ಗೃಹಬಳಕೆಯ ಅಡುಗೆ ಅನಿಲ ದರವನ್ನು ಸರ್ಕಾರ ಮತ್ತೆ 50 ರೂಪಾಯಿ ಏರಿಕೆ ಮಾಡಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಗೃಹಬಳಕೆಯ ಸಿಲಿಂಡರ್ ದರ ಏರಿಕೆಯಾಗಿದೆ. ಇದರಿಂದಾಗಿ ಅಂದಾಜು 289 ಮಿಲಿಯನ್ ಕುಟುಂಬಗಳು 14.2 ಕೆಜಿಯ ಸಿಲಿಂಡರ್ ಗಾಗಿ 1 ಸಾವಿರ ರೂಪಾಯಿ ನೀಡಬೇಕಿದೆ.
ನವದೆಹಲಿ(ಮೇ. 8): ದ್ರವೀಕೃತ ಪೆಟ್ರೋಲಿಯಂ ಅನಿಲ ( liquified petroleum gas) ಅಥವಾ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯ ಮೇಲೆ ಸರ್ಕಾರ ಮತ್ತೆ 50 ರೂಪಾಯಿ ಏರಿಕೆ ಮಾಡಿದೆ. ಶನಿವಾರದಿಂದಲೇ ಹೊಸ ದರ ಜಾರಿಯಾಗಿದೆ. ಇದರಿಂದಾಗಿ 14.2 ಕೆಜಿ ತೂಕದ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಾಗಿ ( domestic LPG cylinder) ಗ್ರಾಹಕರು 1 ಸಾವಿರ ರೂಪಾಯಿ ನೀಡಬೇಕಿದೆ. ಎಲ್ ಪಿಜಿ ಬೆಲೆ ಏರಿಕೆ ಬೆನ್ನಲ್ಲಿಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi ), ಭಾನುವಾರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಮಾತ್ರ ಬಡ ಮತ್ತು ಮಧ್ಯಮ ವರ್ಗದ ಭಾರತೀಯ ಕುಟುಂಬಗಳ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತದೆ. ಇದು ನಮ್ಮ ಆರ್ಥಿಕ ನೀತಿಯ ತಿರುಳು ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಸಿಲಿಂಡರ್ ಬೆಲೆ ಎಷ್ಟಿತ್ತು ಹಾಗೂ ಅದಕ್ಕೆ ಸರ್ಕಾರ ಎಷ್ಟು ಸಬ್ಸಿಡಿ ನೀಡುತ್ತಿತ್ತು ಮತ್ತು ಈಗಿನ ಸರ್ಕಾರದಲ್ಲಿ ಸಿಲಿಂಡರ್ ಬೆಲೆ ಎಷ್ಟಿಇದೆ ಹಾಗೂ ಎಷ್ಟು ಸಬ್ಸಿಡಿ ನೀಡುತ್ತಿದೆ ಎನ್ನುವ ವಿವರಗಳನ್ನು ಒಳಗೊಂಡ ಹೋಲಿಕೆಯನ್ನೂ ರಾಹುಲ್ ಗಾಂಧಿ ಹಾಕಿದ್ದಾರೆ. ಆ ಮೂಲಕ ಯುಪಿಎ ಸರ್ಕಾರ, ಬಿಜೆಪಿ ಸರ್ಕಾರಕ್ಕಿಂತ ಉತ್ತಮವಾಗಿ ಈ ಸಮಸ್ಯೆಯನ್ನು ಎದುರಿಸಿತ್ತು ಎಂದು ತಿಳಿಸಿದ್ದಾರೆ.
2014ರಲ್ಲಿ ಅಡುಗೆ ಅನಿಲದ ದರ 410 ರರೂಪಾಯಿ ಆಗಿತ್ತು. 2022ರಲ್ಲಿ 999 ರೂಪಾಯಿವರೆಗೆ ಮುಟ್ಟುವ ವೇಳೆ 585.50 ರೂಪಾಯಿ ಏರಿಕೆ ಮಾಡಲಾಗಿದೆ. ಯುಪಿಎ ಸರ್ಕಾರ ಇದ್ದ ಅವಧಿಯಲ್ಲಿ ಪ್ರತಿ ಸಿಲಿಂಡರ್ ಮೇಲೆ 827 ರೂಪಾಯಿ ಸಬ್ಸಿಡಿ ನೀಡುತ್ತಿತ್ತು. ಈಗಿನ ಸರ್ಕಾರ ಒಂದು ರೂಪಾಯಿ ಸಬ್ಸಿಡಿ ಕೂಡ ನೀಡುತ್ತಿಲ್ಲ ಎಂದಿದ್ದಾರೆ. ಈಗಿನ ಕಾಲದ ಸಿಲಿಂಡರ್ ರೇಟ್ ನಲ್ಲಿ ನಮ್ಮ ಅವಧಿಯಲ್ಲಿ 2 ಸಿಲಿಂಡರ್ ಬರುತ್ತಿತ್ತು ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
LPG Cylinder
Rate Subsidy
INC (2014) ₹410 ₹827
BJP (2022) ₹999 ₹0
2 cylinders then for the price of 1 now!
Only Congress governs for the welfare of poor & middle class Indian families. It’s the core of our economic policy.
ಶನಿವಾರ, ಅವರ ಪಕ್ಷದ ಮತ್ತೊಬ್ಬ ನಾಯಕ ರಣದೀಪ್ ಸುರ್ಜೇವಾಲಾ (Randeep Surjewala ) ಕೂಡ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು "ಸಬ್ಸಿಡಿ ಅಡುಗೆ ಅನಿಲದ ಬೆಲೆ 2.5 ಪಟ್ಟು ಹೆಚ್ಚಾಗಿದೆ ಮತ್ತು ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ದರವಲ್ಲ" ಎಂದು ಹೇಳಿದರು. ಅದಲ್ಲದೆ, 2014ರ ದರಕ್ಕೆ ಅನುಗುಣವಾಗಿ ಎಲ್ ಪಿಜಿ ವೆಚ್ಚವನ್ನು ಕಡಿಮೆ ಮಾಡಲು ಒತ್ತಾಯ ಮಾಡಿದರು.
ಗೃಹಬಳಕೆಯ ಅಡುಗೆ ಅನಿಲ ದರವನ್ನು ಸರ್ಕಾರ ಶನಿವಾರ ಮತ್ತೆ 50 ರೂಪಾಯಿ ಏರಿಕೆ ಮಾಡಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಗೃಹಬಳಕೆಯ ಸಿಲಿಂಡರ್ ದರ ಏರಿಕೆಯಾಗಿದೆ. ಇದರಿಂದಾಗಿ ಅಂದಾಜು 289 ಮಿಲಿಯನ್ ಕುಟುಂಬಗಳು 14.2 ಕೆಜಿಯ ಸಿಲಿಂಡರ್ ಗಾಗಿ 1 ಸಾವಿರ ರೂಪಾಯಿ ನೀಡಬೇಕಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಕಾರಣದಿಂದಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರುತ್ತಿರುವುದು ಇದಕ್ಕೆ ಕಾರಣ.
LPG Price Hike: ಗ್ಯಾಸ್ ಸಿಲಿಂಡರ್ ದರ ಮತ್ತೆ 50 ರೂ ಏರಿಕೆ, ಜನಸಾಮಾನ್ಯರಿಗೆ ಮತ್ತಷ್ಟು ಹೊರೆ!
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಡೀಲರ್‌ಗಳು ಪ್ರಕಟಿಸಿದ ಇತ್ತೀಚಿನ ಪ್ರಕಟಣೆಯ ಪ್ರಕಾರ, ಶನಿವಾರದಂದು ದೇಶೀಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ದೆಹಲಿಯಲ್ಲಿ ಪ್ರತಿ ಸಿಲಿಂಡರ್‌ಗೆ ₹999.50 ಕ್ಕೆ ಏರಿದೆ. ಸ್ಥಳೀಯ ಲೆವಿಗಳು ಮತ್ತು ಸಾರಿಗೆ ವೆಚ್ಚಗಳ ಆಧಾರದ ಮೇಲೆ ದೇಶದಾದ್ಯಂತ ಬೆಲೆಗಳು ಬದಲಾಗುತ್ತವೆ. ಉದಾಹರಣೆಗೆ, ಗುಜರಾತ್‌ನ ನವಸಾರಿ ಪಟ್ಟಣದಲ್ಲಿ 14.2 ಕೆಜಿ ಸಿಲಿಂಡರ್‌ಗೆ ₹1,008.50, ಲುಧಿಯಾನದಲ್ಲಿ (ಪಂಜಾಬ್) ₹1,026, ಚೆನ್ನೈ (ತಮಿಳುನಾಡು) ₹1,015.50 ಮತ್ತು ಪಾಟ್ನಾ (ಬಿಹಾರ)ದಲ್ಲಿ ₹1,098 ಆಗಿದೆ.
LPG Cylinder Price Hike: ಗ್ಯಾಸ್ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಕಂಗಾಲಾದ ಗ್ರಾಹಕ..!
ಅಡುಗೆ ಅನಿಲ ಬೆಲೆ ಗಗನಕ್ಕೇರಿರುವುದು ಇದೇ ಮೊದಲಲ್ಲ. 2014ರ ಜನವರಿಯಲ್ಲಿ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‌ಗೆ ₹1,241 ಇತ್ತು. ಅಂದಿನಿಂದ ಅದರ ದರಗಳು ಅಸ್ಥಿರವಾಗಿಯೇ ಉಳಿದುಕೊಂಡಿವೆ. ಆದರೆ ಮೇ 1, 2020 ರಿಂದ ಸಿಲಿಂಡರ್‌ನ ಬೆಲೆಯಲ್ಲಿ ಒಂದೇ ಸಾರಿ ₹170 ರೂಪಾಯಿ ಕಡಿಮೆಯಾಗಿ ₹581.5 ಕ್ಕೆ ಇಳಿಕೆಯಾಗಿತ್ತು. ಏಪ್ರಿಲ್ 2021ರಲ್ಲಿ ಸಣ್ಣ ಪ್ರಮಾಣದಲ್ಲಿ ಅಂದರೆ ಕೇವಲ 10 ರೂಪಾಯಿ ಕಡಿಮೆಯಾಗಿದ್ದು ಹೊರತುಪಡಿಸಿದರೆ, ಉಳಿದೆಲ್ಲಾ ಎಲ್ಲಾ ಸಮಯದಲ್ಲಿ ಏರಿಕೆಯನ್ನೇ ಕಂಡಿದೆ.