ಪಿಎಂ ಮೋದಿ ನನ್ನ ಫೋನ್ ಟ್ಯಾಪ್ ಮಾಡಿದ್ದರ ಬಗ್ಗೆ ಸಾಕ್ಷ್ಯಗಳಿವೆ: ರಾಹುಲ್ ಗಾಂಧಿ ಆರೋಪ

Published : Nov 14, 2026, 07:23 AM IST
Rahul Gandhi Phone Tapping

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಟ್ಯಾಪ್ ಮಾಡಿಸಿದ್ದಾರೆ ಮತ್ತು ಇದಕ್ಕೆ ಸಾಕ್ಷ್ಯಗಳಿವೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಇಬ್ಬರ ನಡುವೆ ಮುಖಾಮುಖಿ ಚರ್ಚೆ ನಡೆದರೆ ಮೋದಿಯವರ ರಾಜಕೀಯ ಅಂತ್ಯವಾಗಲಿದೆ ಎಂದು ಅವರು ಸವಾಲು ಹಾಕಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ತಮ್ಮ ವಾಗ್ದಾಳಿ ಮತ್ತಷ್ಟು ತೀವ್ರಗೊಳಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಪ್ರಧಾನಿ ಮೋದಿ ನನ್ನ ಮೊಬೈಲ್‌ ಟ್ಯಾಪ್‌ ಮಾಡಿಸಿದ್ದಾರೆ. ಈ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ. ಒಂದು ವೇಳೆ ಅವರು ನನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬಂದರೆ, ಅದರ ಬಳಿಕ ಅವರ ರಾಜಕೀಯ ಜೀವನವೇ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹಮ್ಮಿಕೊಂಡಿದ್ದ ‘ಆಸ್ಕ್‌ ಮಿ’ ಸಂವಾದ ಕಾರ್ಯಕ್ರಮದಲ್ಲಿ ‘ಬಿಜೆಪಿ ನಿರಾಕರಣೆ ಹೊರತಾಗಿಯೂ ನೀವೇಕೆ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಪಟ್ಟು ಹಿಡಿದಿದ್ದೀರಿ’ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರ ನೀಡಿದ ರಾಹುಲ್‌, ‘ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಕೃಷಿ ಮಸೂದೆ, ಮತಚೋರಿ, ಎಸ್‌ಐಆರ್‌, ಚೀನಾ, ಎಪ್‌ಸ್ಟೀನ್‌ ಸೇರಿದಂತೆ ಯಾವುದೇ ವಿಷಯಗಳನ್ನು ಮಾತನಾಡಲು ಬಿಡಲಿಲ್ಲ. ನನ್ನ ಮೈಕ್ರೋಫೋನ್‌ ಅನ್ನು ಆಫ್‌ ಮಾಡಲಾಗುತ್ತದೆ. ಹೀಗಾಗಿ ನಾನು ಮೋದಿ ಅವರೊಂದಿಗೆ ಮುಖಾಮುಖಿ ಚರ್ಚೆ ಬಯಸಿದ್ದೇನೆ. ಅಲ್ಲಿ ಟೇಬಲ್‌ನ ಒಂದು ಬದಿಯಲ್ಲಿ ನಾನು ಕುಳಿತಿರುತ್ತೇನೆ, ಮತ್ತೊಂದು ಬದಿಯಲ್ಲಿ ಮೋದಿ ಕುಳಿತಿರಲಿ. ಅಲ್ಲಿ ಅವರು ನನ್ನ ಮೇಲೆ ಆರೋಪ ಮಾಡಲಿ, ನಾನು ಅವರ ಮೇಲೆ ಪ್ರತ್ಯಾರೋಪ ಮಾಡುತ್ತೇನೆ. ಇದಕ್ಕೆ ಜಡ್ಜ್‌ ಆಗಿ ಬೇಕಿದ್ದರೆ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನೇ ನೇಮಿಸಲಿ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ ಒಂದಂದೂ ಖಚಿತ. ಇಂಥದ್ದೊಂದು ಚರ್ಚೆ ಮುಕ್ತಾಯದ ಬಳಿಕ ಮೋದಿ ಪ್ರಧಾನಿಯಾಗಿ ಮುಂದುವರೆಯುವುದಿಲ್ಲ’ ಎಂದು ಸವಾಲು ಹಾಕಿದರು.

ಎಲ್ಲಾ ಸಾಕ್ಷ್ಯಗಳು ನನ್ನ ಬಳಿ ಇವೆ

ಇದೇ ವೇಳೆ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ‘ಮೋದಿ ನನ್ನ ಮೊಬೈಲ್‌ ಟ್ಯಾಪ್ ಮಾಡಿಸಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳು ನನ್ನ ಬಳಿ ಇವೆ. ನಮ್ಮಿಬ್ಬರ ನಡುವೆ ಮುಖಾಮುಖಿ ಚರ್ಚೆ ಆದರೆ ಯಾರು ವಿದೇಶಿ ಶಕ್ತಿಗಳಿಂದ ನಿಯಂತ್ರಿಸಲ್ಪಡುತ್ತಿದ್ದಾರೆ, ಯಾರು ದೇಶದ್ರೋಹಿಗಳು ಎಂಬುದು ಸಾಬೀತಾಗುತ್ತದೆ. ನನ್ನ ಮೊಬೈಲ್‌ನಲ್ಲಿ ಇದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳಿವೆ’ ಎಂದು ಹೇಳಿದ್ದಾರೆ.

ಜೊತೆಗೆ, ‘ನೀವು ಅವರ ಮುಖವನ್ನು ಗಮನಿಸಿದ್ದೀರಿ. ಅಲ್ಲೊಂದು ರೀತಿಯಲ್ಲಿ ಭಯ ಕಾಣಿಸುತ್ತಿದೆ. ಏಕೆಂದರೆ ನನಗೆ ಏನು ಗೊತ್ತಿದೆ ಎಂಬುದು ಅವರಿಗೂ ಗೊತ್ತಾಗಿದೆ. ಹೀಗಾಗಿಯೇ ಅವರು ಇತ್ತೀಚೆಗೆ ನನ್ನ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ, ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿಲ್ಲ, ಅವರು ಅತ್ಯಂತ ಜಾಗರೂಕವಾಗಿದ್ದಾರೆ, ಅದಕ್ಕೆಲ್ಲಾ ಒಂದು ಕಾರಣವಿದೆ’ ಎಂದು ರಾಹುಲ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಕರಾವಳಿಗೆ ಬರ್ತಿದೆ ದುಷ್ಟ ಶಕ್ತಿಯ ಚಂಡಮಾರುತ
India Latest News Live: ಪಿಎಂ ಮೋದಿ ನನ್ನ ಫೋನ್ ಟ್ಯಾಪ್ ಮಾಡಿದ್ದರ ಬಗ್ಗೆ ಸಾಕ್ಷ್ಯಗಳಿವೆ - ರಾಹುಲ್ ಗಾಂಧಿ ಆರೋಪ