ಪುಣೆಯ ಯುವಕ ಕ್ಲಿಕ್ಕಿಸಿದ ಸ್ಪಷ್ಟ ಚಂದ್ರನ ಫೋಟೋ ವೈರಲ್

By Suvarna NewsFirst Published May 20, 2021, 3:24 PM IST
Highlights
  • 10ನೇ ತರಗತಿ ವಿದ್ಯಾರ್ಥಿ ಕ್ಲಿಕ್ಕಿಸಿದ ಸ್ಪಷ್ಟ ಚಂದ್ರನ ಫೋಟೋ
  • ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಪುಣೆ(ಮೇ.20): ಸೋಷಿಯಲ್ ಮೀಡಿಯಾದಲ್ಲಿ ಚಂದ್ರನ ಸ್ಪಷ್ಟ ಫೋಟೋಗಳನ್ನು ಶೇರ್ ಮಾಡಿದ ಯುವಕ ಈಗ ಫೇಮಸ್ ಆಗಿದ್ದಾನೆ. ಹಾಗೆಯೇ ಅವನು ಕ್ಲಿಕ್ಕಿಸಿದ ಪೋಟೋಗಳು ಎಲ್ಲೆಡೆ ವೈರಲ್ ಆಗಿವೆ.

ಪುಣೆಯ ಪ್ರಥಮೇಶ್ ಜಾಜು ಎಂಬ 16 ವರ್ಷದ ಯುವಕ ಸುಮಾರು 50 ಸಾವಿರ ಫೋಟೋಗಳನ್ನು ಕ್ಲಿಕ್ಕಿಸಿದ್ದಾನೆ. ಆಮೇಲೆ ಅವುಗಳನ್ನು ಜೋಡಿಸಿ ಕ್ಲಿಯರೆಸ್ಟ್ ಫೋಟೋ ಪಡೆಯುವಲ್ಲಿ ಸಕ್ಸಸ್ ಆಗಿದ್ದಾನೆ. ಫೋಟೋ ಮತ್ತು ವಿಡಿಯೋ ಸರಿಯಾಗಿ ಹೊಂದಿಸಲು 40 ಗಂಟೆ ಕೆಲಸ ಮಾಡಿದ್ದಾನೆ ಈತ.

ನಾನು ಮೇ 3ರಂದು 1 ಗಂಟೆಗೆ ಫೋಟೋ ತೆಗೆದೆ. ವಿಡಿಯೋ ಮತ್ತು ಪೋಟೋ ಮೂಲಕ 4 ಗಂಟೆ ಫೋಟೋ ಕ್ಲಿಕ್ಕಿಸಿದೆ. ಸ್ಪಷ್ಟ ಫೋಟೋ ಸಿಗಲೆಂದೇ 50 ಸಾವಿರ ಫೋಟೋ ಕ್ಲಿಕ್ಕಿಸಿದ್ದೆ. ಅವುಗಳನ್ನು ಜೋಡಿಸಿ ಶಾರ್ಪ್ ಮಾಡಿದೆ, ಸ್ಪಷ್ಟವಾಗಿ ನೋಡಲು ಹೀಗೆ ಮಾಡಿದ್ದೆ. 100 ಜಿಬಿ ಇದ್ದ ಡಾಟಾ ಫೋಟೋ ರೆಡಿಯಾದಾಗ 186 ಜಿಬಿಯಾಗಿತ್ತು. ಎಲ್ಲವೂ ಒಟ್ಟಾದಾಗ 600 ಎಂಬಿಯಾಗಿತ್ತು.

ಮನೆಯಲ್ಲೇ ಟೆಸ್ಟ್ ಮಾಡ್ಬೋದು ಕೊರೋನಾ: ರ‍್ಯಾಪಿಡ್ ಹೋಂ ಟೆಸ್ಟಿಂಗ್ ಕಿಟ್‌ಗೆ ICMR ಒಪ್ಪಿಗೆ

ನಾನು ಕೆಲವು ಲೇಖನ ಓದಿದ್ದೆ, ಕೆಲವು ಯೂಟ್ಯೂಬ್ ವಿಡಿಯೋಸ್ ನೋಡಿ ಈ ಫೋಟೋ ಕ್ಲಿಕ್ಕಿಸುವ ಐಡಿಯಾ ಬಂತು ಎಂದಿದ್ದಾನೆ ಯುವಕ. ವಿದ್ಯಾ ಭವನ ಶಾಲೆಯ 10 ನೇ ತರಗತಿಯ ಬಾಲಕನೀತ. ಈತನ ತಂದೆ ಕಂಪ್ಯೂಟರ್ ಸೇಲ್ಸ್, ಸರ್ವೀಸ್ ಮಾಡಿದರೆ ತಾಯಿ ಗೃಹಿಣಿ.

ಫೋಟೋಗ್ರಫಿಯಲ್ಲದೆ ಜಾಜು ಅಥ್ಲೆಟ್ ಕೂಡಾ ಹೌದು. ನ್ಯಾಷನಲ್ ಲೆವೆಲ್‌ನಲ್ಲೂ ಭಾಗವಹಿಸಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಈತನಿಗೆ 16500ಫಾಲೋವರ್ಸ್ ಇದ್ದಾರೆ. ಭವಿಷ್ಯದಲ್ಲಿ ಅಸ್ಟ್ರೋಫಿಸಿಸ್ಟ್ ಆಗುವ ಕನಸು ಈತನದ್ದು. ಸದ್ಯ ಇದು ಹವ್ಯಾಸ ಅಷ್ಟೇ ಅನ್ನುತ್ತಾನೆ ಈತ.

click me!