ಅಮ್ಮನ ಡಾನ್ಸ್‌ ಹುಚ್ಚಿಗೆ ಮಕ್ಕಳೇನು ಮಾಡಿದ್ರು ನೋಡಿ...

Suvarna News   | Asianet News
Published : Feb 07, 2022, 04:15 PM IST
ಅಮ್ಮನ ಡಾನ್ಸ್‌ ಹುಚ್ಚಿಗೆ ಮಕ್ಕಳೇನು ಮಾಡಿದ್ರು ನೋಡಿ...

ಸಾರಾಂಶ

  ಭಂಗ್ರಾ ಡಾನ್ಸ್‌ ಮಾಡಿದ ಪಂಜಾಬ್‌ ಮಹಿಳೆ ವಯಸ್ಸನ್ನು ಮೀರಿದ ಮಹಿಳೆಯ ಎನರ್ಜಿ

ನೃತ್ಯ ಹಾಗೂ ಸಂಗೀತಾ ಒಂದು ಸಾರ್ವತ್ರಿಕ ಧರ್ಮವಿದ್ದಂತೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಾದಿಯಾಗಿ ಎಲ್ಲರೂ ತಮ್ಮ ಇಷ್ಟದ ಹಾಡು ಬಂದಾಗ ಕಾಲುಗಳು ತನ್ನಷ್ಟಕ್ಕೆ ಹೆಜ್ಜೆ ಹಾಕಲು ಶುರು ಮಾಡುತ್ತದೆ. ಹಾಗೆಯೇ ಇಲ್ಲೊಬ್ಬರು (ಅಂಟಿ) ಮಧ್ಯ ವಯಸ್ಸು ದಾಟಿದ ಮಹಿಳೆಯೊಬ್ಬರು ಅವರ ಇಷ್ಟದ ಹಾಡು  ಕೇಳಿ ಬಂದಾಗ ತಾನೆಲ್ಲಿದ್ದೇನೆ ಎಂಬುದನ್ನು ಮರೆತು ಸಖತ್ ಆಗಿ ಅಡುಗೆ ಮನೆಯಲ್ಲೇ ನಿಂತು ಹೆಜ್ಜೆ ಹಾಕಲು ಶುರು ಮಾಡುತ್ತಾರೆ. 

ವೈವಿಧ್ಯತೆಯಲ್ಲಿ ಏಕತೆ ಎಂಬಂತೆ ಭಾರತದ ಒಂದೊಂದು ಪ್ರದೇಶವು ಒಂದೊಂದು ವಿಭಿನ್ನ ಸಂಸ್ಕೃತಿ, ಕಲೆ, ಸಂಪ್ರದಾಯ ಹಾಡು ನೃತ್ಯಕ್ಕೆ ಹೆಸರುವಾಸಿಯಾಗಿದೆ. ಆಯಾ  ಪ್ರದೇಶದ ನಿವಾಸಿಗಳು ಅಲ್ಲಿನ ಸಂಸ್ಕೃತಿಯೊಂದಿಗೆ ಭಾವನಾತ್ಮಕವಾಗಿ ಹೆಣೆದುಕೊಂಡಿರುತ್ತಾರೆ. ಹಾಗೆಯೇ ಪಂಜಾಬಿಗಳು ಅಲ್ಲಿನ ಖ್ಯಾತ ನೃತ್ಯ ಪ್ರಕಾರವಾದ ಭಾಂಗ್ರಾವನ್ನು ಸಂಪೂರ್ಣವಾಗಿ ಪ್ರೀತಿಸುತ್ತಾರೆ ಎಂಬುದು ಸುಳ್ಳಲ್ಲ, ಅವರು ಆ ನೃತ್ಯದ ಹಾಡು ಹಾಗೂ ಡೋಲಿನ ಬೀಟ್‌ಗಳನ್ನು ಕೇಳಿದಾಗಲೆಲ್ಲ ಎಲ್ಲೇ ಇದ್ದರೂ ಸುಮ್ಮನೇ ನಿಂತಿರಲು ಸಾಧ್ಯವೇ ಇಲ್ಲ ಹಾಗೆಯೇ ಇಲ್ಲಿ ಪಂಜಾಬಿ ಮಹಿಳೆಯೊಬ್ಬಳು ಒಂದು ಹಾಡು ಕೇಳಿ ಬರುತ್ತಿದ್ದಂತೆ  ಅಡುಗೆ ಮನೆಯಲ್ಲಿ ಭಾಂಗ್ರಾ ನೃತ್ಯವನ್ನು ಮಾಡುತ್ತಾರೆ.

 

ಇನ್ನು ಅಮ್ಮನ ನೃತ್ಯದ ಹುಚ್ಚು ಪ್ರೇಮವನ್ನು ತಿಳಿದ ಮಕ್ಕಳು ಅಮ್ಮನಿಗೆ ಸಾಥ್‌ ನೀಡುವ ಸಲುವಾಗಿ ಓರ್ವ ಡೋಲ್‌ ಬಡಿಯಲು ಶುರು ಮಾಡಿದರೆ ಇನ್ನೊಬ್ಬ ಸೌಂಡ್‌ಬಾಕ್ಸ್ ತಂದು ಅಡುಗೆ ಮನೆಯಲ್ಲಿ ಇಡುತ್ತಾನೆ. ಇದನ್ನು ನೋಡಿ ಇನ್ನಷ್ಟು ಖುಷಿಯಾಗುವ ತಾಯಿ ತಮ್ಮ ವಯಸ್ಸನ್ನು ಮೀರಿ ಸಖತ್‌ ಆಗಿ ಭಾಂಗ್ರಾ ನೃತ್ಯ ಮಾಡುತ್ತಾರೆ. ಓರ್ವ ಮಗ ಡೋಲ್‌ ಬೊಟ್ಟುತ್ತಿದ್ದರೆ ಇನ್ನೊಬ್ಬ ಮಗ ಡಾನ್ಸ್‌ ಮಾಡುತ್ತಾನೆ. ಆದರೆ ಕೆಲವೇ ಕ್ಷಣದಲ್ಲಿ ಈ ಮಕ್ಕಳಿಬ್ಬರು ಅಮ್ಮ ಕುಣಿಯುತ್ತಿದ್ದಂತೆ ಸೌಂಡ್ ಬಾಕ್ಸ್ ಹಾಗೂ ಡೋಲ್‌ ತೆಗೆದುಕೊಂಡು ಸೀದಾ ಹೊರಗೆ ಹೋಗಿ ಬಿಡುತ್ತಾರೆ. ಈ ವೇಳೆ ಅಮ್ಮ ಆಶ್ಚರ್ಯದಿಂದ ನೋಡುತ್ತಾ ಇದೇಕೆ ಹೀಗೆ ಸಡನ್‌ ಆಗಿ ಹಾಡು ಹಾಗೂ ಡೋಲ್‌ ಬಡಿಯುವುದು ಎರಡನ್ನು ನಿಲ್ಲಿಸಿದ್ದೀರಿ ಎಂದು ಕೇಳುತ್ತಾರೆ. ಆದರೂ ಮಕ್ಕಳು ಕೆಳದವರಂತೆ ಸುಮ್ಮನಿರುತ್ತಾರೆ. ಅತ್ತ ಅಮ್ಮನಿಗೂ ಇದೇಕೆ ಹೀಗೆ ಎಂದು ಬೇಜಾರಾದಂತೆ ಮುಖಭಾವ ಕಾಣಿಸುತ್ತದೆ. ಆದರೆ ಈ ವಿಡಿಯೋ ನೋಡುಗರನ್ನು ನಗಿಸುವುದರಲ್ಲಿ ಸಂಶಯವೇ ಇಲ್ಲ. 

ಪುಷ್ಪಾದ ಒ ಅಂಟವಾ ಹಾಡಿಗೆ ಸಮಂತಾ ಕೂಡ ನಾಚುವಂತೆ ಕುಣಿದ ಅಮೆರಿಕನ್ ಡ್ಯಾಡ್‌

 ಕ್ಯಾಲಿಫೋರ್ನಿಯಾ ಮೂಲದ ಸಂಗೀತ ನಿರ್ಮಾಪಕ ಗಗನ್‌ದೀಪ್ ಸಿಂಗ್ ಆನಂದ್ ಅವರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ನೆಚ್ಚಿನ ಹಾಡು 'ಧೋಲ್ ಜಾಗೀರೋ ದಾ' ಮೂಲಕ ಅವರ ತಾಯಿಯನ್ನು ಆಶ್ಚರ್ಯಗೊಳಿಸಿದರು. ಅವರು ಢೋಲ್ ನುಡಿಸುತ್ತಾ ಅಡುಗೆಮನೆಗೆ ಪ್ರವೇಶಿಸುತ್ತಿದ್ದಂತೆ, ಅವರ ತಾಯಿ ಆಹ್ಲಾದಕರವಾಗಿ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು. ನಂತರ ಡೋಲ್‌ನ ಪ್ರತಿ ಬೀಟ್‌ನ್ನು ಆನಂದಿಸುತ್ತಾ ಭಾಂಗ್ರಾ ಮಾಡಲು ಶುರು ಮಾಡಿದರು.  ಇವರ ಎನರ್ಜಿಟಿಕ್‌ ನೃತ್ಯ  ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಸಾರಿ ಉಟ್ಟ ನಾರಿಯ ಜಬರ್‌ದಸ್ತ್‌ ಡಾನ್ಸ್‌.. ಎರ್ರಾಬಿರ್ರಿ ಸ್ಟೆಪ್‌ಗೆ ಸುತ್ತಲಿದ್ದವರು ಗಾಬರಿ

ಇನ್ನು ಈ ವಿಡಿಯೋ ನೋಡಿದ ಜನ ಆಕೆಯ ವಯಸ್ಸು ಮೀರಿದ ಎನರ್ಜಿಗೆ ಭೇಷ್‌ ಎಂದಿದ್ದಾರೆ.  ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಕಾಲ ಇದಾಗಿರುವುದರಿಂದ ಯಾರೂ ಕೂಡ ನಮ್ಮ ಪ್ರತಿಭೆಗೆ ಅವಕಾಶ ಸಿಕ್ಕಿಲ್ಲ ಎಂದು ಅಳುವ ಸ್ಥಿತಿ ಇಲ್ಲ. ಪ್ರತಿಭೆಯೊಂದಿದ್ದರೆ ಆಯಿತಷ್ಟೇ ನೀವು ಯಾವಾಗಾ ಬೇಕಾದರೂ ಖ್ಯಾತಿ ಗಳಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ