
ಲಕ್ನೋ/ಗೋರಖ್‌ಪುರ, ಜುಲೈ 1: ರಾಷ್ಟ್ರಪತಿ ದ್ರೌಪದಿ ಮುರ್ಮೂ ಅವರು ಜುಲೈ 1 ರಿಂದ 7 ರವರೆಗೆ ನಡೆಯುವ 'ವನಮಹೋತ್ಸವ-2025' ಕ್ಕೆ ಸೋಮವಾರ ಚಾಲನೆ ನೀಡಿದರು. ಮಹಾಯೋಗಿ ಗುರು ಗೋರಖ್‌ನಾಥ್ ಆಯುಷ್ ವಿಶ್ವವಿದ್ಯಾಲಯದ ಲೋಕಾರ್ಪಣ ಸಮಾರಂಭದಲ್ಲಿ 'ಒಂದು ಗಿಡ ಅಮ್ಮನ ಹೆಸರಿನಲ್ಲಿ' ಅಭಿಯಾನದಡಿಯಲ್ಲಿ ರುದ್ರಾಕ್ಷಿ ಗಿಡ ನೆಟ್ಟರು. ಗಿಡಗಳ ರಕ್ಷಣೆಗೆ ಒತ್ತು ನೀಡಿದರು.
ರಾಷ್ಟ್ರಪತಿಗಳು ಇಲ್ಲಿ ಜನಪ್ರತಿನಿಧಿಗಳ ಪರಿಚಯ ಪಡೆದು, ಪ್ರದರ್ಶನ ವೀಕ್ಷಿಸಿದರು. ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.
ವನಮಹೋತ್ಸವದ ಅಂಗವಾಗಿ, ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಅರುಣ್ ಕುಮಾರ್ ಸಕ್ಸೇನಾ ಅವರು ಕುಕ್ರೇಲ್‌ನಲ್ಲಿ ತ್ರಿವೇಣಿ ವನ (ಆಲ, ಬೇವು ಮತ್ತು ಅರಳಿ) ಸ್ಥಾಪಿಸಿದರು. ಇಲ್ಲಿ ಓಪನ್ ಜಿಮ್ ಉದ್ಘಾಟನೆ, ಯೋಗ ಧ್ಯಾನ ಕೇಂದ್ರ ಉದ್ಘಾಟನೆ ಮತ್ತು ಬುದ್ಧ ಪ್ರತಿಮೆ ಅನಾವರಣ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ