
ನವದೆಹಲಿ (ಏ.17): ಕರ್ನಾಟಕದ ಶಿರಸಿ ಸಮೀಪದ ಹೆಗಡೆಕಟ್ಟೆಮೂಲದ ಡಾ.ಕಾರ್ತಿಕ್ ವಿ. ಹೆಗಡೆಕಟ್ಟೆಅವರು ಪ್ರಧಾನಿ ಕಚೇರಿ ಅಧೀನದ ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಈವರೆಗೆ ಇದೇ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಪದೋನ್ನತಿ ಲಭಿಸಿದೆ. ಹೊಸ ಹುದ್ದೆಯಲ್ಲಿ ಅವರು 2022ರ ಜುಲೈ 18ರವರೆಗೆ ಕಾರ್ಯನಿರ್ವಹಿಸಲಿದ್ದಾರೆ. ಇಂತಹ ಮಹತ್ವದ ಹುದ್ದೆಗೆ ಕನ್ನಡಿಗರೊಬ್ಬರ ನೇಮಕ ಹೆಮ್ಮೆಯ ವಿಷಯವಾಗಿದೆ.
ಪಿಎಂ ಮೋದಿ ಖಾಸಗಿ ಕಾರ್ಯದರ್ಶಿಯಾಗಿ IAS ಅಧಿಕಾರಿ ಹಾರ್ದಿಕ್ ಸತೀಶ್ಚಂದ್ರ ಶಾ! .
ಕಾರವಾರ, ಹುಬ್ಬಳ್ಳಿಯಲ್ಲಿ ಓದು: ಕಾರವಾರದಲ್ಲಿ ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣ ಪಡೆದ ಡಾ. ಕಾರ್ತಿಕ್ ಅವರು ನಂತರ ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್‌ನಲ್ಲಿ 2004ರಿಂದ 2010ರವರೆಗೆ ಎಂಬಿಬಿಎಸ್ ಪದವಿ ಪಡೆದರು.
ನಂತರ ಕೇಂದ್ರ ಸರ್ಕಾರಿ ಸೇವೆ ಸೇರಿದ ಅವರು, ಲಖನೌನಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನ ರೈಲ್ವೆ ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ 2014ರಿಂದ 2018ರವರೆಗೆ ಕರ್ತವ್ಯದಲ್ಲಿದ್ದರು. 2018ರಲ್ಲಿ ಕೇಂದ್ರ ಸಿಬ್ಬಂದಿ ಸಚಿವಾಲಯಕ್ಕೆ ವರ್ಗಾವಣೆಗೊಂಡ ಅವರು, ಅಧೀನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ