ಮತಾಂತರ, ಒಳನುಸುಳುವಿಕೆಯಿಂದ ಜನಸಂಖ್ಯಾ ಅಸಮಾನತೆ: ಹೊಸಬಾಳೆ

By Girish Goudar  |  First Published Oct 20, 2022, 2:00 AM IST

ಮತಾಂತರ ನಿಷೇಧ ಕಾಯ್ದೆ ಕಠಿಣವಾಗಿ ಜಾರಿಯಾಗಬೇಕು, ಇಸ್ಲಾಂ, ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರ ಮರಳಿ ತರಬೇಕು: ದತ್ತಾತ್ರೇಯ ಹೊಸಬಾಳೆ 


ಪ್ರಯಾಗರಾಜ್‌(ಅ.20):  ದೇಶದಲ್ಲಿ ನಡೆಯುತ್ತಿರುವ ಮತಾಂತರ ಮತ್ತು ಬಾಂಗ್ಲಾದೇಶದಿಂದ ವಲಸೆಗಾರರ ಒಳನುಸುಳುವಿಕೆಯಿಂದ ದೇಶದಲ್ಲಿ ಜನಸಂಖ್ಯಾ ಅಸಮಾನತೆ ಉಂಟಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಪ್ರಧಾನ ಕಾರ‍್ಯದರ್ಶಿ ದತ್ತಾತ್ರೇಯ ಹೊಸಬಾಳೆ ಬುಧವಾರ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ 4 ದಿನದ ಕಾರ‍್ಯಕಾರಿ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು ಮತಾಂತರ ನಿಷೇಧ ಕಾಯ್ದೆಯನ್ನು ಕಠಿಣವಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಆರ್‌ಎಸ್‌ಎಸ್‌ ಮತಾಂತರದ ಕುರಿತಾಗಿ ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲಾಗುವುದು. ಧಾರ್ಮಿಕ ಮತಾಂತರವನ್ನು ತಡೆಗಟ್ಟಲು ಈಗಿರುವ ಕಾನೂನನ್ನು ಕಠಿಣವಾಗಿ ಜಾರಿ ಮಾಡಬೇಕು. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಇದನ್ನು ಜಾರಿ ಮಾಡಲಾಗಿದೆ. ಬಲವಂತವಾಗಿ ಅದರಲ್ಲೂ ಮದುವೆಯ ಮೂಲಕ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

Tap to resize

Latest Videos

ಬಡತನ, ನಿರುದ್ಯೋಗವೆಂಬ ರಾಕ್ಷಸರನ್ನು ಸಂಹರಿಸಬೇಕು: RSS ನಾಯಕ ದತ್ತಾತ್ರೇಯ ಹೊಸಬಾಳೆ

ಜನಸಂಖ್ಯಾ ಅಸಮಾನತೆಗೆ ವಲಸೆಗಾರರ ಒಳನುಸುಳುವಿಕೆ ಮತಾಂತರದ ಬಳಿಕ ಅತಿ ದೊಡ್ಡ ಸವಾಲಾಗಿದೆ. ಬಾಂಗ್ಲಾದೇಶದಿಂದ ಪುರ್ನಿಯಾ ಮತ್ತು ಕತಿಹಾರ್‌ ಸೇರಿದಂತೆ ಉತ್ತರ ಬಿಹಾರದ ಹಲವು ಜಿಲ್ಲೆಗಳು ಮತ್ತು ಇತರ ರಾಜ್ಯಗಳು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
 

click me!