
ಚೆನ್ನೈ[ಫೆ.27]: ತಿರುವನ್ನಾಲೈಕಾವಲ್ ನ ಜಂಬುಕೇಶ್ವರ ದೇವಸ್ಥಾನದ ಬಳಿ ಅಗೆಯುತ್ತಿದ್ದ ವೇಳೆ ತಾಮ್ರದ ಪಾತ್ರೆಯೊಂದರಲ್ಲಿ 1.7 ಕೆ. ಜಿಯ 505 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಜನರೆಲ್ಲರೂ ಬಹುದೊಡ್ಡ ಸಂಖ್ಯೆಯಲ್ಲಿ ಮಣ್ಣು ಅಗೆಯುತ್ತಿದ್ದವ ಸ್ಥಳಕ್ಕೆ ಧಾವಿಸಿದ್ದಾರೆ.
ಇನ್ನು ದೇವಸ್ಾಥನದ ಆಡಳಿತಾಧಿಕಾರಿಗಳು ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, 'ಭೂಮಿಯೊಳಗೆ ಹೂತಿಟ್ಟಿದ್ದ 504 ಸಣ್ಣ ಹಾಗೂ 1 ದೊಡ್ಡ ಚಿನ್ನದ ನಾಣ್ಯ ಸಿಕ್ಕಿದೆ. ಇವುಗಳ ಮೇಲೆ ಅರೇಬಿಯನ್ ಕ್ಷರಗಳಿವೆ. ಇವುಗಳು ಸುಮಾರು 1 ಸಾವಿರದಿಂದ 1200 ವರ್ಷ ಹಳೆಯ ನಾಣ್ಯಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಇವು ಸುಮಾರು 7 ಅಡಿ ಆಳದಲ್ಲಿ ಸಿಕ್ಕಿವೆ' ಎಂದಿದ್ದಾರೆ.
ಇನ್ನು ಪತ್ತೆಯಾದ ತಾಮ್ರದ ಪಾತ್ರೆ ತೆರೆದು ನೋಡಿದಾಗ ಅದರಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಈ ನಾಣ್ಯಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ನಾಣ್ಯದ ಮೌಲ್ಯ ಎಷ್ಟು ಎಂಬ ಮಾಹಿತಿ ಲಭ್ಯವಾಗಿಲ್ಲ.
ಪತ್ತೆಯಾದ ಈ ನಾಣ್ಯಗಳನ್ನು ಮುಂದಿನ ತನಿಖೆಗೆಂದು ಖಜಾನೆಯಲ್ಲಿ ಇರಿಸಲಾಗಿದೆ. ಸದ್ಯ ಸುದ್ದಿ ಸಂಸ್ಥೆ ANI ಈ ನಾಣ್ಯಗಳ ಫೋಟೋ ಟ್ವೀಟ್ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ