ರೈತ ಸಂಘಟನೆಯಿಂದ ಮೋದಿಗೆ ಚಾಲೆಂಜ್| ಕೃಷಿ ಬಿಲ್ ಹಿಂಪಡೆಯಲು ಆಗ್ರಹ| ರೈತರನ್ನು ದೆಹಲಿಗೆ ಬಿಡದಿದ್ದರೆ, ಮೋದಿಯತನ್ನು ತಮಿಳುನಾಡಿಗೆ ಪ್ರೆವೇಶಿಸಲು ಬಿಡುವುದಿಲ್ಲ ಎಂದ ರೈತ ಸಂಘಟನೆ
ಚೆನ್ನೈ(ಫೆ.07): ದಿನೇ ದಿನೇ ರೈತ ಪ್ರತಿಭಟನೆ ಕಾವು ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ. ಜಗಳ, ಹೊಡೆದಾಟ, ಹಿಂಸಾಚಾರ, ರಾಷ್ಟ್ರ ವಿರೋಧಿ ಚಟುವಟಿಕೆ ಮೊದಲಾದವುಗಳು ಕಂಡು ಬರುತ್ತಿವೆ. ಹೀಗಿರುವಾಗ ಅಧಿಕಾರದಲ್ಲಿರುವವರ ವಿರುದ್ಧ ಕೆಟ್ಟ ಭಾಷಷೆ ಪ್ರಯೋಗವೂ ನಡೆಯುತ್ತಿದೆ. ಆದರೀಗ ರೈತ ಸಂಘಟನೆಯೊಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ಸಾಂವಿಧಾನಿಕ ಪ್ರಜಾಪ್ರಭುತ್ವ ದೇಶದಲ್ಲಿ ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಆಲ್ ಫಾರ್ಮ್ಸ್ ಅಸೋಸಿಯೇಷನ್ ಕೋ ಆರ್ಟಿನೇಷನ್ ಕಮಿಟಿ ಶನಿವಾರ ಹೆಳಿಕೆಯೊಂದನ್ನು ನೀಡುತ್ತಾ ಒಂದು ವೇಳೆ ರೈತರನ್ನು ದೆಹಲಿ ಪ್ರವೇಶಿಸಲು ಬಿಡದಿದ್ದರೆ ಪ್ರಧಾನ ಮಂತ್ರಿಗೂ ತಮಿಳುನಾಡಿಗೆ ಎಂಟ್ರಿ ಕೊಡಲು ಬಿಡುವುದಿಲ್ಲ ಎಂದಿದೆ. ಇನ್ನು ಪ್ರಧಾನಿ ಮೋದಿ ಈ ತಿಂಗಳು ತಮಿಳುನಾಡಿಗೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬುವುದು ಉಲ್ಲೇಖನೀಯ.
undefined
ಮೋದಿಗೆ ಧಮ್ಕಿ ಹಾಕಿದ AFACC ಅಧ್ಯಕ್ಷ
ಇನ್ನು ರೈತರಿಗೆ ದೆಹಲಿ ಪ್ರವೇಶಿಸಲು ಬಿಡದಿದ್ದರೆ ಹಾಗೂ ಪ್ರತಿಭಟನಾ ಸ್ಥಳದಲ್ಲಿ ವಿದ್ಯುತ್, ನೀರು ಪೂರೈಕೆಯಲ್ಲಿ ಕೊಂಚವೂ ಕೊರತೆ ಎದುರಾದರೆ ಮೋದಿಗೂ ಇಲ್ಲಿ ಪ್ರವೇಶವಿಲ್ಲ. ಯಾವಾಗದವರೆಗೆ ಮೋದಿ ರೈತರಿಗೆ ರಾಷ್ಟ್ರ ರಾಜಧಾನಿ ಪ್ರವೇಶಿಸಲು ಬಿಡುವುದಿಲ್ಲವೋ, ಅಲ್ಲಿಯವರೆಗೆ ನಾವೂ ಅವರಿಗೆ ತಮಿಳುನಾಡು ಪ್ರವಾಸ ಮಾಡಲು ಅವಕಾಶ ನೀಡುವುದಿಲ್ಲ ಎಂದು AFACC ಅಧ್ಯಕ್ಷ ತಿಳಿಸಿದ್ದಾರೆ. ಇದೇ ವೇಳೆ ದೆಹಲಿ ಗಡಿಯಲ್ಲಿ ಹಾಕಲಾಗಿರುವ ಮುಳ್ಳಿನ ತಂತಿ, ಬ್ಯಾರಿಕೇಡ್ ಮೊದಲಾದವುಗಳನ್ನು ತೆಗೆಯುವಂತೆಯೂ ಮನವಿ ಮಾಡಿದ್ದಾರೆ.
ರೈತರ ಬದಲು ಉದ್ಯಮಿಗಳೊಂದಿಗೆ ಮೋದಿ
ಕೇಂದ್ರ ಜಾರಿಗೊಳಿಸಿರುವ ಮೂರೂ ಕೃಷಿ ಬಿಲ್‌ಗಳನ್ನು ಹಿಂಪಡೆಯಲು ಆಗ್ರಹಿಸಿರುವ AFACC ಅಧ್ಯಕ್ಷ ಪಾಂಡ್ಯನ್ ಪಿಎಂ ಮೋದಿ ರೈತರಿಗೆ ಸಹಾಯ ಮಾಡುವ ಬದಲು ಉದ್ಯಮಿಗಳಿಗೆ ಸಾಥ್ ನಿಡುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ಉದ್ಯಮಿಗಳು ಅಡೆ ತಡೆ ಇಲ್ಲದೇ ರಾಷ್ಟ್ರ ರಾಜಧಾನಿಯಲ್ಲಿ ತಿರುಗಾಡುತ್ತಿದ್ದಾರೆ. ಆದರೆ ತರೈತರಿಗೆ ಮಾತ್ರ ನಿರ್ಬಂಧ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.