ನನಗೆ ಮೋದಿ ವಿರುದ್ಧ ಏನೂ ಇಲ್ಲ, ರಾಹುಲ್ ಆಪ್ತ ಸ್ಯಾಮ್ ಪಿತ್ರೋಡಾ ಮಾತಿನಿಂದ ಕಾಂಗ್ರೆಸ್‌ನಲ್ಲಿ ಸಂಚಲನ

Published : Nov 12, 2026, 05:18 PM IST
Sam Pitroda

ಸಾರಾಂಶ

ರಾಹುಲ್ ಗಾಂಧಿ ಆಪ್ತ, ಕಾಂಗ್ರೆಸ್ ಓವರ್‌ಸಿಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ, ಪ್ರಧಾನಿ ಮೋದಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಮೋದಿ ಕರಿಣ ಪರಿಶ್ರಮ, ಆತ್ಮೀಯರು , ಪ್ರೀತಿಯ ವ್ಯಕ್ತಿತ್ವ ಎಂದೆಲ್ಲಾ ಹೊಗಳಿದ್ದಾರೆ. ಇದೇ ವೇಳೆ ಮೋದಿ ಜೊತೆ ಡಿನ್ನರ್ ಕುರಿತು ಮಾತನಾಡಿದ್ದಾರೆ. ಸ್ಯಾಮ್ ಮಾತುಗಳು ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ನವೆಹಲಿ (ನ.12) ಗಾಂಧಿ ಕುಟುಂಬದ ಆಪ್ತರು, ನಿಷ್ಠಾಂವತ ಕೆಲವೇ ಕೆಲವು ನಾಯಕರಲ್ಲಿ ಕಾಂಗ್ರೆಸ್ ಓವರ್‌ಸೀಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಮುಂಚೂಣಿಯಲ್ಲಿದ್ದಾರೆ. ರಾಹುಲ್ ಗಾಂಧಿಯ ಆಪ್ತರಾಗಿರುವ ಸ್ಯಾಮ್ ಸಲಹೆಗಳು ಕಾಂಗ್ರೆಸ್‌ನಲ್ಲಿ ಪ್ರಮುಖವಾಗಿದೆ. ಇದೇ ಸ್ಯಾಮ್ ಪಿತ್ರೋಡಾ ಪ್ರಧಾನಿ ಮೋದಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಇದರ ಬೆನ್ನಲ್ಲೇ ಪಿತ್ರೋಡಾ ಹಾಗೂ ಕುಟುಂಬಕ್ಕೆ ಪ್ರಧಾನಿ ಮೋದಿ ದೀಪಾವಳಿ ಶುಭಾಶಯ ಕೋರಿದ್ದಾರೆ.

ದಯಾಳು ಹಾಗೂ ಪ್ರೀತಿಯುಳ್ಳವರು

ಪ್ರಧಾನಿ ನರೇಂದ್ರ ಮೋದಿ ಕುರಿತು ಪ್ರತಿಕ್ರಿಯೆ ನೀಡಿದ ಸ್ಯಾಮ್ ಪಿತ್ರೋಡಾ, ಮೋದಿ ನನ್ನ ಗುಜರಾತಿ ಸ್ನೇಹಿತ ಎಂದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಒಬ್ಬ ವ್ಯಕ್ತಿಯಾಗಿ ಗೌರವಿಸುತ್ತೇನೆ. ನಾನು ಮತ್ತು ನನ್ನ ಪತ್ನಿ ಅವರನ್ನು ಭೇಟಿಯಾಗಿದ್ದೇವೆ. ವೈಯಕ್ತಿಕ ಮಟ್ಟದಲ್ಲಿ ಅವರು ತುಂಬಾ ಆತ್ಮೀಯರು, ದಯಾಳು, ಪ್ರೀತಿಯುಳ್ಳವರಾಗಿದ್ದಾರೆ. ಅತೀವ ಕಾಳಜಿ ವಹಿಸುವಹಿಸುತ್ತಾರೆ. ಸಹಜವಾಗಿ, ಅವರು ಉತ್ತಮ ವಾಗ್ಮಿ ಮತ್ತು ಕಠಿಣ ಪರಿಶ್ರಮಿ. ನಮ್ಮ ನಡುವೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಪಿತ್ರೋಡಾ ಹೇಳಿದ್ದಾರೆ.

ಮೋದಿ ವಿರುದ್ದ ನನಗೆ ಏನೂ ಇಲ್ಲ

ಬಿಜೆಪಿ, ಪ್ರಧಾನಿ ಮೋದಿ ಆಡಳಿತ ಸೇರಿದಂತೆ ಹಲವು ವಿಚಾರಗಳಲ್ಲಿ ಸ್ಯಾಮ್ ಪಿತ್ರೋಡಾ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಟೀಕಿಸಿದ್ದಾರೆ. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹಾಗೂ ವೈಯುಕ್ತಿಕತೆ ಕುರಿತು ಸ್ಯಾಮ್ ಪಿತ್ರೋಡಾ ವಿವರಣೆ ನೀಡಿದ್ದಾರೆ. ಗುಜರಾತಿ ನಾಯಕನಾಗಿ, ಸ್ನೇಹಿತನಾಗಿ ಮತ್ತು ಹಿತೈಷಿಯಾಗಿ ನನಗೆ ಮೋದಿ ಅವರ ವಿರುದ್ಧ ಏನೂ ಇಲ್ಲ. ನಾನು ಗುಜರಾತ್‌ನಲ್ಲಿರುವ ಅವರ ಮನೆಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಆದರೆ ಜಗತ್ತನ್ನು ನೋಡುವ ಅವರ ದೃಷ್ಟಿಕೋನ ಮತ್ತು ಅವರ ಸಿದ್ಧಾಂತದ ಬಗ್ಗೆ ನನಗೆ ಭಿನ್ನಾಭಿಪ್ರಾಯಗಳಿರಬಹುದು. ಅದು ವ್ಯಕ್ತಿಯ ವಿರುದ್ಧವಲ್ಲ, ಬದಲಾಗಿ ಸಿದ್ಧಾಂತದ ವಿರುದ್ಧವಾಗಿದೆ. ಇವೆರಡೂ ಪ್ರತ್ಯೇಕ ವಿಷಯಗಳು. ನಾನು ಮೋದಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಬಹುದು ಮತ್ತು ಅದೇ ಸಮಯದಲ್ಲಿ ಅವರೊಂದಿಗೆ ಕುಳಿತು ಊಟ (Dinner) ಮಾಡಿ, ನಗಬಲ್ಲೆ" ಎಂದು ತಿಳಿಸಿದ್ದಾರೆ.

ಮೋದಿಯಿಂದ ದೀಪಾವಳಿ ಶುಭಾಶಯ

ಸ್ಯಾಮ್ ಪಿತ್ರೋಡಾ ಮಾತುಗಳು ಭಾರಿ ವೈರಲ್ ಆಗಿದೆ. ರಾಹುಲ್ ಗಾಂಧಿ ಆಪ್ತರಾಗಿರುವ ಸ್ಯಾಮ್ ಪಿತ್ರೋಡಾ ಮಾತುಗಳು ಕಾಂಗ್ರೆಸ್‌ನಲ್ಲೇ ಸಂಚಲನ ಸೃಷ್ಟಿಸಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹಲವು ರೀತಿಯಲ್ಲಿ ಮೋದಿ ವಿರುದ್ದ ಹರಿಹಾಯುತ್ತಲೇ ಇದ್ದಾರೆ. ಪ್ರಮುಖವಾಗಿ ಮೋದಿ ಕಣ್ಣಲ್ಲಿ ಕಣ್ಣಿಟ್ಟು ನೋಡಲ್ಲ, ಅವರು ಹೇಡಿ ಎಂದೆಲ್ಲಾ ಆರೋಪಿಸಿದ್ದಾರೆ. ಆದರೆ ಸ್ಯಾಮ್ ಪಿತ್ರೋಡಾ ಮಾತುಗಳು ಇದಕ್ಕೆ ವಿರುದ್ದವಾಗಿದೆ. ಪಿತ್ರೋಡಾ ಮಾತುಗಳಿಗೆ ಮೋದಿ ಪ್ರತಿಕ್ರಿಯಿಸಿದ್ದಾರೆ. ಸ್ಯಾಮ್ ಭಾಯ್ ಮತ್ತು ಅಂಜನಾ ಬೆನ್ ಅವರಿಗೆ ದೀಪಾವಳಿ ಹಾಗೂ ಗುಜರಾತಿ ನೂತನ ವರ್ಷದ ಅಭಿನಂದನೆಗಳು. ಮುಂಬರುವ ವರ್ಷವು ಸಂತೋಷ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇನೆ. ಜೈ ಜಗನ್ನಾಥ್ ಎಂದು ಮೋದಿ ಶುಭಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ಟ್ರಿಲಿಯನ್ ಡಾಲರ್ ಸಾಮ್ರಾಜ್ಯ ಆಳುತ್ತಿರುವ ಭಾರತೀಯರು: ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಅಗ್ರಸ್ಥಾನ; ಕರ್ನಾಟಕದ 7 ಮಂದಿಗೂ ಸ್ಥಾನ!
ನೀವು ಸಿಗರೆಟ್​ ಪ್ರಿಯರಾ? ಹಾಗಿದ್ರೆ ಮತ್ತಷ್ಟು ಸುಡಲಿದೆ ಜೇಬು- 135 ರೂ. ಏರಿಸಿದ ITC- ಡಿಟೇಲ್ಸ್​ ಇಲ್ಲಿದೆ