ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಹ್ಯಾಕರ್ಸ್ ಕನ್ನ ಹಾಕಿದ ಹಲವು ಘಟನೆಗಳು ವರದಿಯಾಗಿದೆ. ಇದೀಗ ಮೊಬೈಲ್ ಫೋನ್‌ನನ್ನೇ ಹ್ಯಾಕ್ ಮಾಡಲಾಗುತ್ತಿದೆ. ಹೀಗೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಫೋನ್ ಹ್ಯಾಕ್ ಮಾಡಲಾಗಿದೆ. ಬಳಿಕ 4 ಕಾಂಗ್ರೆಸ್ ನಾಯಕರಿಗೆ 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟ ಘಟನೆ ನಡೆದಿದೆ. ಆದರೆ ನಾಯಕರ ಐಡಿಯಾಂದ ಹ್ಯಾಕರ್ಸ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಭೋಪಾಲ್(ಜು.13) ಮೊಬೈಲ್ ಫೋನ್‌ನಿಂದ ವೈಯುಕ್ತಿಟ ಡೇಟಾ ಕದಿಯುವಿಕೆ, ಮಾಹಿತಿ ಸೋರಿಕೆ ಸಮಸ್ಯೆ ಒಂದಾದರೆ ಇದೀಗ ಮೊಬೈಲ್ ಫೋನ್‌ಗಳನ್ನೇ ಹ್ಯಾಕ್ ಮಾಡಲಾಗುತ್ತಿದೆ. ನಿಮ್ಮ ಪೋನ್ ಹ್ಯಾಕ್ ಮಾಡಿ, ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ದೋಚುವ ಕೆಲಸ ಒಂದೆಡೆಯಾದರೆ, ನಿಮ್ಮ ಆಪ್ತರಿಗೆ ಕರೆ ಮಾಡಿ, ಸಂದೇಶ ಕಳುಹಿಸಿ ಹಣ ಪೀಕುವ ಜಾಲ ಸಕ್ರಿಯವಾಗಿದೆ. ಈ ಹ್ಯಾಕರ್ಸ್ ಇದೀಗ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಫೋನ್ ಹ್ಯಾಕ್ ಮಾಡಿದ್ದಾರೆ. ಬಳಿಕ ಕಮಲ್ ನಾಥ್ ಫೋನ್‌ನಿಂದ ನಾಲ್ವರು ಕಾಂಗ್ರೆಸ್ ನಾಯಕರಿಗೆ ಸಂದೇಶ ಕಳುಹಿಸಿ ತಲಾ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅನುಮಾನ ಬಂದ ನಾಯಕ ನಗದು ಹಣಕೊಡುವುದಾಗಿ ಹೇಳಿ ಹ್ಯಾಕರ್ಸ್‌ನ್ನು ಬಲೆಗೆ ಬೀಳಿಸಿದ ರೋಚಕ ಘಟನೆ ನಡೆದಿದೆ.
ಚಾಲಾಕಿ ಹ್ಯಾಕರ್ಸ್ ಕಮಲ್ ನಾಥ್ ಮೊಬೈಲ್ ಫೋನ್ ಹ್ಯಾಕ್ ಮಾಡಿದ್ದಾರೆ. ಬಳಿಕ ಕಮಲ್ ನಾಥ್ ಫೋನ್ ನಂಬರ್‌ನಿಂದ ಕಾಂಗ್ರೆಸ್‌ನ ಶಾಸಕ ಸತೀಶ್ ಸಿಕಾರ್‌ವಾರ್, ಖಜಾಂಚಿ ಅಶೋಕ್ ಸಿಂಗ್, ಇಂದೋರ್ ನಗರ ಕಾಂಗ್ರೆಸ್ ಅಧ್ಯಕ್ಷ ಸುರ್ಜಿತ್ ಸಿಂಗ್ ಹಾಗೂ ಮಾಜಿ ಖಜಾಂಚಿ ಗೋವಿಂದ್ ಗೋಯಲ್‌ಗೆ ಕರೆ ಮಾಡಿದ್ದಾರೆ.
undefined
ಪೊಲೀಸ್ ಇಲಾಖೆಯನ್ನೂ ಬಿಡ್ತಿಲ್ಲ ಹ್ಯಾಕರ್ಸ್; ವಿಜಯನಗರ ಎಸ್ಪಿ ಹೆಸರಲ್ಲಿ ನಕಲಿ ಖಾತೆ , ಹಣಕ್ಕೆ ಬೇಡಿಕೆ!
ಕಾಂಗ್ರೆಸ್ ಖಜಾಂಚಿಯಾಗಿ ಕೆಲಸ ಮಾಡಿದ ಅನುಭವ ಇರುವ ಗೋವಿಂದ್ ಗೋಯೆಲ್‌ಗೆ ಅನುಮಾನ ಬಂದಿದೆ. ಈ ರೀತಿ ಯಾವತ್ತೂ ಕಮಲ್ ನಾಥ್ ಹಣ ಕೇಳಿಲ್ಲ. ಈ ಬಾರಿ ಹೀಗ್ಯಾಕೆ ಮಾಡಿದ್ದಾರೆ ಅನ್ನೋ ಅನುಮಾನ ಬಂದಿದೆ. ಈ ಕುರಿತು ಕಾಂಗ್ರೆಸ್ ಸಮಿತಿಗೆ ಮಾಹಿತಿ ನೀಡಿದಾಗ ಇದು ಹ್ಯಾಕರ್ಸ್ ಕೆಲಸ ಅನ್ನೋ ಅನುಮಾನ ಹೆಚ್ಚಾಗಿದೆ. ಹೀಗಾಗಿ ಗೋವಿಂದ್ ಗೋಯೆಲ್ ಕರೆ ಬಂದಿರುವ ಕಮಲ್ ನಾಥ್ ನಂಬರ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಹ್ಯಾಕರ್ಸ್ ರಿಸೀವ್ ಮಾಡಿದ್ದಾರೆ. ತಮ್ಮ ಬಳಿ ನಗದು ಹಣ ಇದೆ. ತೆರಿಗೆ ಕಾರಣದಿಂದ ಆನ್‌ಲೈನ್ ಮೂಲಕ ನೀಡಲು ಸಾಧ್ಯವಾಗುತ್ತಿಲ್ಲ. ನಗದು ಹಣ ನೀಡುವುದಾಗಿ ಹೇಳಿದ್ದಾರೆ. ತಮ್ಮ ಕಚೇರಿಗೆ ಸೆಕ್ರೆಟರಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.
Cyber Hacking: ಏಮ್ಸ್ ಸರ್ವರ್ ಹ್ಯಾಕಲ್ಲಿ ಚೀನಿ ಹ್ಯಾಕರ್ ಕೈವಾಡ..?
ಹ್ಯಾಕರ್ಸ್ 10 ಲಕ್ಷ ರೂಪಾಯಿ ಹಣಕ್ಕಾಗಿ ಗೋವಿಂದ್ ಗೋಯಲ್ ಕಚೇರಿ ಬಳಿ ಆಗಮಿಸಿದ್ದಾರೆ. ಇದಕ್ಕೂ ಮೊದಲೇ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದ ಗೊಯೆಲ್ ಕಚೇರಿಗೆ ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರು ಹಾಗು ನಾಯಕರನ್ನು ನಿಲ್ಲಿಸಿದ್ದಾರೆ. ಒಂದಿಷ್ಟು ನಗದು ಹಣ ಬ್ಯಾಗ್‌ನಲ್ಲಿ ತುಂಬಿ ಖುದ್ದು ಗೊಯೆಲ್ ನೀಡಲು ಕಚೇರಿಯ ಕಳೆಗೆ ಬಂದಿದ್ದಾರೆ. ಈ ವೇಳೆ ಅಲರ್ಟ್ ಆದ ಕಾರ್ಯಕರ್ತರು ಒಮ್ಮೆಲೇ ದಾಳಿ ಮಾಡಿ ಇಬ್ಬರನ್ನು ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಹ್ಯಾಕರ್ಸ್ ಬಂಧಿಸಿದ್ದಾರೆ. ಇಬ್ಬರು ಗುಜರಾತ್ ಮೂಲದವರಾಗಿದ್ದು, ಹಲವರ ಫೋನ್ ಹ್ಯಾಕ್ ಮಾಡಿ ಈ ರೀತಿ ಹಣ ಪಡೆದಿರುವ ಮಾಹಿತಿ ಬಯಲಾಗಿದೆ. ಸಣ್ಣ ಸಣ್ಣ ಉದ್ಯಮಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಖದೀಮರ ಗ್ಯಾಂಗ್, ಇದೀಗ ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡಿದ್ದಾರೆ.