆಯಾಗದ ಚಿರತೆ: ಕಾಂಗ್ರೆಸ್‌ ಕಾರ್ಯಕರ್ತೆಯರಿಂದ ಹೈಡ್ರಾಮ!

ದಕ್ಷಿಣ ಆಫ್ರಿಕಾ (South Africa) ಹಾಗೂ ನಮೀಬಿಯಾದಿಂದ (Namibia) ಏರ್‌ಲಿಫ್ಟ್ ಮೂಲಕ ಭಾರತಕ್ಕೆ ಬಂದಿಳಿಯಲಿರುವ ಚೀತಾಗಳನ್ನು ಅದೇ ದಿನ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುವುದು. ಮೋದಿ ಸೇರಿದಂತೆ ಗಣ್ಯರ ಆಗಮನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ಯಾನವನದ ಸಮೀಪ 7 ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. 1947ರಲ್ಲಿ ಛತ್ತೀಸಗಢದ (Chhattisgarh) ಕೊರಿಯಾ ಜಿಲ್ಲೆಯಲ್ಲಿ (Koria district) ಕಟ್ಟಕಡೆ ಬಾರಿ ಚಿರತೆಯನ್ನು ನೋಡಲಾಗಿತ್ತು. 1952ರಲ್ಲಿ ದೇಶದಿಂದ ಚೀತಾಗಳ ಸಂತತಿ ಅಳಿದು ಹೋಗಿದೆ ಎಂದು ಘೋಷಿಸಲಾಗಿತ್ತು.

Cheetah Operation: ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಎಲ್ಲಿದೆ ಚಿರತೆ? 

ಚಿರತೆಯು (ಪಾಂತೇರಾ ಪಾರ್ದೂಸ್) ಆಫ಼್ರಿಕಾ ಹಾಗೂ ಉಷ್ಣವಲಯ ಏಷ್ಯಾದ ಕೆಲವು ಭಾಗಗಳು, ಸೈಬೀರಿಯಾ(Siberia), ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದಿಂದ ಆಫ಼್ರಿಕಾದ ಉಪ ಸಹಾರಾ ಪ್ರದೇಶಗಳ ಬಹುಪಾಲು ಉದ್ದಗಲದವರೆಗಿನ ವ್ಯಾಪಕ ವ್ಯಾಪ್ತಿಯಲ್ಲಿರು ಫ಼ೆಲಿಡೈ (Felidae) ಕುಟುಂಬದ ಒಂದು ಸದಸ್ಯ ಪ್ರಾಣಿ. ಅವಾಸ ಸ್ಥಾನದ ನಾಶ ಹಾಗೂ ಛಿದ್ರೀಕರಣ, ಮತ್ತು ವ್ಯಾಪಾರ ಹಾಗೂ ಉಪಟಳ ನಿಯಂತ್ರಣಕ್ಕಾಗಿ ಬೇಟೆಯ ಕಾರಣ ಅದು ಅದರ ವ್ಯಾಪ್ತಿಕ್ಷೇತ್ರದ ಹೆಚ್ಚಿನ ಭಾಗಗಳಲ್ಲಿ ಇಳಿಮುಖವಾಗುತ್ತಿದೆ. ಈ ಕಾರಣದಿಂದ ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಅಳಿವನಂಚಿನಲ್ಲಿರುವ ಪ್ರಬೇಧ ಎಂದು ಪಟ್ಟಿ ಮಾಡಲಾಗಿದೆ. ಹಾಂಗ್ ಕಾಂಗ್ (Hong Kong), ಸಿಂಗಪೋರ್ (Singapore), ಕುವೈಟ್‌ (Kuwait), ಸಿರಿಯಾದ ಅರಬ್ ಗಣರಾಜ್ಯ, ಲಿಬ್ಯಾ ಮತ್ತು ಟುನಿಷಿಯಾದಲ್ಲಿ ಅದು ಪ್ರಾದೇಶಿಕವಾಗಿ ನಿರ್ನಾಮವಾಗಿದೆ.

click me!