ವಿಶ್ವದ ಅಚ್ಚುಮೆಚ್ಚಿನ ವ್ಯಕ್ತಿಗಳಲ್ಲಿ ಮೋದಿ ನಂ.6, ಬಚ್ಚನ್‌ ನಂ.12

Published : Dec 16, 2019, 12:21 PM IST
ವಿಶ್ವದ ಅಚ್ಚುಮೆಚ್ಚಿನ ವ್ಯಕ್ತಿಗಳಲ್ಲಿ ಮೋದಿ ನಂ.6, ಬಚ್ಚನ್‌ ನಂ.12

ಸಾರಾಂಶ

ವಿಶ್ವದ ಅಚ್ಚುಮೆಚ್ಚಿನ ವ್ಯಕ್ತಿಗಳಲ್ಲಿ ಮೋದಿ ನಂ.6, ಬಚ್ಚನ್‌ ನಂ.12|  ಬ್ರಿಟನ್‌ ಮೂಲದ ಯು ಗೌ ನಡೆಸಿದ ಜಾಗತಿಕ ಸಮೀಕ್ಷಾ ವರದಿ

ನವದೆಹಲಿ[ಡಿ.16]: ವಿಶ್ವದ ಅಚ್ಚುಮೆಚ್ಚಿನ ವ್ಯಕ್ತಿಗಳ ಪಟ್ಟಿಯೊಂದನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಬ್ರಿಟನ್‌ ಮೂಲದ ಯು ಗೌ ನಡೆಸಿದ ಜಾಗತಿಕ ಸಮೀಕ್ಷಾ ವರದಿ ಅನ್ವಯ, ಭಾರತದ ಪ್ರಧಾನಿ ನರೇಂದ್ರ ಮೋದಿ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.

ಉಳಿದಂತೆ ನಟ ಅಮಿತಾಭ್‌ ಬಚ್ಚನ್‌ ನಂ.12, ನಟ ಶಾರುಖ್‌ ಖಾನ್‌ ನಂ.16, ಸಲ್ಮಾನ್‌ ಖಾನ್‌ ನಂ.18ನೇ ಸ್ಥಾನ ಪಡೆದಿದ್ದಾರೆ. ಇನ್ನು ಮಹಿಳೆಯರ ಪಟ್ಟಿಯಲ್ಲಿ ನಟಿಯರಾದ ದೀಪಿಕಾ ಪಡುಕೋಣೆ (ನಂ.13), ಪ್ರಿಯಾಂಕಾ ಚೋಪ್ರಾ (ನಂ.14), ಐಶ್ವರ್ಯಾ ರೈ (ನಂ.16) ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗದಲ್ಲಿ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌, ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ, ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: 200 ವರ್ಷಗಳ ಬಳಿಕ ಪರಿವಾರದಲ್ಲಿ ಹೆಣ್ಣು ಮಗುವಿನ ಜನನ!
ಗಂಡನ ಆದಾಯ ಮೀರಿ ಪತ್ನಿಗೆ ಜೀವನಾಂಶ ನೀಡಲಾಗದು: ದೆಹಲಿ ಕೋರ್ಟ್ ಮಹತ್ವದ ಅಭಿಪ್ರಾಯ