'ಪೊಲೀಸರಿಗೆ ಗನ್ ಕೊಟ್ಟದ್ದು ಶೋಕಿಗಾಗಿ ಅಲ್ಲ'

By Suvarna NewsFirst Published Dec 6, 2019, 4:19 PM IST
Highlights

ಪೊಲೀಸರಿಗೆ ಶೋಕಿ ಮಾಡಲು ಗನ್ ನೀಡಿಲ್ಲ| ಆರೋಪಿಗಳು ಓಡಲು ಯತ್ನಿಸಿದ್ರೆ ಶೂಟ್ ಮಾಡ್ಲಿ| ವೈರಲ್ ಆಯ್ತು ಬಿಜೆಪಿ ಎಂಪಿ ಹೇಳಿಕೆ

ಹೈದರಾಬಾದ್[ಡಿ.06]: 'ಪೊಲೀಸರಿಗೆ ಶೋಕಿ ಮಾಡಲು ಗನ್ ನೀಡಿಲ್ಲ' ಎಂದು ಬಿಜೆಪಿ ಸಂಸದೆ ಮೀನಾಕ್ಷೆ ಲೇಖಿ ಹೇಳಿದ್ದಾರೆ. ಈ ಮೂಲಕ ಹೈದರಾಬಾದ್ ಪಶು ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಹೈದರಾಬಾದ್ ಪೊಲೀಸ್ ತಂಡ ನಡೆಸಿದ ಎನ್‌ಕೌಂಟರ್ ಸಮರ್ಥಿಸಿಕೊಂಡಿದ್ದಾರೆ.

ಸಂಸತ್ತಿನ ಶೂನ್ಯ ವೇಳೆಯಲ್ಲಿ ಹೈದರಾಬಾದ್ ಎನ್‌ಕೌಂಟರ್‌ ಕುರಿತು ಧ್ವನಿ ಎತ್ತಿದ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ 'ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆಂದು ತಿಳಿಯುತ್ತಲೇ ಪೊಲೀಸರು ಅವರನ್ನು ಶೂಟ್ ಮಾಡಬೇಕು. ಇದೇ ಕಾರಣಕ್ಕಾಗಿ ಪೊಲೀಸರಿಗೆ ಗನ್ ನೀಡುವುದೇ ಹೊರತು ಶೋ ಮಾಡಲು ಅಲ್ಲ' ಎಂದಿದ್ದಾರೆ.

'ಅದೇ ಸ್ಥಳ, ಅದೇ ಸಮಯ, ಬೇಟೆಗಾರರೇ ಬೇಟೆಯಾದ್ರು'

ಸದ್ಯ ಲೇಖಿ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇವರು ಸರಿಯಾಗೇ ಹೇಳಿದ್ದಾರೆ ಎಂಬ ಅಭಿಪ್ರಾಯ ಹಲವರದ್ದಾಗಿದೆ.

ಹೈದರಾಬಾದ್ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ ಬಳಿಕ ಪ್ರಕರಣದ ನಾಲ್ವರೂ ಆರೋಪಿಗಳನ್ನು ಪೊಲೀಸರು ಮಹಜರು ನಡೆಸಲು ಶುಕ್ರವಾರ ಬೆಳಗ್ಗಿನ ಜಾವ ಪ್ರಕರಣ ನಡೆದ ಸ್ಥಳಕ್ಕೆ ಕರೆ ತಂದಿದ್ದರು. ಈ ವೇಳೆ ಆರೋಪಿಗಳ ಪೊಲೀಸರ ಕೈಯ್ಯಲ್ಲಿದ್ದ ಪಿಸ್ತೂಲ್ ಕಸಿದು ಪರಾರಿಯಾಗಲು ಯತ್ನಿಸಿದ್ದರು. 'ಒಂದು ವೇಳೆ ಈ ಆರೋಪಿಗಳು ತಪ್ಪಿಸಿಕೊಂಡಿದ್ದರೆ ಬಹುದೊಡ್ಡ ಅಪಾಯ ಎದುರಾಗುತ್ತಿತ್ತು. ಹೀಗಾಗಿ ಬೇರೆ ವಿಧಿ ಇಲ್ಲದೇ ನಾವು ಫೈರಿಂಗ್ ನಡೆಸಿದೆವು. ಈ ಎನ್‌ಕೌಂಟರ್‌ನಲ್ಲಿ ಆರೋಪಿಗಳು ಬಲಿಯಾದರು' ಎಂದಿದ್ದಾರೆ.

ಹೈದರಾಬಾದ್ ಎನ್‌ಕೌಂಟರ್: ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

click me!