Meghalaya Politics: ಕಾಂಗ್ರೆಸ್‌ಗೆ ಟಿಎಂಸಿ ಗುದ್ದು: ಪಿಕೆ ಆಟಕ್ಕೆ ಎಲ್ಲರೂ ಸೈಲೆಂಟ್!

By Suvarna NewsFirst Published Nov 25, 2021, 5:35 PM IST
Highlights

* ಮೇಘಾಲಯದಲ್ಲಿ ಏಕಾಏಕಿ ಬದಲಾಯ್ತು ರಾಜಕೀಯದಾಟ

* ಮಾಜಿ ಸಿಎಂ ಸಂಗ್ಮಾ ಸೇರಿ 12 ಕಾಂಗ್ರೆಸ್‌ ಶಾಸಕರು ಟಿಎಂಸಿಗೆ

* ಒಂದೂ ಸ್ಥಾನ ಗೆದ್ದಿರದ ಮಮತಾರ ಟಿಎಂಸಿ ಈಗ ಅಧಿಕೃತ ವಿಪಕ್ಷ

* ಈ ಬದಲಾವಣೆ ಹಿಂದಿದೆ ಪ್ರಶಾಂತ್ ಕಿಶೋರ್ ಮೆದುಳು

ಶಿಲ್ಲಾಂಗ್(ನ.25): ಮಹತ್ವದ ಬೆಳವಣಿಗೆಯೊಂದರಲ್ಲಿ ಮೇಘಾಲಯದ (Meghalaya) 17 ಕಾಂಗ್ರೆಸ್‌ ಶಾಸಕರ (Congress MLA's) ಪೈಕಿ ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ (Former Chief Minister Mukul Sangma) ಸೇರಿ 12 ಶಾಸಕರು ಬುಧವಾರ ರಾತ್ರೋ-ರಾತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ (Trinamool Congress) ಸೇರ್ಪಡೆಯಾಗಿದ್ದಾರೆ. ಇದರಿಂದ, ಮೇಘಾಲಯ ವಿಧಾನಸಭೆಯಲ್ಲಿ (Meghalaya Assembly) ಒಂದೂ ಸ್ಥಾನ ಹೊಂದಿರದಿದ್ದ ಟಿಎಂಸಿ (TMC) ದಿಢೀರನೆ ಅಧಿಕೃತ ವಿಪಕ್ಷವಾಗಿ ಹೊರಹೊಮ್ಮಿದೆ.ಈ ನಾಯಕರು ಟಿಎಂಸಿ ಸೇರ್ಪಡೆ ಕುರಿತು ಗುರುವಾರ ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗಿದೆ. 17ರ ಪೈಕಿ 12 ಶಾಸಕರು ಅಂದರೆ ಮೂರನೇ ಎರಡರಷ್ಟು ಶಾಸಕರು ಪಕ್ಷಾಂತರ ಮಾಡಿರುವ ಹಿನ್ನೆಲೆಯಲ್ಲಿ ಇವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದು.

ಹೌದು ಮೇಘಾಲಯದ ಈ ರಾಜಕೀಯ ಚದುರಂಗದಾಟ ಎಲ್ಲರನ್ನು ಬೆಚ್ಚಿ ಬೀಳಿಸಿದೆ. 12 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ ನಂತರ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಪ್ರಾಬಲ್ಯ ಹೆಚ್ಚಿದೆ. 12 ಮಂದಿ ಕೈ ನಾಯಕರು ಮುಕುಲ್ ಸಂಗ್ಮಾ (Mukul Sangma) ನೇತೃತ್ವದಲ್ಲಿ ಟಿಎಂಸಿ ಸೇರಿದ್ದಾರೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Election Strategist Prashant Kishor) ಹಾಗೂ ಹಿರಿಯ ಕಾಂಗ್ರೆಸ್ ನಾಯಕರ ಭೇಟಿಯಿಂದ ಈ ರಾಜಕೀಯ ಬೆಳವಣಿಗೆ ಆರಂಭವಾಗಿದೆ ಎನ್ನಲಾಗಿದೆ. ಇಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮುಕುಲ್ ಸಂಗ್ಮಾ ಅವರು ಕೋಲ್ಕತ್ತಾದಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದರು. ಅವರನ್ನು ಒಳ್ಳೆಯ ಗೆಳೆಯ ಎಂದು ಕರೆದು ಬದಲಾವಣೆ ತರಬಲ್ಲರು ಎಂದರು.

Meghalaya Politics : ಕಾಂಗ್ರೆಸ್‌ಗೆ ಬಿಗ್ ಶಾಕ್‌ - ರಾತ್ರೊ ರಾತ್ರಿ ಪಕ್ಷ ತೊರೆದ 12 ಶಾಸಕರು

ಕಾಂಗ್ರೆಸ್ ಹೈಕಮಾಂಡ್ (Congress High Command) ವಿನ್ಸೆಂಟ್ ಪಾಲಾ ಅವರನ್ನು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ ನಂತರ ಈ ಬದಲಾವಣೆ ಪ್ರಾರಂಭವಾಯಿತು ಎಂದು ಸಂಗ್ಮಾ ಹೇಳಿದ್ದಾರೆ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಮನಸ್ಥಿತಿಯಲ್ಲಿದ್ದ ವಿಪಕ್ಷ ನಾಯಕ ಸಂಗ್ಮಾ ಅವರಿಗೆ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಅಸಮಾಧಾನವಿತ್ತು. ಹೀಗಾಗಿ ಅವರು ಪಕ್ಷ ತೊರೆದಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ ಸಮತೋಲನ ಇರಬೇಕು. ನಮಗೆ ಪರಿಣಾಮಕಾರಿ ವಿರೋಧ ಪಕ್ಷದ ಅಗತ್ಯವಿದೆ" ಎಂದು ಸಂಗ್ಮಾ ಹೇಳಿದ್ದಾರೆ. "ನಾವು ಇದನ್ನು ದೆಹಲಿಯ ನಾಯಕತ್ವದೊಂದಿಗೆ ಹಂಚಿಕೊಂಡಿದ್ದೇವೆ. ನಾವು ದೆಹಲಿಗೆ ಹಲವಾರು ಪ್ರವಾಸಗಳನ್ನು ಮಾಡಿದ್ದೇವೆ, ಆದರೆ ಏನೂ ಆಗಲಿಲ್ಲ ವಿರೋಧ ಪಕ್ಷಕ್ಕೆ ಪರ್ಯಾಯವನ್ನು ಹುಡುಕುತ್ತಿರುವಾಗ, ನಾನು ನನ್ನ ಉತ್ತಮ ಸ್ನೇಹಿತ ಪ್ರಶಾಂತ್ ಕಿಶೋರ್-ಜಿ ಅವರನ್ನು ಭೇಟಿಯಾದೆ, ಅವರು ನಮಗೆಲ್ಲರಿಗೂ ತಿಳಿದಿರುವ ವ್ಯತ್ಯಾಸವಿದೆ. ನಾನು ನಾವು ಮಾತನಾಡುವಾಗ, ಜನರ ಹಿತಾಸಕ್ತಿ ಹೊಂದಿರುವ ಅದೇ ಉದ್ದೇಶವನ್ನು ಹಂಚಿಕೊಂಡಿದ್ದೇವೆ ಎಂದು ಹಂಚಿಕೊಳ್ಳಲು ತುಂಬಾ ಸಂತೋಷವಾಗಿದೆ ಎಂದಿದ್ದಾರೆ. 

ಸದ್ಯ ಮೇಘಾಲಯದಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ, ಎನ್‌ಡಿಎ ಮಿತ್ರಪಕ್ಷಗಳ ಜೊತೆಗೂಡಿ ಸರ್ಕಾರ ನಡೆಸುತ್ತಿದೆ. ಎನ್‌ಪಿಪಿಯ ಕಾನ್ರಾಡ್‌ ಸಂಗ್ಮಾ ಮುಖ್ಯಮಂತ್ರಿಯಾಗಿದ್ದಾರೆ. 2023ರಲ್ಲಿ 60 ಸ್ಥಾನಬಲ ಹೊಂದಿರುವ ರಾಜ್ಯ ವಿಧಾನಸಭೆಗೆ ಮುಂದಿನ ಚುನಾವಣೆ ನಡೆಯಬೇಕಿದೆ.

click me!