Mohali Rocket Attack ಗ್ರೆನೇಡ್ ದಾಳಿಯ ಸುಳಿವು ನೀಡಿದ ಪಿಜ್ಜಾ ಆರ್ಡರ್, ಪಂಜಾಬ್ ಪೊಲೀಸ್ ತನಿಖೆ ಚುರುಕು!

By Suvarna News  |  First Published May 10, 2022, 8:33 PM IST
  • ಪೊಲೀಸ್ ಕೇಂದ್ರ ಗುಪ್ತಚರ ಕಚೇರಿ ಮೇಲೆ ಗ್ರೆನೇಡ್ ದಾಳಿ
  • ಶಂಕಿತರ ಸುಳಿವು ನೀಡಿದ ಪಿಜ್ಜಾ ಡೆಲಿವರಿ
  • ದಾಳಿ ಮೊದಲು ಕಚೇರಿ ಮುಂಭಾಗದಲ್ಲಿತ್ತು ಮಾರುತಿ ಸ್ವಿಫ್ಟ್ ಕಾರು

ಮೊಹಾಲಿ(ಮೇ.10): ಪಂಜಾಬ್ ಗುಪ್ತಚರ ಕೇಂದ್ರ ಕಚೇರಿ ಮೇಲಿನ ಗ್ರೆನೇಡ್ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ದಾಳಿಯ ಕೆಲ ನಿಮಿಷಗಳೇ ಮೊದಲಿನ ಪಿಜ್ಜಾ ಡೆಲಿವರಿ ಶಂಕಿತರ ಮಹತ್ವದ ಸುಳಿವು ನೀಡಿದೆ. ಇದೀಗ ಈ ದಿಕ್ಕಿನಲ್ಲಿ ತನಿಖೆ ಸಾಗಿದೆ.

ದಾಳಿಗೂ ಕೆಲ ನಿಮಿಷಗಳ ಮೊದಲು ಪೊಲೀಸ್ ಅಧಿಕಾರಿ ಆರ್ಡರ್ ಮಾಡಿದ ಪಿಜ್ಜಾ ತರಲು ಕಚೇರಿ ಹೊರಭಾಗಕ್ಕೆ ತೆರಳಿದ್ದಾರೆ. ಈ ವೇಳೆ ಕಚೇರಿ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಮಾರುತಿ ಸ್ವಿಫ್ಟ್ ಕಾರು ಪಾರ್ಕ್  ಆಗಿತ್ತು. ಅನುಮಾನಸ್ವದ ಈ ಕಾರು ಇದೀಗ ಶಂಕಿತರ ಸುಳಿವು ನೀಡಿದೆ.

Tap to resize

Latest Videos

ಪಂಜಾಬ್ ಪೊಲೀಸ್ ಕಚೇರಿ ಮೇಲೆ ರಾಕೆಟ್‌ ಗ್ರೆನೇಡ್‌ ದಾಳಿ

ಆರ್ಡರ್ ಮಾಡಿದ ಪಿಜ್ಜಾ ತರಲು ಹೊರಗೆ ಹೋದ ಕಾರಣ ಈ ಕಾರನ್ನು ಪೊಲೀಸ್ ಅಧಿಕಾರಿ ಗಮನಿಸಿದ್ದಾರೆ. ಆದರೆ ಪೊಲೀಸ್ ಕಚೇರಿ ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರಣ ಕಾರಿನ ಕುರಿತು ಹೆಚ್ಚು ತಲೆಕೆಡೆಸಿಕೊಂಡಿರಲಿಲ್ಲ. ಪಿಜ್ಜಾ ಪಡೆದು ಕಚೇರಿಯೊಳಕ್ಕೆ ಹೋದ ಕೆಲ ಹೊತ್ತಲ್ಲೇ ಗ್ರೆನೇಡ್ ದಾಳಿ ನಡೆದಿದೆ. 

ತಕ್ಷಣವೇ ಅಧಿಕಾರಿಗಳು ಹೊರಗಡೆ ಓಡಿ ಬಂದಿದ್ದಾರೆ. ಈ ವೇಳೆ ಈ ಕಾರು ವೇಗವಾಗಿ ಮುಂದೆ ಸಾಗಿದೆ. ಪಿಜ್ಜಾ ಕಾರಣದಿಂದ ಕಾರನ್ನು ಪೊಲೀಸರು ಗಮನಿಸಿದ್ದಾರೆ. ಇದೀಗ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗಿದೆ. ಕಾರಿನ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪಂಜಾಬ್‌ ಪೊಲೀಸ್‌ ಕಟ್ಟಡದ ಮೇಲೆ ರಾಕೆಟ್‌ ಗ್ರೆನೇಡ್‌ ದಾಳಿ
ಪಂಜಾಬ್‌ನ ಮೊಹಾಲಿಯಲ್ಲಿರುವ ಪೊಲೀಸ್‌ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ಸೋಮವಾರ ಗ್ರೆನೇಡ್‌ ದಾಳಿ ನಡೆಸಲಾಗಿದೆ. ಇದರಲ್ಲಿ ಭಯೋತ್ಪಾದನಾ ಸಂಘಟನೆಗಳ ಪಾತ್ರವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಕೆಟ್‌ ಲಾಂಚರ್‌ ಬಳಕೆ ಮಾಡಿ ಈ ಸ್ಫೋಟಕವನ್ನು ಉಡಾಯಿಸಲಾಗಿದ್ದು, 7.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಯಾವುದೇ ಆಸ್ತಿ, ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದಾರೆ. ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು ತನಿಖೆ ಆರಂಭಿಸಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ ಸಲ್ಲಿಸುವಂತೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಸ್ಫೋಟಕ ಮತ್ತು ಏ.24ರಂದು ಬುರೈಲ್‌ ಜೈಲಿನಲ್ಲಿ ವಶಪಡಿಸಿಕೊಂಡ ಸ್ಫೋಟಕಕ್ಕೆ ಸಾಕಷ್ಟುಸಾಮ್ಯತೆ ಇದೆ.

ಬಗ್ಗಾ ಬಂಧನಕ್ಕೆ ಪಂಜಾಬ್‌ ಹೈಕೋರ್ಟ್‌ ತಡೆ!

ಸುಳಿವು ಸಿಕ್ಕಿದೆ- ಪಂಜಾಬ್‌ ಡಿಜಿಪಿ:
ಈ ನಡುವೆ ಸೋಮವಾರ ಮೊಹಾಲಿನಲ್ಲಿ ರಾಕೆಟ್‌ ಬಳಸಿ ನಡೆಸಲಾದ ಗ್ರೆನೇಡ್‌ ದಾಳಿಯ ಕುರಿತು ಸುಳಿವು ಸಿಕ್ಕಿದೆ. ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್‌ ಡಿಜಿಪಿ ವಿ.ಕೆ. ಭಾವ್ರಾ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮಾನ್‌, ಪೊಲೀಸರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಶಾಂತಿ ಕದಡುವ ಯತ್ನಗಳ ವಿರುದ್ಧ ಎಚ್ಚರಿಸಿದ್ದಾರೆ.

ಏನಾಗಿತ್ತು?:
ಕಳೆದ ವಾರ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸೌಧ ಕಟ್ಟಡದ ಮುಂಭಾಗದ ಗೇಟ್‌ ಮೇಲೆ ಖಲಿಸ್ತಾನ್‌ ಧ್ವಜ ಹಾರಿಸಿ, ಗೋಡೆಯ ಮೇಲೆ ಖಲಿಸ್ತಾನ್‌ ಪರ ಘೋಷಣೆಗಳನ್ನು ಬರೆಯಲಾಗಿತ್ತು. ಇನ್ನು ಮೊಹಾಲಿಯಲ್ಲಿ ಸೋಮವಾರ ಸಂಜೆ ಪೊಲಿಸ್‌ ಗುಪ್ತಚರದ ಕೇಂದ್ರ ಕಚೇರಿ ಮೇಲೆ ಗ್ರೆನೇಡ್‌ ದಾಳಿ ನಡೆಸಲಾಗಿತ್ತು.

click me!