
ಇಟಲಿಯಲ್ಲಿನ ಬಾಲ್ಯದ ದಿನಗಳಿಂದ ಹಿಡಿದು ರಾಜೀವ್ ಗಾಂಧಿ ಭೇಟಿ, ಪರಿಚಯ, ದಾಂಪತ್ಯದವರೆಗೆ ಪ್ರಧಾನಿ ಸ್ಥಾನ ತ್ಯಾಗದವರೆಗೆ ಲೈಫ್ ಜರ್ನಿ ಬಗ್ಗೆ ವಿವರಿಸುವ ಆತ್ಮಚರಿತ್ರೆ Belonging: A Journey of Love ಕುರಿತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಫಸ್ಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡದ್ದಾರೆ.
ಇನ್ಸ್ಟಗ್ರಾಂನಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಅವರು ತಮ್ಮ ಮುಂಬರುವ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಗ್ಗೆ ಮಾತನಾಡಿದ್ದಾರೆ. ಸೋನಿಯಾ ಗಾಂಧಿಯವರು ಇನ್ಸ್ಟಾಗ್ರಾಂ ಖಾತೆ ಬಳಸುತ್ತಿರಲಿಲ್ಲ. ಆದರೆ ಇದೀಗ ತಮ್ಮದೇ ಅಕೌಂಟ್ ಮೂಲಕ ಮೊದಲ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಆತ್ಮಚರಿತ್ರೆ ಪುಸ್ತಕದ ಫಸ್ಟ್ ಲುಕ್ ವಿಡಿಯೋ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿಯವರೊಂದಿಗಿನ ಭೇಟಿಯ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪುಸ್ತಕವು ಸೋನಿಯಾ ಗಾಂಧಿಯವರ ಬಾಲ್ಯದ ಜೀವನ ಇಟಲಿಯಲ್ಲಿ ಕಳೆದಿದದ್ದು ಬಳಿಕ ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿಯವರ ಭೇಟಿ, ಪರಿಚಯ ಅಲ್ಲಿಂದ ಮುಂದುವರಿದ ಲೈಫ್ ಜರ್ನಿ, ನೆಹರೂ-ಗಾಂಧಿ ಕುಟುಂಬದಲ್ಲಿ ವಿವಾಹವಾದ ನಂತರ ಅವರ ಜೀವನದಲ್ಲಿ ಆದ ಪರಿವರ್ತನೆ ಮತ್ತು ಕುಟುಂಬದಲ್ಲಾದ ಹ ತ್ಯೆಗಳ ಬಗ್ಗೆ ಈ ಪುಸ್ತಕ ವಿವರಿಸುತ್ತದೆ.
ಇಟಲಿಯ ವೆನೆಟೊ ಪ್ರದೇಶದಲ್ಲಿ ಸೋನಿಯಾ ಗಾಂಧಿಯವರ ಬಾಲ್ಯದೊಂದಿಗೆ ಕಾದಂಬರಿ ಪ್ರಾರಂಭವಾಗುತ್ತದೆ. ನಂತರ ಪುಸ್ತಕವು ಕೇಂಬ್ರಿಡ್ಜ್ನಲ್ಲಿ ಅವರ ವಾಸ್ತವ್ಯ ಮತ್ತು 1965 ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊಮ್ಮಗ ರಾಜೀವ್ ಗಾಂಧಿಯವರೊಂದಿಗಿನ ಭೇಟಿಯವರೆಗೆ ಸಾಗುತ್ತದೆ.
ಈ ಆತ್ಮಚರಿತ್ರೆಯು ರಾಜೀವ್ ಗಾಂಧಿಯವರೊಂದಿಗಿನ ಅವರ ವಿವಾಹ ನಂತರ ಅವರ ಅತ್ತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗಿನ ಮೊದಲ ಭೇಟಿಯನ್ನು ಸಹ ವಿವರಿಸುತ್ತದೆ. ಸೋನಿಯಾ ಗಾಂಧಿ ಭಾರತಕ್ಕೆ ಬಂದ ಬಳಿಕ ಹಿಂದಿ ಕಲಿಯುವುದರಿಂದ ಹಿಡಿದು, ಸೀರೆ ಉಡುವುದು ಕಲಿತಿದ್ದ, ಭಾರತೀಯ ಆಹಾರ ಸಂಸ್ಕೃತಿಗೆ ಹೊಂದಿಕೊಂಡು ಅಳವಡಿಸಿಕೊಳ್ಳುವವರೆಗೂ ಭಾರತದ ಜೀವನಶೈಲಿಗೆ ಹೊಂದಿಕೊಂಡ ಬಗ್ಗೆ ಪುಸ್ತಕ ವಿವರಿಸುತ್ತದೆ.
ಇನ್ನು ಈ ಕಾದಂಬರಿಯಲ್ಲಿ ಕುಟುಂಬದ ಸಾವು ಹ ತ್ಯೆಗಳ ಬಗ್ಗೆಯೂ ವಿವರಿಸಿದೆ. ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿಯವರ ಸಾವು, 1984 ರಲ್ಲಿ ಇಂದಿರಾ ಗಾಂಧಿಯವರ ಹ ತ್ಯೆ ಮತ್ತು 1991 ರಲ್ಲಿ ರಾಜೀವ್ ಗಾಂಧಿಯವರ ಹ ತ್ಯೆ ಸೇರಿದಂತೆ ಗಾಂಧಿ ಕುಟುಂಬವನ್ನು ಪರಿವರ್ತಿಸಿದ ಪ್ರಮುಖ ದುರಂತಗಳನ್ನು ಈ ಪುಸ್ತಕವು ಹೇಳುತ್ತದೆ. ಅಷ್ಟೇ ಅಲ್ಲದೆ. 2004 ರ ಲೋಕಸಭಾ ಚುನಾವಣೆಯ ನಂತರದ ರಾಜಕೀಯ ಬೆಳವಣಿಗೆಗಳನ್ನು ಸಹ ವಿವರಿಸುತ್ತದೆ, ಇದರಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಗೆದ್ದಿತು. ಇದರ ನಂತರ, ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದರು. ಪಕ್ಷ ಮತ್ತು ಒಕ್ಕೂಟವನ್ನು ಮುನ್ನಡೆಸಿದರು. ಕಾಂಗ್ರೆಸ್ ನೇತೃತ್ವದ ಒಕ್ಕೂಟವು ಮುಂದಿನ 10 ವರ್ಷಗಳ ಕಾಲ ಅಧಿಕಾರದಲ್ಲಿತ್ತು.
1991 ರಲ್ಲಿ ತಮ್ಮ ಪತಿ ರಾಜೀವ್ ಗಾಂಧಿಯವರ ಹ ತ್ಯೆಯ ನಂತರವೂ ಸೋನಿಯಾ ಗಾಂಧಿ ರಾಜಕೀಯದಿಂದ ದೂರವಾಗಲು ಯೋಚಿಸಿದರು. ಆದರೆ ಪಿ.ವಿ. ನರಸಿಂಹ ರಾವ್ ಪ್ರಧಾನಿಯಾದರು. 1996 ರ ಹೊತ್ತಿಗೆ ಕಾಂಗ್ರೆಸ್ ದುರ್ಬಲಗೊಳ್ಳುತ್ತಿದ್ದಂತೆ ಮತ್ತು ಪಕ್ಷದೊಳಗೆ ಅನೇಕ ಬಣಗಳು ರೂಪುಗೊಂಡಿದ್ದರಿಂದ, ಸೋನಿಯಾ ಗಾಂಧಿ 1997 ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಒಂದುಗೂಡಿಸಲು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸೇರಿದರು. 62 ದಿನಗಳ ನಂತರ, 1998 ರಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾದರು. ಸೋನಿಯಾ ಗಾಂಧಿ 2017 ರವರೆಗೆ ಅಧ್ಯಕ್ಷರಾಗಿ ಉಳಿದರು. ಇದು ಪಕ್ಷದ ಇತಿಹಾಸದಲ್ಲಿ ಅತಿ ದೀರ್ಘ ಅಧಿಕಾರಾವಧಿಯಾಗಿದೆ.
2004 ರಲ್ಲಿ ಕಾಂಗ್ರೆಸ್ 14 ಮಿತ್ರಪಕ್ಷಗಳೊಂದಿಗೆ ಯುಪಿಎ ರಚಿಸಿತು. ಚುನಾವಣೆಯ ನಂತರ ಎಡಪಕ್ಷಗಳು ಸೇರಿದಂತೆ ಹಲವಾರು ಪಕ್ಷಗಳ ಬೆಂಬಲದೊಂದಿಗೆ ಯುಪಿಎ 335 ಸಂಸದರ ಬೆಂಬಲವನ್ನು ಗಳಿಸಿತು. ಮಿತ್ರಪಕ್ಷಗಳು ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯಾಗುವುದಕ್ಕೆ ಬೆಂಬಲಿಸಿದವು. ಆದರೆ ಅವರು ಮೇ 18, 2004 ರಂದು ಪ್ರಧಾನಿ ಹುದ್ದೆ ತಿರಸ್ಕರಿಸಿದರು. ನಂತರ ಮನಮೋಹನ್ ಸಿಂಗ್ ಪ್ರಧಾನಿಯಾದರು.
ಎನ್ಡಿಎ ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯಾಗಿ ನೇಮಿಸುವುದನ್ನು ವಿರೋಧಿಸಿ ಅವರು ವಿದೇಶಿ ಪ್ರಜೆ ಎಂಬ ವಿಷಯವನ್ನು ಎತ್ತಿತು. ಇದರಿಂದಾಗಿ, ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಪ್ರಸ್ತಾಪಿಸಿದರು. ಮನಮೋಹನ್ ಸಿಂಗ್ ಪ್ರಧಾನಿಯಾದರು. ಆದರೂ ಸೋನಿಯಾ ಗಾಂಧಿ ಸರ್ಕಾರವನ್ನು ತೆರೆಮರೆಯಿಂದ ನಿಯಂತ್ರಿಸುತ್ತಿದ್ದರು ಎಂದು ಹೇಳಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ