* ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ
* ಕಾಂಗ್ರೆಸ್ ಪಕ್ಷದ ನಾಯಕ, ಸಿಎಂ ಚನ್ನಿ ರಾಜೀನಾಮೆ
* ಆಪ್‌ಗೆ ಸಹಕಾರ ನೀಡುವ ಭರವಸೆ ಜೊತೆ ಸಿಎಂ ಹುದ್ದೆ ತ್ಯಜಿಸಿದ ಚನ್ನಿ
ಚಂಡೀಗಢ(ಮಾ.11): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಚರಂಜಿತ್ ಸಿಂಗ್ ಚನ್ನಿ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ರಾಜೀನಾಮೆ ಸಲ್ಲಿಸಿ, 15ನೇ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದರು.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಚರಂಜಿತ್ ಸಿಂಗ್ ಚನ್ನಿ, ಜನರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಜನರ ಮಧ್ಯೆ ಬದುಕಿ ದುಡಿಯುತ್ತಲೇ ಇರುತ್ತೇನೆ ಎಂದದಿದ್ದಾರೆ. ಇದೇ ವೇಳೆ ತಮ್ಮ ಸರಕಾರ ಕೈಗೊಂಡಿರುವ ನಿರ್ಧಾರಗಳನ್ನು ಮುಂದುವರಿಸಬೇಕು ಎಂದು ಹೊಸ ಸರಕಾರಕ್ಕೆ ಮನವಿ ಮಾಡಿದ್ದಾರೆ. ಪಂಜಾಬ್‌ನ ಜನರು ಬದಲಾವಣೆಗಾಗಿ ಮತ ಹಾಕಿದ್ದಾರೆ. ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾಗಿದೆ. ಸರ್ಕಾರವನ್ನು ಬೆಂಬಲಿಸುತ್ತೇವೆ, ಆ ಜನರು ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಚನ್ನಿ ಹೇಳಿದರು. 111 ದಿನಗಳ ನಮ್ಮ ಕೆಲಸ, ನಿರ್ಧಾರಗಳನ್ನು ಹೊಸ ಸರ್ಕಾರ ಮುಂದುವರೆಸಲಿ ಎಂದಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆ-2022 ರಲ್ಲಿ ಆಮ್ ಆದ್ಮಿ ಪಕ್ಷವು ಬಂಪರ್ ಗೆಲುವು ಸಾಧಿಸಿದೆ ಎಂಬುವುದು ಉಲ್ಲೇಖನೀಯ. ವಿಧಾನಸಭೆಯ 117 ಸ್ಥಾನಗಳಲ್ಲಿ ಎಎಪಿ 92 ಸ್ಥಾನಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ ಕಾಂಗ್ರೆಸ್ ಕೇವಲ 18 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಭಗವಂತ್ ಮಾನ್ ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಆಪ್‌ನ ಸಿಎಂ ಮುಖವಾಗಿದ್ದರು.
ಚರಣಜಿತ್ ಸಿಂಗ್ ಚನ್ನಿಗೆ ಎರಡೂ ಸ್ಥಾನಗಳಲ್ಲಿ ಸೋಲು
ಈ ಬಾರಿಯ ಚುನಾವಣೆಯಲ್ಲಿ ಚನ್ನಿ ಎರಡು ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದರು ಆದರೆ ಎರಡೂ ಕಡೆ ಸೋಲು ಕಂಡಿದ್ದಾರೆ. ಅವರು ಭದೌರ್ ಮತ್ತು ಚಮ್ಕೌರ್ ಸಾಹಿಬ್ ಸ್ಥಾನಗಳಿಂದ ಸ್ಪರ್ಧಿಸಿದರು ಮತ್ತು ಎರಡೂ ಸ್ಥಳಗಳಲ್ಲಿ ಎಎಪಿ ಅಭ್ಯರ್ಥಿಗಗಳು ಗೆಲುವು ಸಾಧಿಸಿದ್ದಾರೆ. ಸೋಲಿನ ಬಳಿಕ ಚರಣ್‌ಜಿತ್ ಸಿಂಗ್ ಚನ್ನಿ ಟ್ವೀಟ್‌ನಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾರೆ.
ಪಂಜಾಬ್ ಜನತೆಯ ನಿರ್ಧಾರವನ್ನು ನಾನು ನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಆಮ್ ಆದ್ಮಿ ಪಕ್ಷ ಮತ್ತು ಅವರ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಗೆಲುವಿಗೆ ನಾನು ಅಭಿನಂದಿಸುತ್ತೇನೆ. ಅವರು ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಚನ್ನಿ ಬರೆದಿದ್ದಾರೆ.
Punjab CM ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್!
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ(Punjab Assembly Election 2022) 92 ಸ್ಥಾನ ಗೆದ್ದು ಹೊಸ ಇತಿಹಾಸ ರಚಿಸಿರುವ ಆಮ್ ಆದ್ಮಿ ಪಾರ್ಟಿ(AAP) ಸರ್ಕಾರ ರಚಿಸಲು ಮುಹೂರ್ತ ಫಿಕ್ಸ್ ಮಾಡಿದೆ. ಮಾರ್ಚ್ 16 ರಂದು ಆಪ್ ನಾಯಕ ಭಗವಂತ್ ಸಿಂಗ್ ಮಾನ್(Bhagwant Mann) ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ(chief minister) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್(Punjab Congress) ಪಕ್ಷವನ್ನು ಧೂಳೀಪಟ ಮಾಡಿರುವ ಆಮ್ ಆದ್ಮಿ ಪಾರ್ಟಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರುತ್ತಿದೆ. ಈಗಾಗಲೇ ರಾಜ್ಯಪಾಲರನ್ನು ಭೇಟಿಯಾಗಿ ಪ್ರಮಾಣ ವಚನ ಹಾಗೂ ಕಾರ್ಯಕ್ರಮ ಕುರಿತು ಅನುಮತಿ ಪಡೆದುಕೊಂಡಿದ್ದಾರೆ. ಇತ್ತ ಪಂಚಾಬ್ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಭಗವಂತ್ ಸಿಂಗ್ ಮಾನ್, ಕಾಂಗ್ರೆಸ್ ಅಭ್ಯರ್ಥಿ ದಲ್ವೀರ್ ಸಿಂಗ್ ಗೋಲ್ಡಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಸಿಎಂ ಸ್ಥಾನಕ್ಕೆ ಚನ್ನಿ ರಾಜೀನಾಮೆ: ಪಂಜಾಬ್ ಬದಲಾವಣೆಗೆ ಮತ ನೀಡಿದೆ ಎಂದು ಅಚ್ಚರಿಯ ಹೇಳಿಕೆ!
ಭಗತ್‌ಸಿಂಗ್ ಹುಟ್ಟೂರಿನಲ್ಲಿ ಮಾನ್ ಪ್ರಮಾಣ
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಜಯಗಳಿಸುತ್ತಿದ್ದಂತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದ್ದ ಭಗವಂತ ಮಾನ್ ಅವರು ಭಗತ್ ಸಿಂಗ್ ಅವರ ಹುಟ್ಟೂರಾದ ಖಟ್ಕಾರ್‌ಕಾಲನ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ‘ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದ ಬದಲು ಖಟ್ಕಾರ್‌ಕಾಲನ್‌ನಲ್ಲಿ ನಡೆಯಲಿದೆ. ಈ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಮಾನ್ ಹೇಳಿದ್ದಾರೆ. ಇದರೊಂದಿಗೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಮುಖ್ಯಮಂತ್ರಿಯ ಫೋಟೋವನ್ನು ಅಳವಡಿಸಲಾಗುವುದಿಲ್ಲ. ಎಲ್ಲಾ ಕಚೇರಿಗಳಲ್ಲಿ ಭಗತ್ ಸಿಂಗ್ ಮತ್ತು ಡಾ.ಅಂಬೇಡ್ಕರ್ ಅವರ ಫೋಟೋಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.