Rahul Gandhi Car Accident: ಅಪಘಾತಕ್ಕೀಡಾದ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಾನ್ವಾಯ್; ಆತಂಕ ಸೃಷ್ಟಿಸಿದ ಘಟನೆ!

Published : Oct 26, 2026, 10:58 AM IST
Rahul Gandhi Car Accident

ಸಾರಾಂಶ

ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳು ಸರಣಿ ಅಪಘಾತಕ್ಕೀಡಾಗಿವೆ. ಮುಂಭಾಗದ ವಾಹನ ದಿಢೀರ್ ಬ್ರೇಕ್ ಹಾಕಿದ ಕಾರಣ 5 ವಾಹನಗಳು ಮತ್ತು ಒಂದು ಆಂಬ್ಯುಲೆನ್ಸ್ ಡಿಕ್ಕಿಯಾಗಿವೆ. ಘಟನೆಯಲ್ಲಿ ರಾಹುಲ್ ಗಾಂಧಿ ಸುರಕ್ಷಿತವಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನ (ಕಾನ್ವಾಯ್) ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಕ್ಕೀಡಾಗಿರುವ ಘಟನೆಗೆ ನಡೆದಿದೆ. ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯ ಹಲಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲೋಮೀಟರ್ ಸಂಖ್ಯೆ 91 (ಮೈಲಿಗಲ್ಲು 91) ರ ಬಳಿ ಈ ಅವಘಡ ಸಂಭವಿಸಿದೆ.

ಹೇಗೆ ಆಯಿತು?

ರಾಹುಲ್ ಗಾಂಧಿ ಅವರು ದೆಹಲಿಯಿಂದ ಲಖನೌ ತಲುಪಿ, ಅಲ್ಲಿಂದ ಸುಲ್ತಾನ್‌ಪುರದ ಎಂಪಿ-ಎಮ್‌ಎಲ್‌ಎ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾನ್ವಾಯ್‌ನ ಮುಂಭಾಗದ ವಾಹನವು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಕಾರಣ, ಹಿಂದಿನಿಂದ ಬರುತ್ತಿದ್ದ ವಾಹನಗಳು ನಿಯಂತ್ರಣ ತಪ್ಪಿ ಒಂದಕ್ಕೊಂದು ಸರಣಿ ಡಿಕ್ಕಿಯಾಗಿವೆ.

ಹಾನಿಗೊಳಗಾದ ವಾಹನಗಳು!

ಕಾನ್ವಾಯ್‌ನಲ್ಲಿದ್ದ ಒಟ್ಟು 5 ವಾಹನಗಳು ಮತ್ತು ಒಂದು ಅಂಬುಲೆನ್ಸ್ (ಆಂಬ್ಯುಲೆನ್ಸ್) ತೀವ್ರವಾಗಿ ಡಿಕ್ಕಿ ಹೊಡೆದುಕೊಂಡಿವೆ.ಅಪಘಾತದ ತೀವ್ರತೆಯಿಂದಾಗಿ ವಾಹನಗಳಲ್ಲಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಕಾನ್ವಾಯ್‌ನ ಇತರ ವಾಹನಗಳು ಜಖಂಗೊಂಡಿದ್ದರೂ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಯಾವುದೇ ಗಾಯಗಳಿಲ್ಲದೆ ಸಂಪೂರ್ಣ ಸುರಕ್ಷಿತವಾಗಿದ್ದಾರೆ. ಸರಣಿ ಡಿಕ್ಕಿಯ ಬೆನ್ನಲ್ಲೇ ಎಕ್ಸ್‌ಪ್ರೆಸ್‌ವೇನಲ್ಲಿ ಕೆಲಕಾಲ ಗೊಂದಲ ಮತ್ತು ಅಫರಾತಫರಿ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Salman, ಟೈಗರ್ ಅಲ್ಲ; ಶೂಟರ್‌ಗಳ ಟಾರ್ಗೆಟ್ ಆಗಿದ್ದು ಈ ಸೂಪರ್‌ಸ್ಟಾರ್! ಪ್ರಾಣ ಉಳಿಸಿತು ಆ ಒಂದು ಅಭ್ಯಾಸ!
ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀಮಂತಿಕೆಯ ನಾಟಕ: 20 ಮಹಿಳಾ ಪೊಲೀಸ್ ಪೇದೆಗಳಿಗೆ ಮದುವೆ ಆಸೆ ತೋರಿಸಿ ₹24 ಲಕ್ಷ ವಂಚನೆ!