
ನವದೆಹಲಿ (ಅಕ್ಟೋಬರ್ 13): ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿತ್ತು. ರಸ್ತೆ ಮಧ್ಯೆ ಯುವತಿಯೊಬ್ಬಳು ನಿಲ್ಲಲಾಗದೇ ತಡವರಿಸುತ್ತ ಅಲ್ಲೇ ಮಲಗಿದ್ದಳು. ಈ ದೃಶ್ಯ ನೋಡಿದ ಅನೇಕರು ಇದು ಡ್ರಗ್ಸ್ ಕೇಸ್ ಎಂದು ಹೇಳಿದ್ದರು. ನಂತರ ತನಿಖೆ ನಡೆಸಿದಾಗ ಅದು ಪಂಜಾಬ್‌ನಲ್ಲಿ ನಡೆದಿರೋದು ಎಂದು ತಿಳಿದಿತ್ತು. ಅದಾದ ಬಳಿಕ ಇಡೀ ಪಂಜಾಬ್‌ನಲ್ಲಿ ಡಗ್ಸ್ ವಿರುದ್ಧ ಅಲೆ ಎದ್ದಿತ್ತು. ಅಲ್ಲಿನ ಆಪ್ ಸರ್ಕಾರ ಭಾರೀ ಟೀಕೆಗೆ ಗುರಿಯಾಯಿತು. ಡ್ರಗ್ಸ್ ವಿರುದ್ಧ ದೊಡ್ಡ ಮೊಟ್ಟದಲ್ಲಿ ಆಂದೋಲನಗಳು ನಡೆದವು.
ಕಳೆದ ಒಂದು ತಿಂಗಳಿನಿಂದ ಪಂಜಾಬ್ ಡ್ರಗ್ಸ್ ವಿಚಾರಕ್ಕೆ ಮತ್ತೆ ಮತ್ತೆ ಸುದ್ದಿ ಆಗ್ತಿದೆ. ಇವತ್ತು ಘೋರ ಕೃತ್ಯವೊಂದು ನಡೆದಿದೆ. ಮೆಡಿಕಲ್ ಮಾಲೀಕನೊಬ್ಬ ಡ್ರಗ್ಸ್ ವಿರೋಧಿಸಿ ಹೋರಾಟ ನಡೆಸ್ತಿದ್ದ ಕಾರ್ಯಕರ್ತನನ್ನು ಹಾಡು ಹಗಲಲ್ಲೇ ಗುಂಡಿಕ್ಕಿ ಸಾಯಿಸಿದ್ದಾನೆ. ಇದು ಇಡೀ ಪಂಜಾಬ್ ರಾಜ್ಯವನ್ನು ಸಂಚಲನ ಸೃಷ್ಟಿಸಿದೆ. ಆಗಿದ್ದೇನು ಅಂತಾ ನೋಡೋದಾದರೆ.. Anti-drug activist ಪರ್ವಿಂದರ್ ಸಿಂಗ್ (Parvinder Singh) ಎಂಬಾತ, ಮೆಡಿಕಲ್ ಮಾಲೀಕನನ್ನು ಇವತ್ತು ಪ್ರಶ್ನೆ ಮಾಡಿದ್ದ.
ಡ್ರಗ್ಸ್ ಕಂಟೆಂಟ್ ಹೊಂದಿರುವ ಔಷಧಿಗಳನ್ನು ಮೆಡಿಕಲ್ ಮಾಲೀಕ ಒಬ್ಬರಿಗೆ ಅಕ್ರಮವಾಗಿ ನೀಡುತ್ತಿದ್ದ. ಇದನ್ನು ಪರ್ವಿಂದರ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಏಕಾಏಕಿ ಕೋಪಗೊಂಡ ಮೆಡಿಕಲ್ ಮಾಲೀಕ ಆತನ ಮೇಲೆ ಗುಂಡಿಟ್ಟು ಸಾಯಿಸಿದ್ದಾನೆ. ಇನ್ನು ಪಿಸ್ತುಲ್‌ನಿಂದ ಗುಂಡು ಹಿರಿಸುವ ವಿಡಿಯೋ ಮೃತ ಪರ್ವಿಂದರ್ ಸಿಂಗ್‌ನ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮೊಬೈಲ್‌ನಲ್ಲಿ ಫೇಸ್‌ಬುಕ್ ಲೈವ್ ವಿಡಿಯೋ ಮಾಡುತ್ತ ಡ್ರಗ್ಸ್ ವಿರೋಧಿ ಕಾರ್ಯಕರ್ತ ಪ್ರಶ್ನೆ ಮಾಡಿದ್ದ ಎನ್ನಲಾಗಿದೆ. ಈ ಘಟನೆಯು ಮಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪಂಜಾಬ್‌ನಲ್ಲಿ ಈ ಘಟನೆ ಹೊಸ ಸಂಚಲನ ಸೃಷ್ಟಿಸಿದೆ. ಜೊತೆಗೆ ರಾಜಕೀಯವಾಗಿ ಆಹಾರ ಆಗಿದೆ.
ಅಷ್ಟೇ ಅಲ್ಲ.. ಡ್ರಗ್ಸ್ ವಿರುದ್ಧ ಹೋರಾಡುತ್ತಿರೋರ ಮೇಲಿನ ದಾಳಿ ಪಂಜಾಬ್‌ನಲ್ಲಿ ಹೆಚ್ಚುತ್ತಲೇ ಇದೆ. ಸಂಗ್ರೂರ್ ಜಿಲ್ಲೆಯಲ್ಲಿ ಗುಲ್ಜಾರ್ ಸಿಂಗ್ ಎಂಬ ವ್ಯಕ್ತಿ ಸಚಿವ ಸಮ್ಮುಖದಲ್ಲೇ.. ತಮ್ಮ ಊರಿನಲ್ಲಿ ಸಿಗುತ್ತಿರುವ ಡ್ರಗ್ಸ್ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಾದ ಬಳಿಕ ಆತನಿಗೆ ನಿರಂತವರಾಗಿ ಕಿರುಕುಳ ನೀಡಲಾಗಿತ್ತು. ನಂತರ ಅವರು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಅದೇ ಊರಿನಲ್ಲಿ ಇನ್ನೊಬ್ಬ ಸ್ಥಳೀಯನ ಮೇಲೂ ದಾಳಿಯಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಲ್ಲದೇ ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‍ಗಳನ್ನ ಹಿಡಿಯುವ ವೇಳೆ ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿದ್ದಾರೆ. ಜೊತೆಗೆ ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಪಂಜಾಬ್ ಗಡಿ ಪ್ರದೇಶಗಳಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲದೇ.. ಡ್ರಗ್ಸ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಕೆಲವು ಗ್ರಾಮಸ್ಥರ ಮೇಲೆ ಅನುಮಾನಿಸಿ ದಂಧೆಕೋರು ಹಲ್ಲೆ ನಡೆಸುತ್ತಿರುವ ಬಗ್ಗೆಯೂ ವರದಿ ಆಗ್ತಿದೆ.
ಅಂದಹಾಗೆ ಪಂಜಾಬ್ ಸರ್ಕಾರ 'ಯುದ್ಧಂ ನಶ್ಯಾಂ ವಿರುದ್ಧ್' ಎಂಬ ವಿಶೇಷ ಅಭಿಯಾನ ಕೈಗೊಂಡಿದೆ. ಕಳೆದ ಒಂದು ತಿಂಗಳಿನಿಂದ ಸಂಘಟನಾತ್ಮಕ ಕಾರ್ಯಚರಣೆಗಳು ನಡೆಯುತ್ತಿದ್ದು, ಡ್ರಗ್ಸ್ ವಿರುದ್ಧ ಹೊಸ ಸಮರ ಸಾರಲಾಗಿದೆ. ಅದರ ಮುಂದುವರಿದ ಭಾಗವಾಗಿ CASO ಕಾರ್ಯಾಚರಣೆ ನಡೆಯುತ್ತಿದೆ. ಲೂಧಿಯಾನ, ಅಮೃತಸರ, ಪಾಟಿಯಾಲ, ಜಲಂಧರ್ ಸೇರಿದಂತೆ ಸೂಕ್ಷ್ಮ ನಗರಗಳಲ್ಲಿ ನೇರವಾಗಿ ದಾಳಿ ಮಾಡಲಾಗುತ್ತಿದೆ. ಕೆಲವು ಮಾಹಿತಿಗಳ ಪ್ರಕಾರ.. ಲೂಧಿಯಾನ ಒಂದರಲ್ಲೇ 15 ಹಾಟ್‌ಸ್ಪಾಟ್‌ಗಳ ಮೇಲೆ ದಾಳಿ ನಡೆಸಿ ಡ್ರಗ್ಸ್ ಫೆಡ್ಲರ್‍ಗಳನ್ನ ಬಂಧಿಸಲಾಗಿದೆ.
ಜೊತೆಗೆ ಗಡಿಯಾಚೆಗಿನ ಕಳ್ಳಸಾಗಣೆ ತಡೆಯೋದಕ್ಕೂ ಕ್ರಮ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನದ ಗಡಿಯಿಂದ ಡ್ರೋಣ್ ಮತ್ತು ರಹಸ್ಯ ಮಾರ್ಗಗಳ ಮೂಲಕ ಭಾರತಕ್ಕೆ ಸಪ್ಲೈ ಆಗುತ್ತಿರುವ ಡ್ರಗ್ಸ್‌ಗಳ ತಡೆಗೆ ವಿಶೇಷ ಕೂಂಬಿಂಗ್ ನಡೆಸಲಾಗುತ್ತಿದೆ. ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಹೆರಾಯಿನ್, ಅಫೀಮು, ಡ್ರಗ ಮನಿ, ಅಕ್ರಮ ಪಿಸ್ತೂಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ದೇಶದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ