
ನವದೆಹಲಿ(ಆ.19): ರೈಲು ಪ್ರಯಾಣಿಕರಿಗೆ ಕೇಂದ್ರ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ. ಸ್ಥಗತಗೊಳಿಸಲಾಗಿದ್ದ ಹಿರಿಯರು, ಕ್ರೀಡಾಪಟುಗಳು ಹಾಗೂ ಇತರ ಆಯ್ದ ವರ್ಗಗಳ ರಿಯಾಯಿತಿ ಟಿಕೆಟ್ ದರ ಯೋಜನೆನ್ನು ಮತ್ತೆ ಆರಂಭಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಇದರೊಂದಿಗೆ ಈ ನಿಯಮದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಹಿರಿಯರ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಇದರ ಜೊತೆಗೆ ಮತ್ತಷ್ಟು ಅನೂಕೂಲತಗಳನ್ನು ರೈಲ್ವೇ ಇಲಾಖೆ ಘೋಷಿಸಿದೆ. ಕೊರೋನಾ ಸಮಯದಲ್ಲಿ ಹಿರಿಯ ನಾಗರೀಕರು ಸೇರಿದಂತೆ ಇತರ ಆಯ್ದ ವರ್ಗಗಳ ಪ್ರಯಾಣದ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಈ ಯೋಜನೆಯಡಿಯ ಹಿರಿಯ ನಾಗರೀಕರ ಪೈಕಿ ಮಹಿಳೆಯರಿಗೆ ಶೇಕಡಾ 50 ರಷ್ಟು ರಿಯಾಯಿತಿ ಹಾಗೂ ಪುರುಷರಿಗೆ ಶೇಕಡಾ 40 ರಷ್ಟು ರಿಯಾಯಿತಿಗಳನ್ನು ನೀಡಲಾಗಿತ್ತು.
ಹಿರಿಯರ ರಿಯಾಯಿತಿ ಟಿಕೆಟ್ ದರದಲ್ಲಿನ ಕೆಲ ನಿಯಮಗಳನ್ನು ಬದಲಾಯಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಮಹಿಳೆಯರಿಗೆ ಕನಿಷ್ಠ 58 ವರ್ಷ ಹಾಗೂ ಪುರುಷರಿಗೆ ಕನಿಷ್ಠ 60 ವರ್ಷ ವಯೋಮಿತಿ ನಿಗದಿಪಡಿಸಲಾಗಿತ್ತು. ಈ ವಯೋಮಿತಿಯಲ್ಲಿ ಕೆಲ ಬದಲಾವಣೆಗ ಆಗ್ರಹ ಕೇಳಿಬಂದ ಹಿನ್ನಲೆಯಲ್ಲಿ ರೈಲ್ವೇ ಇಲಾಖೆ ಈ ಕುರಿತು ಪರಿಶೀಲನೆ ನಡೆಸಿ ನಿರ್ಧಾರ ಪ್ರಕಟಿಸಲಿದೆ. ಇದರ ಜೊತೆಗೆ ವಯೋವೃದ್ಧರಿಗೆ ನೀಡುವ ಸಬ್ಸಿಡಿಯನ್ನು ಉಳಿತಾಯ ಮಾಡಿ ಈ ಹಣವನ್ನು ರಿಯಾಯಿತಿ ದರದಲ್ಲಿ ಟಿಕೆಟ್ ಯೋಜನೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಎಲ್ಲಾ ರೈಲುಗಳಲ್ಲಿ ಪ್ರಿಮಿಯಂ ತಾತ್ಕಾಲ್ ಯೋಜನೆ ಜಾರಿಗೊಳಿಸಲು ಕೇಂದ್ರ ನಿರ್ಧರಿಸಿದೆ.
5 ವರ್ಷದ ಒಳಗಿನ ಮಕ್ಕಳ ಟಿಕೆಟ್ ಬುಕ್ ಮಾಡುವ ನಿಯಮ ಬದಲಾಗಿಲ್ಲ: ರೈಲ್ವೇಸ್ ಸ್ಪಷ್ಟನೆ
ರಾತ್ರಿ ವೇಳೆ ರೈಲ್ವೆ ಪೊಲೀಸರ ಭುಜದಲ್ಲಿ ದೀಪ ಬೆಳಗುತ್ತೆ!
ರಾತ್ರಿ ವೇಳೆ ರೈಲು ಗಸ್ತು, ರೈಲು ಹಳಿ ಗಸ್ತು ಹಾಗೂ ಅಪರಾಧಗಳ ಘಟನಾ ಸ್ಥಳಗಳಲ್ಲಿ ರೈಲ್ವೆ ಪೊಲೀಸರ ಇರುವಿಕೆ ಗುರುತಿಸಲು ಅನುವಾಗುವಂತೆ ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲ್ವೆ ಪೊಲೀಸರಿಗೆ ‘ಶೋಲ್ಡರ್ ಲೈಟ್’ ಪರಿಚಯಿಸಲಾಗಿದೆ.
ರಾತ್ರಿ ವೇಳೆ ರೈಲ್ವೆ ಪೊಲೀಸರು ರೈಲು ಗಸ್ತು, ರೈಲು ಹಳಿಗಳ ಗಸ್ತು ಮಾಡುತ್ತಾರೆ. ನಿಗದಿತ ಮಾರ್ಗದಲ್ಲಿ ರೈಲು ಹಳಿಗಳ ಮೇಲೆ ನಡೆದು ಹೋಗುವ ಸಂದರ್ಭದಲ್ಲಿ ಕತ್ತಲೆ ಇರುತ್ತದೆ. ಕೆಲವು ಬಾರಿ ರೈಲ್ವೆ ಹಳಿಗಳ ಮೇಲೆ ಆತ್ಮಹತ್ಯೆ ಘಟನೆಗಳು ನಡೆದ ಸಂದರ್ಭದಲ್ಲಿ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಸ್ಥಳದಲ್ಲಿ ಇರುವಿಕೆ ಗುರುತಿಸುವುದು ಕಷ್ಟವಾಗುತ್ತದೆ. ಹೀಗಾಗಿ ರಾತ್ರಿ ವೇಳೆ ರೈಲ್ವೆ ಪೊಲೀಸರ ಇರುವಿಕೆಯನ್ನು ಗುರುತಿಸಲು ಅನುವಾಗುವಂತೆ ಶೋಲ್ಡರ್ ಲೈಟ್ ಪರಿಚಯಿಸಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಿರಿಗೌರಿ ತಿಳಿಸಿದರು.
ಭಾರತ ಅತೀ ಉದ್ದದ ಸರಕು ಸಾಗಾಣೆ ರೈಲು, ಬರೋಬ್ಬರಿ 295 ವ್ಯಾಗನ್ ಮೂಲಕ ದಾಖಲೆ!
ರಾತ್ರಿ ವೇಳೆ ರೈಲು ಗಸ್ತು, ರೈಲುಗಳ ಹಳಿಗಳ ಗಸ್ತು ಕರ್ತವ್ಯಕ್ಕೆ ನಿಯೋಜನೆಯಾಗುವ ರೈಲ್ವೆ ಪೊಲೀಸ್ ಸಿಬ್ಬಂದಿ ತಮ್ಮ ಭುಜದ ಮೇಲೆ ಈ ಶೋಲ್ಡರ್ ಲೈಟ್ ಧರಿಸುತ್ತಾರೆ. ಸದ್ಯಕ್ಕೆ 200 ಶೋಲ್ಡರ್ ಲೈಟ್ ಖರೀದಿಸಿದ್ದು, ಸದ್ಯ ಪ್ರತಿ ರೈಲ್ವೆ ಪೊಲೀಸ್ ಠಾಣೆಗೆ ತಲಾ 12 ಶೋಲ್ಡರ್ ಲೈಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟುಶೋಲ್ಡರ್ ಲೈಟ್ ಖರೀದಿಸಿ ರೈಲ್ವೆ ಪೊಲೀಸರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ