ಪ್ರಧಾನಿ ಮೋದಿ ಜಗತ್ತಿನ ಎಲ್ಲೆಡೆ ಗೌರರ್ವಕ್ಕೆ ಅರ್ಹರು; ಆ ಬಗ್ಗೆ ಹೆಮ್ಮೆ ಇದೆ: ಕಾಂಗ್ರೆಸ್‌ ನಾಯಕನ ಅಚ್ಚರಿಯ ಹೇಳಿಕೆ

By BK AshwinFirst Published Jun 3, 2023, 5:39 PM IST
Highlights

ಸೋನಿಯಾ ಗಾಂಧಿ ಕುಟುಂಬದ ಆಪ್ತ ಹಾಗೂ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಪ್ರಧಾನಿ ಎಲ್ಲೆಡೆ ಗೌರವಕ್ಕೆ ಅರ್ಹರು ಮತ್ತು ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ವಾಷಿಂಗ್ಟನ್ (ಜೂನ್‌ 3, 2023): ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ರಾಜ್ಯ ಪ್ರವಾಸಕ್ಕಾಗಿ ಈ ತಿಂಗಳಲ್ಲಿ ಅಮೆರಿಕಕ್ಕೆ ಪ್ರವಾಸ ಮಾಡಲಿದ್ದಾರೆ. ಈ ಐತಿಹಾಸಿಕ ಪ್ರವಾಸಕ್ಕೆ ಮುನ್ನ, ಕಾಂಗ್ರೆಸ್ ನಾಯಕ ಪ್ರಧಾನಿ ಮೋದಿಯನ್ನು ಹೊಗಳಿದ್ದು, ಅವರು ಜಗತ್ತಿಗೆ ಎಲ್ಲೆಡೆ ಗೌರವಕ್ಕೆ ಅರ್ಹರು, ಆ ಬಗ್ಗೆ ಹೆಮ್ಮೆ ಇದೆ ಎಂದು ಹೇಳುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾರಪ್ಪಾ ಆ ಕಾಂಗ್ರೆಸ್‌ ನಾಯಕ ಅಂತೀರಾ..? ಮುಂದೆ ಓದಿ..

ಸೋನಿಯಾ ಗಾಂಧಿ ಕುಟುಂಬದ ಆಪ್ತ ಹಾಗೂ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಪ್ರಧಾನಿ ಎಲ್ಲೆಡೆ ಗೌರವಕ್ಕೆ ಅರ್ಹರು ಮತ್ತು ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷರಾದ ಸ್ಯಾಮ್‌ ಪಿತ್ರೋಡಾ ಅವರು ಪ್ರಸ್ತುತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೂರು ನಗರಗಳ ಆರು ದಿನಗಳ ಯುಎಸ್ ಪ್ರವಾಸದಲ್ಲಿ ಅವರೊಂದಿಗೆ ಇದ್ದಾರೆ.

ಇದನ್ನು ಓದಿ: ಮೋದಿ ರ‍್ಯಾಲಿ ವೇಳೆ ಬಾಂಬ್ ಸ್ಫೋಟ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ NIA ರೇಡ್‌

ಒಂದುಕಡೆ ರಾಹುಲ್‌ ಗಾಂಧಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಭಾರತದ ಪರ್ಯಾಯ ದೃಷ್ಟಿಕೋನವನ್ನು ಕೇಂದ್ರೀಕರಿಸಿದ್ದಾರೆ ಮತ್ತು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಹೆಚ್ಚು ಟೀಕಿಸಿದ್ದಾರೆ. ಅದರೂ, ವಯನಾಡಿನ ಮಾಜಿ ಸಂಸದ ಉಕ್ರೇನ್ ಮತ್ತು ಚೀನಾದಲ್ಲಿನ ಯುದ್ಧದಂತಹ ವಿಷಯಗಳ ಬಗ್ಗೆ ಆಡಳಿತ ಪಕ್ಷದ ವಿದೇಶಾಂಗ ನೀತಿಯನ್ನು ಬೆಂಬಲಿಸಿದ್ದಾರೆ.

ಇನ್ನು, ರಾಹುಲ್‌ ಗಾಂಧಿ ಬಗ್ಗೆಯೂ ಮಾತನಾಡಿದ ಸ್ಯಾಮ್‌ ಪಿತ್ರೋಡಾ,  ಅವರಿಗೆ (ಗಾಂಧಿ) ನಾವು (ಭಾರತ) ಯಾವ ವಿಚಾರದಲ್ಲಿ ಸರಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿದಿದೆ, ಮತ್ತು ನೀವು ನೋಡಿ, ಯಾರೋ ನನಗೆ ಹೇಳಿದರು, ಭಾರತದ ಪ್ರಧಾನಿಗೆ ಸಾಕಷ್ಟು ಸ್ವಾಗತ ಸಿಗುತ್ತಿದೆ ಎಂದು. ಮತ್ತು ನಾನು ಈ ಬಗ್ಗೆ ಸಂತೋಷವಾಗಿದ್ದೇನೆ ಎಂದು ಹೇಳಿದೆ. ಏಕೆಂದರೆ, ಅವರು ನನ್ನ ಪ್ರಧಾನಿಯೂ ಆಗಿದ್ದಾರೆ. ಆದರೆ ನಾವು ಈ ಬಗ್ಗೆ ತಪ್ಪು ತಿಳಿಯಬಾರದು. ಅವರು ಭಾರತದ ಪ್ರಧಾನಿಯಾಗಿರುವುದರಿಂದ ಅವರಿಗೆ ಸ್ವಾಗತ ಸಿಗುತ್ತಿದೆ. ಮತ್ತು ಅವರು ಬಿಜೆಪಿಯ ಪ್ರಧಾನಿ ಎಂಬ ಕಾರಣದಿಂದಲ್ಲ. ಈ ಎರಡು ವಿಷಯಗಳನ್ನು ಪ್ರತ್ಯೇಕಿಸಿ’’ ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನವೊಂದರಲ್ಲಿ ಸ್ಯಾಮ್ ಪಿತ್ರೋಡಾ ಹೇಳಿದರು.  

ಇದನ್ನೂ ಓದಿ: ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ನನ್ನ ಗುರಿ, ಬಡವರ ಹಾಗೂ ದೇಶದ ಘನತೆ ಎತ್ತಿಹಿಡಿಯಲು ಶ್ರಮ: ಮೋದಿ

"1.5 ಶತಕೋಟಿ ಜನರಿರುವ ರಾಷ್ಟ್ರದ ಪ್ರಧಾನ ಮಂತ್ರಿ ಎಲ್ಲೆಡೆ ಗೌರವಕ್ಕೆ ಅರ್ಹರು. ಮತ್ತು ನಾನು ಅದರ ಬಗ್ಗೆ ಹೆಮ್ಮೆಪಡುತ್ತೇನೆ. ನಾನು ಆ ಬಗ್ಗೆ ನಕಾರಾತ್ಮಕವಾಗಿಲ್ಲ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್‌ ಪಿತ್ರೋಡಾ ಹೇಳಿದರು. ಜೂನ್ 22 ರಂದು ಯುಎಸ್‌ಗೆ ಅಧಿಕೃತ ರಾಜ್ಯ ಭೇಟಿಗಾಗಿ ಅಧ್ಯಕ್ಷ ಜೋ ಬೈಡೆನ್‌ ಪ್ರಧಾನಿ ಮೋದಿಯವರಿಗೆ ಆತಿಥ್ಯ ನೀಡಲಿದ್ದಾರೆ. ಈ ವೇಳೆ ಶ್ವೇತ ಭವನದಲ್ಲಿ ಅಧಿಕೃತ ಭೋಜನವವೂ ಸಹ ಒಳಗೊಂಡಿದೆ. 

"ಆದರೆ ನೀವು ನೋಡಿ, ಅವರು ಪ್ರತಿ ಸಂದೇಶವನ್ನು ತಿರುಚುತ್ತಾರೆ, ಅವರು ಎಲ್ಲವನ್ನೂ ಗೊಂದಲಗೊಳಿಸುತ್ತಾರೆ. ನಂತರ ಅವರು ವೈಯಕ್ತಿಕ ದಾಳಿಗೆ ಪರಿವರ್ತಿಸುತ್ತಾರೆ. ಅದು ಪ್ರಜಾಪ್ರಭುತ್ವವಲ್ಲ. ಇತರ ಮನುಷ್ಯರ ಬಗ್ಗೆ ಸ್ವಲ್ಪ ಗೌರವವಿರಲಿ. ನೀವು 50 ಜನರನ್ನು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳುಗಳೊಂದಿಗೆ ಬೆನ್ನಟ್ಟಲು ಕಳುಹಿಸುತ್ತೀರಿ." ಎಂದೂ ಅವರು ಹೇಳಿದರು. ರಾಹುಲ್ ಗಾಂಧಿ ಅವರ ಪ್ರಸ್ತುತ ಪ್ರವಾಸವು ಅಮೆರಿಕದಲ್ಲಿ ಭರವಸೆ ಮತ್ತು ಉತ್ಸಾಹವನ್ನು ಉಂಟುಮಾಡಿದೆ ಎಂದೂ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಇದನ್ನೂ ಓದಿ: ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ರಚನೆಗೆ ಮೋದಿ ಸರ್ಕಾರದ ಮಹತ್ವದ ಕ್ರಮ: 100 ಕಿರಿಯ ಅಧಿಕಾರಿಗಳಿಗೆ ಅಂತರ ಸೇವಾ ಪೋಸ್ಟಿಂಗ್‌

click me!