ಜಮ್ಮು ಕಾಶ್ಮೀರದಲ್ಲಿ ಪ್ರವಾಸದಲ್ಲಿದ್ದ ಮಹಿಳೆಯೊಬ್ಬರು ಮುದ್ದಾದ ಮಗುವಿನೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಆಟ, ತುಂಟಾಟ, ಬೇಸರ ಎಲ್ಲವನ್ನೂ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಲಡಾಕ್: ಇಂದು ಪ್ರವಾಸಿಗರು ತಾವು ಭೇಟಿ ನೀಡುತ್ತಿರುವ ಸ್ಥಳದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದ್ರೆ ಕೆಲವೊಂದು ವಿಡಿಯೋಗಳು ಅಪರೂಪದ ಕಂಟೆಂಟ್ ಹೊಂದಿರುವ ಕಾರಣ ಊಹೆಗೂ ನಿಲುಕದಷ್ಟು ವ್ಯೂವ್ ಪಡೆದುಕೊಳ್ಳುತ್ತವೆ. ಇದೀಗ ಇಂತಹುವುದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಜಮ್ಮು ಕಾಶ್ಮೀರದ ಪ್ರವಾಸದಲ್ಲಿದ್ದ ಮಹಿಳೆ ಮುದ್ದಾದ ಮಗು ಸಿಕ್ಕಿದೆ. ಈ ಮಗುವಿನ ಜೊತೆ ಕಳೆದ ಸುಂದರ ಕ್ಷಣಗಳ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಗುವಿನ ಆಟ, ತುಂಟಾಟ, ಬೇಸರ ಎಲ್ಲವನ್ನೂ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ನಾವು ಹೊಸ ಸ್ಥಳಕ್ಕೆ ಹೋದಾಗ, ನಾವು ಖಂಡಿತವಾಗಿಯೂ ಅಲ್ಲಿ ಯಾರನ್ನಾದರೂ ಭೇಟಿಯಾಗುತ್ತೇವೆ, ಅವರ ನೆನಪುಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಇದೇ ರೀತಿಯ ಘಟನೆಯೊಂದನ್ನು ಪ್ರವಾಸಿ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಇದುವರೆಗೂ 2 ಕೋಟಿಗೂ ಅಧಿಕ ವ್ಯೂವ್ ಮತ್ತ ಸಾವಿರಾರು ಕಮೆಂಟ್‌ಗಳು ಬಂದಿವೆ. ಶಫೀರಾ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಆ ಮಗು ಹೇಗೆ ನನ್ನ ಹತ್ತಿರ ಬಂತು. ನನ್ನ ಜೊತೆ ಆಡಲು ಹೇಳಿದಾಗ, ಒಪ್ಪಿಕೊಂಡ ಮಗು ಬಳಿಗೆ ಬಂತು. ಬ್ಯಾಟ್ ಹಿಡಿದು ಆಡುವಾಗ ಮಗು ಕೆಳಗೆ ಬಿದ್ದು ನಗಲು ಆರಂಭಿಸಿತು. ಮಗುವಿನ ಜೊತೆ ಒಂದಿಷ್ಟು ಸಂಭಾಷಣೆಯೂ ನಡೆಯಿತು. ಕಡಿಮೆ ಸಮಯ ನನ್ನ ಜೊತೆಯಲ್ಲಿದ್ದರೂ, ಪ್ರತಿಯೊಂದು ಕ್ಷಣವೂ ಅದ್ಭುತವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಧು ಕಣ್ಣೀರಿಟ್ಟು ಹೇಳಿದ್ದನ್ನು ನೋಡಿ ವರ ಶಾಕ್; ಇಲ್ಲೇ ಹಿಂಗೆ, ಮುಂದೆ ಹೆಂಗೆ ಎಂದ ನೆಟ್ಟಿಗರು
ಶಫೀರಾ ಅಲ್ಲಿಂದು ಹೊರಡಲು ಸಿದ್ಧರಾಗಿ ಬೈ ಎಂದು ಹೇಳುತ್ತಿದ್ದಂತೆ ಮಗು ಬೇಸರದಿಂದ ಮುಖ ತಿರುಗಿಸಿಕೊಂಡು ಹೋಗುತ್ತದೆ. ಈ ಒಂದು ದೃಶ್ಯ ನೋಡುಗರನ್ನು ಭಾವುಕರನ್ನಾಗಿ ಮಾಡಿದೆ. ಅಲ್ಲಿಂದ ಹೊರಡಿದ ಶಫೀರಾ ಮತ್ತೆ ಮರುದಿನ ಮಗುವನ್ನು ಹುಡುಕಿಕೊಂಡು ಬಂದಿದ್ದಾರೆ. ಶಫೀರಾ ಅವರನ್ನು ನೋಡುತ್ತಿದ್ದಂತೆ ಮಗುವಿನ ಮುಖದಲ್ಲಿನ ಆ ನಗು ಎಲ್ಲರ ಹೃದಯಕ್ಕೆ ಹತ್ತಿರವಾಗಿದೆ. ಮಗುವಿಗಾಗಿ ತಂದಿದ್ದ ಬಟ್ಟೆ, ಚಾಕ್ಲೆಟ್ ನೀಡಿ ಶಫೀರಾ ಅಲ್ಲಿಂದ ಹಿಂದಿರುಗಿದ್ದಾರೆ.
"ಯಾರ ದಿನವನ್ನು ಯಾರು ಹೆಚ್ಚು ಸುಂದರಗೊಳಿಸಿದ್ದಾರೆಂದು ನನಗೆ ತಿಳಿದಿಲ್ಲ" ಎಂದು ಪೋಸ್ಟ್‌ಗೆ ಬರೆಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜನರ ಮನ ಗೆಲ್ಲುತ್ತಿದೆ. ರಿಧಿಮಾ ಪಂಡಿತ್ ಮತ್ತು ಕವಿತಾ ಕೌಶಿಕ್ ಸೇರಿದಂತೆ ಸೆಲೆಬ್ರಿಟಿಗಳು ಸಹ ವೀಡಿಯೊಗೆ ಪ್ರೀತಿಯ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನೀವೂ ಹೀಗೆ ಮಾಡಿದ್ದೀರಾ? ನಕ್ಕು ನಕ್ಕು ಸುಸ್ತಾದ ಏರ್‌ಪೋರ್ಟ್ ಸಿಬ್ಬಂದಿ, ಇದುವೇ ಫ್ರೆಂಡ್‌ಶಿಪ್ ಎಂದ್ರು ಜನ