ಲಖನೌ: ಉತ್ತರಪ್ರದೇಶ ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಉದಯಿಸುವ ಎಐಎಂಐಎಂ ಪಕ್ಷದ ನಾಯಕ ಅಸಾಸುದ್ದೀನ್ ಒವೈಸಿ ಅವರ ಕನಸಿಗೆ ಮತ್ತೆ ದೊಡ್ಡ ಪೆಟ್ಟು ಬಿದ್ದಿದೆ. ಹಲವು ಸಣ್ಣ ಪುಟ್ಟಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದ ಒವೈಸಿ ಅವರ ಪಕ್ಷ ಸ್ವತಃ 100 ಸ್ಥಾನಗಳಲ್ಲಿ ಕಣಕ್ಕೆ ಇಳಿದಿತ್ತು. ಆದರೆ ಒಂದೇ ಒಂದು ಸ್ಥಾನದಲ್ಲೂ ಅವರ ಅಭ್ಯರ್ಥಿಗಳು ಜಯ ಗಳಿಸಿಲ್ಲ. ಪಕ್ಷ ಕೇವಲ ಶೇ.0.43ರಷ್ಟುಮತ ಪಡೆದುಕೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಾಣುವ ದೃಷ್ಟಿಯಿಂದ ಓವೈಸಿ ಭಾರಿ ಪ್ರಚಾರ ನಡೆಸಿದ್ದರು. ಆಜಂಗಢ ಫಾರ್ಮಲದಿಂದ ಉತ್ತರ ಪ್ರದೇಶಲ್ಲಿ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದರು. ಜೊತೆಗೆ 11 ಹಿಂದೂಗಳಿಗೆ, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರಿಗೂ ಟಿಕೆಟ್ ನೀಡಿ ಹೊಸ ಪ್ರಯೋಗ ಮಾಡಿದ್ದರು. ಅದು ಫಲ ಕೊಟ್ಟಿಲ್ಲ. ಜೊತೆಗೆ ಒವೈಸಿ ಬಹುವಾಗಿ ನಂಬಿದ್ದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತ್ತು ಯಾದವ ಮತಗಳನ್ನು ಗಳಿಸಿಕೊಳ್ಳುವಲ್ಲಿ ಎಂದಿನಂತೆ ಸಮಾಜವಾದಿ ಪಕ್ಷ ಯಶಸ್ವಿಯಾದ ಕಾರಣ ಐಎಂಐ ದಯನೀಯ ಸೋಲು ಕಂಡಿದೆ.
ಬುಲೆಟ್‌ಗೆ ಬ್ಯಾಲೆಟ್ ಮೂಲಕ ಉತ್ತರ, ಒವೈಸಿಯಿಂದ Z Category ಭದ್ರತೆ ತಿರಸ್ಕಾರ!
2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ 38 ಸ್ಥಾನಗಳಲ್ಲಿ ಎಂಐಎಂ ಸ್ಪರ್ಧಿಸಿತ್ತಾದರೂ, ಒಂದೂ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ವರ್ಷವೂ ಅದು ಪುನರಾವರ್ತನೆಯಾಗಿದೆ. ಬಿಹಾರ, ಮಹಾರಾಷ್ಟ್ರದಲ್ಲಿ ಯಶಸ್ಸು ಉತ್ತರಪ್ರದೇಶದಲ್ಲೂ ಸಿಗಬಹುದು ಎಂಬ ಒವೈಸಿ ಕನಸು ಈ ಬಾರಿಯೂ ನನಸಾಗದೇ ಹೋಗಿದೆ. ಅಲ್ಲದೇ ಈ ಚುನಾವಣೆಯಲ್ಲಿ ಒವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್‌ನ ಪಕ್ಷದ ಹೆಚ್ಚಿನ ಅಭ್ಯರ್ಥಿಗಳು 5,000 ಮತಗಳನ್ನು ಗಳಿಸಲು ಸಾಧ್ಯವಾಗಿಲ್ಲ.
ಅಜಂಗಢದಲ್ಲಿ (Azamgarh) ಎಐಎಂಐಎಂ ಅಭ್ಯರ್ಥಿ ಕಮರ್ ಕಮಲ್ (Qamar Kamal) 1,368, ದಿಯೊಬಂದ್‌ನಲ್ಲಿ (Deoband) ಉಮೈರ್ ಮದ್ನಿ (Umair Madni) 3,145 ಮತ, ಜೌನ್‌ಪುರದಲ್ಲಿ (Jaunpur) ಅಭಯರಾಜ್ (Abhayraj) 1,340, ಕಾನ್ಪುರ ಕ್ಯಾಂಟ್‌ನಲ್ಲಿ (Kanpur Cantt) ಮೊಯಿನುದ್ದೀನ್ (Moinuddin) 754 ಮತ, ಲಖನೌ ಸೆಂಟ್ರಲ್‌ನಲ್ಲಿ(Lucknow Central) ಸಲ್ಮಾನ್ 463, ಮೊರಾದಾಬಾದ್‌ನಲ್ಲಿ (Moradabad) ರಶೀದ್ 1,266 ಮತಗಳು, ಮೊರಾದಾಬಾದ್ ಗ್ರಾಮೀಣದಲ್ಲಿ ಮೊಹಿದ್ ಫರ್ಗನಿ (Mohid Fargani)1,771 ಮತ್ತು ಮೀರತ್‌ನಲ್ಲಿ(Meerut) ಇಮ್ರಾನ್ ಅಹ್ಮದ್ (Imran Ahmed) 2,405 ಮತಗಳನ್ನು ಪಡೆದರು ಎಂದು ಚುನಾವಣಾ ವೆಬ್‌ಸೈಟ್ ತೋರಿಸಿದೆ.
Asaduddin Owaisi attack ದಾಳಿ ಅಪಾಯ ತಗ್ಗಿಲ್ಲ, ಝಡ್ ಭದ್ರತೆ ಸ್ವೀಕರಿಸಿ: ಒವೈಸಿಗೆ ಸಚಿವ ಶಾ ಮನವಿ
ಇತರ ಪಕ್ಷದ ಅಭ್ಯರ್ಥಿಗಳ ಪೈಕಿ ನಿಜಾಮಾಬಾದ್‌ನಲ್ಲಿ(Nizamabad) ಅಬ್ದುರ್‌ರಹ್ಮಾನ್ ಅನ್ಸಾರಿ (Abdur Rahman Ansari) 2,116 ಮತಗಳನ್ನು ಪಡೆದರೆ, ಮುಜಾಫರ್‌ನಗರದಲ್ಲಿ(Muzaffarnagar) ಮೊಹಮ್ಮದ್ ಇಂತೇಜಾರ್ 2,642 ಮತಗಳನ್ನು ಪಡೆದಿದ್ದಾರೆ. ಮೊಹಮ್ಮದ್ ರಫೀಕ್ ಸ್ಯಾಂಡಿಲಾದಲ್ಲಿ(Sandila) 1,363 ಮತಗಳನ್ನು ಪಡೆದಿದ್ದರೆ, ಇರ್ಫಾನ್ ತಾಂಡಾದಲ್ಲಿ 4,886 ಮತಗಳನ್ನು ಪಡೆದರು. ಇನ್ನು ಓವೈಸಿ ಅವರ ಪಕ್ಷವೂ ಮುಸ್ಲಿಂ ಮತದಾರರು ಹೆಚ್ಚಿರುವ ಕ್ಷೇತ್ರಗಳನ್ನೇ ಗುರಿಯಾಗಿರಿಸಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದಾಗ್ಯೂ ಕೇವಲ ಒಂದೇ ಒಂದು ಸೀಟು ಸಿಗದೇ ಇರುವುದು ವಿಪರ್ಯಾಸವೇ ಸರಿ.
2017 ರ ವಿಧಾನಸಭಾ ಚುನಾವಣೆಯಲ್ಲಿ, ಓವೈಸಿ ಅವರ ಪಕ್ಷವು 38 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು ಮತ್ತು 37 ಸ್ಥಾನಗಳಲ್ಲಿ, ಅದರ ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದರು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಭಾರಿ ಬಹುಮತದೊಂದಿಗೆ ಗೆದ್ದು ಬಂದಿದ್ದು, ಇತಿಹಾಸದಲ್ಲೇ ಸತತ ಎರಡನೇ ಬಾರಿಗೆ ಉತ್ತರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ