
ನವದೆಹಲಿ: ಬಸವಣ್ಣ ಸಂವಿಧಾನ ರಕ್ಷಕ: ರಾಹುಲ್ ನವದೆಹಲಿ: ಸಂವಿಧಾನ ಕುರಿತ ಚರ್ಚೆ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಸವಣ್ಣನನ್ನು ಸ್ಮರಿಸಿದರು. 'ತಮಿ ಲ್ನಾಡಿನಲ್ಲಿ ಪೆರಿಯಾರ್, ಕರ್ನಾಟಕದಲ್ಲಿ ಬಸವಣ್ಣ, ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ ಹಾಗೂ ಅಂಬೇಡ್ಕರ್, ಗುಜರಾತಲ್ಲಿ ಮಹಾತ್ಮಾ ಗಾಂಧಿ' ಎಂದರು.
ಪ್ರಧಾನಿ ಮೋದಿಯಿಂದ '11 ಓಳುಗಳು'
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಅಥವಾ ರಚನಾತ್ಮಕವಾಗಿ ಏನನ್ನೂ ಮಾತನಾಡಲಿಲ್ಲ. ಅವರು ನನಗೆ ಸಂಪೂರ್ಣವಾಗಿ ಬೇಸರ ಮೂಡಿಸಿದರು. ಅವರು ಹೊಸದನ್ನು ಹೇಳುತ್ತಾರೆ ಎಂದು ನಾನು ಭಾವಿಸಿದ್ದೆ. ಅವರು 11 ಪೊಳ್ಳು ಭರವಸೆಗಳ ಬಗ್ಗೆ ಮಾತನಾಡಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದರೆ, ಕನಿಷ್ಠಪಕ್ಷ ಅದಾನಿ ಬಗ್ಗೆ ಚರ್ಚೆ ನಡೆಸಬೇಕು ಎಂದು ವಯನಾಡ್ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
'ಸಾವರ್ಕರ್ ಭಾರತದ ಅಸಾಮಾನ್ಯ ಪುತ್ರ' ಎಂದಿದ್ದ ಇಂದಿರಾ: ರಾಗಾಗೆ ಎನ್‌ಡಿಎ ಟಾಂಗ್
ಲೋಕಸಭೆ ಭಾಷಣದ ವೇಳೆ ಸಾವರ್ಕರನ್ನು ಟೀಕಿಸಿದ್ದಕ್ಕೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಎನ್‌ಡಿಎ ಸಂಸದರು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಭಾಷಣದ ನಂತರ, ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪತ್ರ ಉಲ್ಲೇಖಿಸಿ, 'ಇಂದಿರಾ ಅವರು ಸಾವರ್ಕರ್ ಅವರನ್ನು 'ಭಾರತದ ಅಸಾಮಾನ್ಯ ಪುತ್ರ' ಎಂದು ಕರೆದಿದ್ದರು. ನಿಮ್ಮ ಅಜ್ಜಿ ಕೂಡ ಸಂವಿಧಾನದ ವಿರುದ್ಧವೇ?' ಎಂದು ಪ್ರಶ್ನಿಸಿದರು. ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಮತ್ತು ಅಮಿತ್ ಮಾಳವೀಯ ಪ್ರಮಾದ ಮಾಡುವುದರಲ್ಲಿ ರಾಹುಲ್ ರಾಜ' ಎಂದಿದ್ದಾರೆ.
ಇದನ್ನೂ ಓದಿ: ಅನುಭವ ಮಂಟಪವನ್ನೇ ಇಂದು ವಕ್ಫ್ ತನ್ನ ಆಸ್ತಿಯೆಂದು ಹೇಳಲಾರಂಭಿಸಿದೆ: ತೇಜಸ್ವಿ ಸೂರ್ಯ ವಾಗ್ದಾಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ