ಪಂಜಾಬ್ ಸಿಎಂ ಮಾನ್‌ ತೀವ್ರ ಅಸ್ವಸ್ಥ : ಆಸ್ಪತ್ರೆಗೆ ದಾಖಲು

Kannadaprabha News   | Kannada Prabha
Published : Sep 06, 2025, 05:58 AM IST
Ferozepur Floods: Punjab CM Bhagwant Mann Vists Victims, Gets Emotional

ಸಾರಾಂಶ

ಕಳೆದ ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಅವರನ್ನು ಮನೆಯಿಂದ ಕರೆದೊಯ್ದು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಂಡೀಗಢ: ಕಳೆದ ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಅವರನ್ನು ಮನೆಯಿಂದ ಕರೆದೊಯ್ದು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯರು ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಜ್ವರದ ಕಾರನ ಅವರು ಗುರುವಾರ ನೆರೆಪೀಡಿತ ಪ್ರದೇಶಗಳ ಭೇಟಿ ಕೈಬಿಟ್ಟಿದ್ದರು ಹಾಗೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ಅಸ್ಸಾಂ: ಪೋಷಕರ ಜತೆ ಸಮಯ ಕಳೆಲು ಸರ್ಕಾರಿ ನೌಕರರಿಗೆ 2 ದಿನ ರಜೆ

ಗುವಾಹಟಿ: ನೌಕರರು ತಮ್ಮ ತಂದೆತಾಯಿ ಮತ್ತು ಅತ್ತೆ ಮಾವನ ಜತೆ ಹೆಚ್ಚಿನ ಸಮಯ ಕಳೆಯಬೇಕು ಎನ್ನುವ ಕಾರಣಕ್ಕೆ ಅಸ್ಸಾಂ ಸರ್ಕಾರ, ನ.14 ಮತ್ತು 15ರಂದು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ 2 ದಿನದ ವಿಶೇಷ ಸಾಮಾನ್ಯ ರಜೆ ನೀಡಲಿದೆ.ಮಾತೃ ವಿತೃ ವಂದನಾ ಕಾರ್ಯಕ್ರಮದಡಿ ಈ ಸೌಲಭ್ಯ ನೌಕರರಿಗೆ ಸಿಗಲಿದೆ ಎಂದು ಸರ್ಕಾರ ಘೋಷಿಸಿದೆ.\2021ರಲ್ಲಿಯೇ ಮುಖ್ಯಮಂತ್ರಿ ಹಿಮಂತ್‌ ಬಿಸ್ವ ಶರ್ಮಾ ಇದರ ಬಗ್ಗೆ ಘೋಷಿಸಿದ್ದರು. ಇದು ನ.14 ಶುಕ್ರವಾರ ಹಾಗೂ ನ.15 ಶನಿವಾರ ಬರಲಿವೆ. ಇದರ ಜತೆಗೆ ನೌಕರರು ಭಾನುವಾರದ ರಜೆಯನ್ನು ಕೂಡ ಈ ಕಾರ್ಯಕ್ರಮದಡಿ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.

ಈದ್‌ ಮಿಲಾದ್‌ಗೆ ಕಾಶ್ಮೀರದಲ್ಲಿ ರಜೆ ಇಲ್ಲ: ವಿವಾದ

ಶ್ರೀನಗರ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಈದ್‌ ಮಿಲಾದ್‌ ರಜೆ ವಿಚಾರ ಸದ್ಯ ವಿವಾದಕ್ಕೆ ಕಾರಣವಾಗಿದೆ. ಚಾಂದ್ರಮಾನ ಪದ್ಧತಿಯಂತೆ ರಾಜ್ಯದಲ್ಲಿ ಶನಿವಾರ ಈದ್‌ ಮಿಲಾದ್‌ ಆಚರಿಸಲೂ ನಿರ್ಧರಿಸಿದ್ದರೂ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಶುಕ್ರವಾರವೇ ಆಡಳಿತ ರಜೆ ಘೋಷಿಸಿರುವುದು ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.

ಜಮ್ಮು ಕಾಶ್ಮೀರ ಸರ್ಕಾರದ ಸಚಿವೆ ಸಕೀನಾ ಇಟೂ ಮಾತನಾಡಿ, ‘ಇಸ್ಲಾಮಿಕ್‌ ಲೂನಾರ್‌ ಕ್ಯಾಲೆಂಡರ್‌ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಶನಿವಾರ ಈದ್‌ಮಿಲಾದ್‌ ಆಚರಿಸಲು ನಿರ್ಧರಿಸಲಾಗಿದೆ. ಆದರೆ ಮನೋಜ್‌ ಸಿನ್ಹಾ ಇತರ ರಾಜ್ಯಗಳಂತೆ ಶುಕ್ರವಾರ ರಜೆ ನೀಡಿದ್ದಾರೆ. ಸಿನ್ಹಾ ಜನರ ಭಾವನೆಗಳ ಜತೆ ಆಟವಾಡುತ್ತಿದ್ದಾರೆ. ಜಮ್ಮು ಕಾಶ್ಮೀರ ದಲ್ಲಿ ಸರಿಯಾದ ದಿನದಂದು ಈದ್‌ ಮಿಲಾದ್ ರಜೆ ಆಚರಿಸದಿರುವುದು ಅನ್ಯಾಯ. ಹಲವು ಸಲ ರಜಾ ದಿನವನ್ನು ಬದಲಿಸು ವಂತೆ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್