ರಫೇಲ್‌ ಇದ್ದಿದ್ದರೆ ಪಾಕ್ ಗಡಿ ದಾಟುವ ಅಗತ್ಯವೇ ಇರಲಿಲ್ಲ

Published : Feb 27, 2019, 12:14 PM ISTUpdated : Feb 27, 2019, 12:21 PM IST
ರಫೇಲ್‌ ಇದ್ದಿದ್ದರೆ ಪಾಕ್ ಗಡಿ ದಾಟುವ ಅಗತ್ಯವೇ ಇರಲಿಲ್ಲ

ಸಾರಾಂಶ

ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಮಿರಾಜ್ 2000 ಯುದ್ಧ ವಿಮಾನದ ಮೂಲಕ ಭಾರತೀಯ ವಾಯುಪಡೆ ದಾಳಿ ನಡೆಸಿದ್ದು, ಒಂದು ವೇಳೆ ರಫೇಲ್ ಯುದ್ಧ ವಿಮಾನ ಇದ್ದಿದ್ದರೆ, ಗಡಿಯೊಳಗೆ ನುಸುಳುವ ಅಗತ್ಯವೇ ಇರಲಿಲ್ಲ. 

ನವದೆಹಲಿ: ಭಾರತದ ಬಳಿ ರಫೇಲ್‌ ಯುದ್ಧವಿಮಾನಗಳು ಇದ್ದಿದ್ದರೆ ಬಾಲಾಕೋಟ್‌ ಮೇಲೆ ನಡೆಸಿದ ದಾಳಿಯನ್ನು ಭಾರತದ ಗಡಿಯೊಳಗೆ ಇದ್ದುಕೊಂಡೇ ನಡೆಸಬಹುದಿತ್ತು ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.

ಭಾರತವು ಫ್ರಾನ್ಸ್‌ನಿಂದ ರಫೇಲ್‌ ಯುದ್ಧವಿಮಾನ ಖರೀದಿಸುವ ಒಪ್ಪಂದ ವಿವಾದಕ್ಕೆ ಸಿಲುಕಿದೆ. ಮಂಗಳವಾರ ಬೆಳಗಿನ ಜಾವ ಪಾಕ್‌ನೊಳಗೆ ವಾಯುದಾಳಿ ನಡೆಸಲು ಭಾರತೀಯ ವಾಯುಪಡೆ ಬಳಸಿದ ವಿಮಾನಗಳು ಕೂಡ ರಫೇಲ್‌ ಯುದ್ಧವಿಮಾನಗಳನ್ನು ತಯಾರಿಸುವ ಫ್ರಾನ್ಸ್‌ನ ದಸಾಲ್ಟ್‌ ಕಂಪನಿಯ ಮಿರಾಜ್‌-2000 ಯುದ್ಧವಿಮಾನಗಳೇ ಆಗಿವೆ. ಈ ವಿಮಾನಗಳು ಭಾರತದ ಗಡಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿ ಪಾಕ್‌ನ ಒಳಗಿರುವ ಬಾಲಾಕೋಟ್‌ನ ಉಗ್ರರ ಶಿಬಿರಗಳ ಮೇಲೆ ತೆರಳಿ ಬಾಂಬ್‌ ದಾಳಿ ನಡೆಸಿವೆ.

ಕಾಶ್ಮೀರದಲ್ಲಿ ಮಿಗ್-21 ಫೈಟರ್ ಜೆಟ್ ಪತನ, ಇಬ್ಬರು ಪೈಲೆಟ್ ಸಾವು

ಆದರೆ, ರಫೇಲ್‌ ಯುದ್ಧವಿಮಾನಗಳು ತಾವು ಇದ್ದಲ್ಲಿಂದಲೇ 150 ಕಿ.ಮೀ. ದೂರದವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಭಾರತದ ಬಳಿ ರಫೇಲ್‌ ಇದ್ದಿದ್ದರೆ ಭಾರತದ ಗಡಿಯೊಳಗಿನಿಂದಲೇ ಬಾಲಾಕೋಟ್‌ ಮೇಲೆ ದಾಳಿ ನಡೆಸಬಹುದಿತ್ತು. ಅವು ಇಲ್ಲದಿರುವುದರಿಂದ ಅನಿವಾರ್ಯವಾಗಿ ಮಿರಾಜ್‌ ವಿಮಾನಗಳನ್ನು ಬಳಸಿ, ಗಡಿಯೊಳಗೇ ತೆರಳಿ ದಾಳಿ ನಡೆಸಬೇಕಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಭಾರತಕ್ಕೆ ನಿವೃತ್ತ ಏರ್‌ ಮಾರ್ಷಲ್‌ ಫಿಲಿಪ್‌ ಎಚ್ಚರಿಕೆ

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!