
ನವದೆಹಲಿ(ಆ.25): ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ಉದ್ಯಮಿ ನೀರವ್ ಮೋದಿ ಲಂಡನ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಇದೀಗ ನೀರವ್ ಮೋದಿ ಪತ್ನಿ ಅಮಿ ಮೋದಿ ವಿರುದ್ಧ ಇಂಟರ್‌ಪೊಲ್ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಿದೆ.
ನೀರವ್ ಮೋದಿಗೆ ಇಡಿ ಮತ್ತೊಂದು ಶಾಕ್, ಫ್ಲಾಟ್, ಫಾರ್ಮ್ ಹೌಸ್ ಜಪ್ತಿ
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಂಬಂಧಿಸಿದಂತೆ ಇಂಟರ್ ಪೋಲ್ ಅಮಿ ಮೋದಿಗೆ ಬಂಧನ ವಾರೆಂಟ್ ಹೊರಡಿಸಿದೆ. ಅಮಿ ಮೋದಿ ಕಳೆದ ವರ್ಷ ನ್ಯೂಯಾರ್ಕ್ ಸೇರಿದಂತೆ ವಿದೇಶದಲ್ಲಿ 2 ಫ್ಲ್ಯಾಟ್ ಖರೀದಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ. 2018ರಲ್ಲಿ ಭಾರತದಿಂದ ನೀರವ್ ಮೋದಿ ಹಾಗೂ ಅಮಿ ಮೋದಿ ವಿದೇಶಕ್ಕೆ ಹಾರಿದ್ದರು. ಇನ್ನು 2019ರಲ್ಲಿ ಆಮಿ ಮೋದಿ ನಿವಾಸ ಖರೀದಿಸಿದ್ದಾರೆ.
ನೀರವ್ 1350 ಕೋಟಿ ರೂ. ವಜ್ರಾಭರಣ ಭಾರತ ವಶಕ್ಕೆ!.
ನೀರವ್ ಮೋದಿ ಹಾಗೂ ಸಂಬಂಧಿ ಮೆಹುಲ್ ಚೋಕ್ಸಿ ಭಾರತದ ಬ್ಯಾಂಕ್‌ಗಳಿಗೆ 13,000 ಕೋಟಿ ರೂಪಾಯಿ ಹೆಚ್ಚು ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಇವರೊಂದಿಗೆ ನೀರವ್ ಮೋದಿ ಪತ್ನಿ ವಿರುದ್ಧ ಅಕ್ರಣ ಹಣ ವರ್ಗಾವಣೆ ಸೇರಿದಂತೆ ಮನಿಲಾಂಡರಿಂಗ್ ಕೇಸ್ ಕೂಡ ದಾಖಲಾಗಿದೆ. ಹೀಗಾಗಿ ಇಂಟರ್‌ಪೊಲ್ ಬಂಧನ ವಾರೆಂಟ್ ಹೊರಡಿಸಿದೆ.
ನೀರವ್ ಮೋದಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. ಆದರೆ ಅಮಿ ಮೋದಿ ಕುರಿತು ಯಾವುದೇ ಮಾಹಿತಿ ಇಲ್ಲ. 2019ರಲ್ಲಿ ನ್ಯೂಯಾರ್ಕ್‌ನಲ್ಲಿ ಕಾಣಿಸಿಕೊಂಡಿದ್ದ ಅಮಿ ಮೋದಿ, ಬಳಿಕ ಪೊಲೀಸರಿಗೆ, ಅಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರ ನಡುವೆ ಇಂಟರ್‌ಪೊಲ್ ಬಂಧನ ವಾರೆಂಟ್ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ